ಹಿರಿಯಡಕ: ಮಲೇರಿಯಾ ವಿರೋಧಿ ಮಾಸಾಚರಣೆ

ಉಡುಪಿ: ಇತ್ತೀಚೆಗೆ ಮಲೇರಿಯಾ ರೋಗಗಳು ಕಡಿಮೆ ಯಾಗುತ್ತಿದೆ, ಜನರಿಗೆ ಇದರ ಬಗ್ಗೆ ತಿಳುವಳಿಕೆ ಬಂದಿದೆ, ಇಂತಹ ಕಾರ್ಯಕ್ರಮ ಮಾಡುವಲ್ಲಿ ನಾವು ಯಾವಾಗಲು ಸಕ್ರಿಯವಾಗಿ ಪಾಲ್ಗೊಳ್ಳತ್ತೇವೆಂದು ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಿಕಾ ಕೇಲ್ಕರ್ ತಿಳಿಸಿದರು.
ಅವರು ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡ್ಕ ಹಾಗೂ ಲಯನ್ಸ್ ಕ್ಲಬ್ ಹಿರಿಯಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಮಲೇರಿಯ ವಿರೋಧಿ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ವಿಶ್ವನಾಥ ಶೆಟ್ಟಿ, ಲಾರ್ವಹಾರಿ ಮೀನುಗಳನ್ನು ಲಾರ್ವ ಇರುವ ತಾತ್ಕಾಲಿಕ ನೀರಿನ ತಾಣಕ್ಕೆ ಬಿಡುವ ಮೂಲಕ ನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಲೇರಿಯಾ ತಡೆಗಟ್ಟುವಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿರುತ್ತದೆ  ಎಂದು ತಿಳಿಸಿದರು.
ಲಾರ್ವಗಳ ನಿಯಂತ್ರಣದಲ್ಲಿ ಪ್ರಮುಖ ವಿಧವಾದ ಜೈವಿಕ ವಿಧಾನದ (ಲಾರ್ವಹಾರಿ ಮೀನುಗಳಾದ ಗಫ್ಫಿ ಮತ್ತು ಗಮಬೂಸಿಯ ಮೀನುಗಳನ್ನು ತಾತ್ಕಾಲಿಕ ನೀರಿನ ತಾಣಗಳಿಗೆ ಬಿಡಿವುದು) ಬಗ್ಗೆ ಪ್ರಾತ್ಯಕ್ಷಿತ ವಾಗಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯಡ್ಕ ಲಯನ್ಸ ಕ್ಲಬ್ ಅಧ್ಯಕ್ಷ ಲಯನ್ ಮೋಹನ್‍ದಾಸ್ ಆಚಾರ್, ಕಾರ್ಯಕ್ರಮಗಳಿಗೆ ನಮ್ಮ ಸಹಾಯ ಹಸ್ತ ಸದಾ ಇರುತ್ತದೆಂದು ತಿಳಿಸಿದರು.
ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತ್ಯ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಹಾಗೂ ಇಲಾಖಾ ಸಿಬ್ಬಂದಿಯವರು ಭಾಗವಹಿಸಿದ್ದರು.
ಮಧು ಕೆ.ಎನ್. ಸ್ವಾಗತಿಸಿದರು, ವಿಜಯಬಾಯಿ ಕೆ ನಿರೂಪಿಸಿ, ವಂದಿಸಿದರು.