ವಿಕಲ ಚೇತನರಿಗೆ ಬಂದಿದೆ ವಿಶಿಷ್ಟ ಗುರುತಿನ ಚೀಟಿ:
ಉಡುಪಿ : ಭಾರತ ಸರ್ಕಾರದ ವಿಶಿಷ್ಟ ಗುರುತಿನ ಚೀಟಿ ಯೋಜನೆಯು ವಿಕಲಚೇತರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸಲಾಗುವ ವೈದ್ಯಕೀಯ ಪ್ರಮಾಣ ಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆಯಾಗಿದ್ದು, ಇದರಲ್ಲಿ ವಿಕಲಚೇತನ ವ್ಯಕ್ತಿಯ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು ಪ್ರಮಾಣವನ್ನು ನಮೂದಿಸಲಾಗಿರುತ್ತದೆ. ಈ ವಿಶಿಷ್ಟ ಗುರುತಿನ ಚೀಟಿ ಯೋಜನೆಯು ದೇಶದ ವಿಕಲಚೇತನರ ಅಂಕಿ ಸಂಖ್ಯೆಗಳ ಮಾಹಿತಿಯನ್ನು ನೀಡುವುದಲ್ಲದೇ ಈ ಯೋಜನೆಯ ಅನುಷ್ಠಾನದ ಉದ್ದೇಶವು ಸರ್ಕಾರದ ಸೌಲಭ್ಯಗಳು ಪರಿಣಾಮಕಾರಿಯಾಗಿ ವಿಕಲಚೇತನರಿಗೆ ತಲುಪುವಂತೆ ಮಾಡುವುದಾಗಿದೆ. ಈ […]
ಕುಂದಾಪುರ :ಜೂ. 25 ರಂದು ಉದ್ಯೋಗ ಮೇಳ
ಉಡುಪಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ಜಿಲ್ಲೆ ಮಣಿಪಾಲ, ಯುವ ಉದ್ಯೋಗಾಕಾಂಕ್ಷಿಗಳ ಸೇವಾ ಕೇಂದ್ರ(ಯಸ್ ಕೇಂದ್ರ) ಹಾಗೂ ಶ್ರೀ ಕಾಳಾವರ ವರದರಾಜ ಎಮ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ವತಿಯಿಂದ ಜೂನ್ 24 ರಂದು ಕುಂದಾಪುರ ತಾಲೂಕಿನ ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಮ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಉದ್ಯಮಶೀಲತಾ ಕೌಶಲ್ಯ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ” ಇದರಲ್ಲಿ ಸಂದರ್ಶನ ಮತ್ತು ಸಂವಹನ ಕಲೆ ವ್ಯಕ್ತಿತ್ವ ಬೆಳವಣಿಗೆ ಬಗ್ಗೆ […]
ಸಾಲಿಗ್ರಾಮ ಪ.ಪಂ ವಿವಿಧ ಯೋಜನೆ- ಅರ್ಜಿ ಆಹ್ವಾನ
ಉಡುಪಿ : ಸಾಲಿಗ್ರಾಮ ಪಟ್ಟಣ ಪಂಚಾಯತ್ ಪರಿಶಿಷ್ಟ ಜಾತಿ/ ಪರಿಶಿಷ್ಟ ಜನರಿಗೆ, ಇತರೆ ಬಡ ವರ್ಗದವರಿಗೆ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಎಸ್.ಎಫ್.ಸಿ ನಿಧಿ ಮತ್ತು ಪಟ್ಟಣ ಪಂಚಾಯತ್ ನಿಧಿಯಿಂದ ಅನುದಾನ ಕಾಯ್ದಿರಿಸಿ, ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ವಿದ್ಯಾರ್ಥಿ ವೇತನ (ಎಸ್ಎಸ್ಎಲ್ಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ), ಅಡುಗೆ ಅನಿಲ ಸಂಪರ್ಕ, ಶೌಚಾಲಯ, ವೈದ್ಯಕೀಯ ಚಿಕಿತ್ಸೆ, ಸ್ವಯಂ ಉದ್ಯೋಗಕ್ಕಾಗಿ ಸಹಾಯಧನಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇತರೆ ಬಡ ವರ್ಗದವರಿಗೆ ಶೌಚಾಲಯ, […]
ಉಡುಪಿ :ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಸೂಚನೆ
ಉಡುಪಿ : ಜಿಲ್ಲೆಯಲ್ಲಿ 2018-19 ರ ತ್ರೈಮಾಸಿಕ ಅವಧಿಯಲ್ಲಿ 23827 ಕೋಟಿ ರೂ. ಡೆಪಾಟಿಸಿಟ್ ಆಗಿದ್ದು,ವಾರ್ಷಿಕ 6.54 ಶೇ. ಬೆಳವಣಿಗೆ ದಾಖಲಾಗಿದೆ. 11816 ಕೋಟಿ ಸಾಲ ವಿತರಿಸಿ 5.02 % ವೃದ್ದಿ ದಾಖಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ನ ರೀಜಿನಲ್ ಮ್ಯಾನೇಜರ್ ಸುಜಾತ ಹೇಳಿದರು. ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಲೀಡ್ ಡಿಸ್ಟ್ರಿಕ್ಟ್ ಚೀಫ್ ಮ್ಯಾನೇಜರ್ರುದ್ರೇಶ್ ಡಿಸಿ ಮಾತನಾಡಿ, 18 ಬ್ಯಾಂಕ್ಗಳು ಧನಾತ್ಮಕ ಬೆಳವಣಿಗೆ ಹೊಂದಿದ್ದು, ಕುಂಠಿತಗೊಂಡಿರುವ […]
ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ: ಉಡುಪಿ ಮೂಲದ ಡಾ.ಪದ್ಮಾ ಗಡಿಯಾರ್ ಆಯ್ಕೆ
ಉಡುಪಿ ಮೂಲದ ಡಾ| ಪದ್ಮಾ ಗಡಿಯಾರ್. ಕನ್ನಡಿಗರು ಹೆಮ್ಮೆ ಪಡುವಂತಹ ಉಡುಪಿ ಮಂದಿ ಕೂಡ ಖುಷಿ ಪಡುವಂತಹ ಸಾಧನೆ ತೋರಿರುವುದು ಗಮನಾರ್ಹ ಸಂಗತಿ. ಡಾ.ಪದ್ಮಾ ಗಡಿಯಾರ್ ಬ್ರಿಸ್ಬೇನ್ನಲ್ಲಿ 2018 ಅಕ್ಟೋಬರ್ ನಲ್ಲಿ ಯು.ಎಸ್. ಮೂಲದ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸಸ್ ಸೌತ್ ಇಂಡಿಯಾ ಯೂನಿವರ್ಸಲ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮುಂಬರುವ ಆಗಸ್ಟ್ನಲ್ಲಿ ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ ಸ್ಪರ್ಧೆ ನಡೆಯಲಿದ್ದು, ಆ ಸ್ಪರ್ಧೆಯಲ್ಲಿಯೂ ಕಿರೀಟ ಮುಡಿಗೇರಿಸಿಕೊಂಡು ದೇಶಕ್ಕೆ, ನಮ್ಮ ಉಡುಪಿಗೆ ಇವರು ಕೀರ್ತಿ ತರುತ್ತಾರೆ […]