ಗಾಂಜಾ ಮಾರಾಟ ಯತ್ನ ಓರ್ವ ಬಂಧನ 

ಮಣಿಪಾಲ: ಮಣಿಪಾಲದ ವಿದ್ಯಾರತ್ನ ನಗರ ಅಪಾರ್ಟ್ಮೆಂಟ್ ಒಂದರ ಸಮೀಪದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತಿದ್ದ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ. ಸಾಸ್ತಾನ, ಗುಂಡ್ಮಿಯ ಹದ್ದಿನಬೆಟ್ಟು ನಿವಾಸಿ ಶ್ರೀನಾಥ್ (28). ಬಂಧಿತ ಆರೋಪಿ. ಬಂಧಿತನಿಂದ 50 ಸಾವಿರ ಮೌಲ್ಯದ ಎರಡು ಕೇಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸೆನ್ ಅಪರಾಧ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಗ್ಯಾಂಗ್ ರೇಪ್ ಪ್ರಕರಣ; ವಿದ್ಯಾರ್ಥಿನಿಗೆ ಮಾನಸಿಕ ಧೈರ್ಯ ತುಂಬಿದ್ದೇವೆ: ಶ್ಯಾಮಲಾ‌ ಕುಂದರ್

ಮಂಗಳೂರು: ದ.ಕ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ವಿಚಾರ ವಿದ್ಯಾರ್ಥಿನಿ ಸ್ನೇಹಿತರ ಜೊತೆ ವಿಶ್ವಾಸದಿಂದ ಹೋಗಿದ್ದ ಸಂದರ್ಭ ಘಟನೆ ನಡೆದಿದೆ. ಸದ್ಯ ವಿದ್ಯಾರ್ಥಿನಿಗೆ ಮಾನಸಿಕವಾಗಿ ಧೈರ್ಯ ತುಂಬಿದ್ದೇವೆ ಎಂದು‌ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದರು.ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ಮುಂದೊಂದು ದಿನ ಆಕೆಯ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ವಿಶ್ವಾಸ ನಮಗೆ ಇದೆ. ವಿದ್ಯಾರ್ಥಿನಿ ಶಿಕ್ಷಣವನ್ನು ಬೇರೆ ಜಿಲ್ಲೆಯಲ್ಲಿ ಮುಂದುವರಿಸಲು ಒಪ್ಪಿಕೊಂಡಿದ್ದಾಳೆ. ಆಕೆಯ ಕುಟುಂಬಕ್ಕೆ 4.25 ಲಕ್ಷ ರೂ. […]

ಉಡುಪಿ:ಚಾಲಕನ ನಿಯಂತ್ರಣ ತಪ್ಪಿ ಹೊಟೇಲ್ಗೆ ನುಗ್ಗಿದ ಬಸ್

ಉಡುಪಿ: ಕಾರೊಂದು ಅಡ್ಡ ಬಂದ ಪರಿಣಾಮ‌ ತಪ್ಪಿಸಲು ಮುಂದಾದಾಗ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ವೊಂದು ರಸ್ತೆ ಪಕ್ಕದಮಿಲ್ಕ್‌ ಬೂತ್‌ ಹಾಗೂ ಹೋಟೆಲ್‌ಗೆ ನುಗ್ಗಿದ ಘಟನೆ ಸೋಮವಾರ ಬೆಳಿಗ್ಗೆ ಕಡಿಯಾಳಿಯಲ್ಲಿ ಸಂಭವಿಸಿದೆ.ಕಾರ್ಕಳದಿಂದ ಉಡುಪಿ ಕಡೆ ಬರುತ್ತಿದ್ದ ಬಸ್ ಕಾರಿಗೆ ಡಿಕ್ಕಿಹೊಡೆಯುವುದನ್ನು ತಪ್ಪಿಸಲು ಬಸ್‌ ಚಾಲಕ ಏಕಾಏಕಿಯಾಗಿ ಬ್ರೇಕ್‌ ಹಾಕಿದ್ದರಿಂದ ಬಸ್‌ ನಿಯಂತ್ರಣವನ್ನು ಕಳೆದುಕೊಂಡು ರಸ್ತೆ ಪಕ್ಕದ ಮಾಂಸಾಹಾರಿ ಹೋಟೆಲ್‌ ಮತ್ತು ಮಿಲ್ಕ್‌ ಬೂತಿಗೆ ನುಗ್ಗಿದೆ ಎನ್ನಲಾಗಿದೆ.  ಘಟನೆ ಸಂಬಂಧ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರು ಅಪಾಯದಿಂದ […]

ಬಹರೈನ್ ಕನ್ನಡ ಭವನ ನಿರ್ಮಾಣ ಕಾರ್ಯ‌ ವರ್ಷಾಂತ್ಯದೊಳಗೆ ಪೂರ್ಣ: ಪ್ರದೀಪ್ ಶೆಟ್ಟಿ

ಉಡುಪಿ: ಬಹರೈನ್‌ನಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಭವನ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಕರ್ನಾಟಕ ಸರ್ಕಾರದ ಅನುದಾನದಿಂದ ವಿದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ ಕನ್ನಡ ಭವನ ಇದಾಗಿದೆ ಎಂದು ಬಹರೈನ್‌ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್‌ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ‌ ತಿಳಿಸಿದರು.ಕಳೆದ ನವೆಂಬರ್‌ ತಿಂಗಳಿನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು  ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ್ದರು. ಸದ್ಯ ಭವನದ ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದೆ. ೨೦೦೮––೦೯ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಬಹರೈನ್‌ಗೆ […]

ಪುತ್ತೂರು ಗ್ಯಾಂಗ್ ರೇಪ್ ಪ್ರಕರಣ ಖಂಡಿಸಿ ಪ್ರತಿಭಟನೆ

ಮಂಗಳೂರು: ಪುತ್ತೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು‌. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ಶಂಕುತಳಾ ಶೆಟ್ಟಿ, ಜಿಲ್ಲೆಯಲ್ಲಿ ನಡೆದ ಇತರ ಪ್ರಕರಣಗಳಲ್ಲಿ ಕಾಂಗ್ರೆಸ್ ನ್ನು ಟೀಕೆ ಮಾಡುವ ಶೋಭಾ ಕರಂದ್ಲಾಜೆ ಅವರು, ತಮ್ಮದೇ ಹುಟ್ಟೂರಾದ ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಕುರಿತು ಯಾಕೆ ಮೌನ ವಹಿಸಿದ್ದಾರೆ. ಅಲ್ಲದೇ ಜಿಲ್ಲೆಯ ಸಂಸದರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಒಂದು ವೇಳೆ ಇದೇ […]