ಮಂಗಳೂರು: ಇವಿಎಂ ವಿರೋಧಿಸಿ‌ ಮಹಿಳಾ ಕಾಂಗ್ರೆಸ್ ನಿಂದ‌ ಪ್ರತಿಭಟನೆ

ಮಂಗಳೂರು: ಇವಿಎಂ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ಅಂಚೆ ಕಚೇರಿಯ ಮುಂಭಾಗದಲ್ಲಿ ಬುಧವಾರ ಮೌನ ಪ್ರತಿಭಟನೆ ಹಾಗೂ ಅಂಚೆ ಪತ್ರ ಚಳವಳಿ ನಡೆಯಿತು. ಇವಿಎಂ ಅವ್ಯವಸ್ಥೆಯ ಆಗರವಾಗಿದೆ. ಇವಿಎಂ ಯಂತ್ರ ಹ್ಯಾಕ್ ಮಾಡಿ ತಮಗೆ ಬೇಕಾದ ಅಭ್ಯರ್ಥಿಯನ್ನು ಗೆಲ್ಲಿಸಬಹುದಾಗಿದೆ. ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇವಿಎಂ ತೊಲಗಬೇಕು ಮತ್ತು ಮತಪತ್ರ ಮತ್ತೆ ಜಾರಿಗೆ ಬರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯ ಅಂಗವಾಗಿ ಕರ್ನಾಟಕದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚು […]

ಗುಣಮಟ್ಟದ ಹೂಡಿಕೆ‌ ಮಾಡದಿದ್ದರೆ ಆರ್ಥಿಕ ನಷ್ಟ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಪ್ರಸ್ತುತ ಹೂಡಿಕೆದಾರರನ್ನು ಜಾಗೃತಿ ಮಾಡಬೇಕಾದ ಅವಶ್ಯಕತೆ ಇದೆ. ಹೂಡಿಕೆದಾರ ಜಾಗೃತನಾಗಿ ಗುಣಮಟ್ಟದ ಹೂಡಿಕೆ ಮಾಡದೇ ಹೋದರೆ ಸಮಾಜಕ್ಕೆ ಸಮಸ್ಯೆಯ ಜತೆಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಹೂಡಿಕೆಯಲ್ಲಿ ಗುಣಮಟ್ಟ, ಜಾಗೃತಿ, ಅಂಕಿಅಂಶ ಅಗತ್ಯ. ಆಸೆಯ ಚೌಕಟ್ಟು ಮೀರಿ ಹೋಗಬಾರದು ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಉಡುಪಿ ಶಾಖೆ ವತಿಯಿಂದ ನಗರದ ಡಯಾನಾ ಹೋಟೆಲ್‌ನ ಸಭಾಂಗಣದಲ್ಲಿ ಬುಧವಾರ ನಡೆದ ಹೂಡಿಕೆದಾರರ ಜಾಗೃತಿ ಸಮಾವೇಶ ಉದ್ಘಾಟಿಸಿ […]

ರಸ್ತೆ ಸುರಕ್ಷತೆ ಬಗ್ಗೆ ಪ್ರತೀ ತಿಂಗಳು ಸಭೆ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 130 ಅಪಘಾತಗಳು ಸಂಭವಿಸಿದ್ದು, ಜಿಲ್ಲೆಯಲ್ಲಿ ಅಪಘಾತಗಳ ಪ್ರಮಾಣವನ್ನು ತಗ್ಗಿಸುವ ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮತ್ತು ಈ ಕಾರ್ಯಕ್ರಮಗಳ ಪ್ರಗತಿ ಕುರಿತು ಪ್ರತೀ ತಿಂಗಳು ಸಭೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ನೀಡಿದರು. ಅವರು ಬುದವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಅಪಘಾತಗಳ […]

ಹಿರಿಯಡಕ: ಮಲೇರಿಯಾ ವಿರೋಧಿ ಮಾಸಾಚರಣೆ

ಉಡುಪಿ: ಇತ್ತೀಚೆಗೆ ಮಲೇರಿಯಾ ರೋಗಗಳು ಕಡಿಮೆ ಯಾಗುತ್ತಿದೆ, ಜನರಿಗೆ ಇದರ ಬಗ್ಗೆ ತಿಳುವಳಿಕೆ ಬಂದಿದೆ, ಇಂತಹ ಕಾರ್ಯಕ್ರಮ ಮಾಡುವಲ್ಲಿ ನಾವು ಯಾವಾಗಲು ಸಕ್ರಿಯವಾಗಿ ಪಾಲ್ಗೊಳ್ಳತ್ತೇವೆಂದು ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ಕೇಲ್ಕರ್ ತಿಳಿಸಿದರು. ಅವರು ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡ್ಕ ಹಾಗೂ ಲಯನ್ಸ್ ಕ್ಲಬ್ ಹಿರಿಯಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಮಲೇರಿಯ ವಿರೋಧಿ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ವಿಶ್ವನಾಥ […]

ಸಸ್ಯೋತ್ಸವವಾಯ್ತು ಮಗುವಿನ ನಾಮಕರಣೋತ್ಸವ: ಮಾದರಿಯಾಗಲಿ ಈ ದಂಪತಿಗಳ ಪರಿಸರ ಪ್ರೀತಿ

ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಸಂಕಲ್ಪವಾಗಬೇಕು ಎಂಬ ಉದ್ದೇಶದಿಂದ ಸಸಿ ವಿತರಣೆ ಮಾಡ್ತೇವೆ ಸಸಿ ನೆಟ್ಟು ಪೋಷಿಸೋಣ ಬನ್ನಿ, ಎಂದು ಕರೆದರೆ ನಮ್ಮಲ್ಲಿ ಮೂಗು ಮುರಿಯುವವರೇ ಹೆಚ್ಚು , ಆದರೆ ನಮ್ಮೂರಲ್ಲಿ ಮನೆಗಳಲ್ಲಿ ನಡೆಯುವ ಸಂಭ್ರಮಗಳ‌ ನಡುವೆಯೇ ಇಂಥಹ ಸಂಕಲ್ಪಗಳಿಗೂ ಅವಕಾಶ ನೀಡಿದರೆ ಅದು ಹೆಚ್ಚು ಪರಿಣಾಮಕಾರಿಯೂ ಆಗುತ್ತದೆ. ಸಂಭ್ರಮದ ನಡುವೆಯೇ ಸಂಕಲ್ಪವನ್ನು ತೊಡುವ ಒಂದು ವಿಶಿಷ್ಟ ಕಾರ್ಯಕ್ರಮ ಬುಧವಾರ ಮಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಪ್ರಸಿದ್ಧ ಆಗಮ ವಿದ್ವಾಂಸ ಜ್ಯೋತಿಷಿ ಮಟ್ಟು ಪ್ರವೀಣ ಹಾಗೂ ಹರಿಣಿ ತಂತ್ರಿಗಳು […]