ಉಡುಪಿ :ಬ್ಯಾಂಕಿಂಗ್‍ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಸೂಚನೆ

ಉಡುಪಿ : ಜಿಲ್ಲೆಯಲ್ಲಿ 2018-19 ರ ತ್ರೈಮಾಸಿಕ ಅವಧಿಯಲ್ಲಿ 23827 ಕೋಟಿ  ರೂ. ಡೆಪಾಟಿಸಿಟ್ ಆಗಿದ್ದು,ವಾರ್ಷಿಕ 6.54 ಶೇ. ಬೆಳವಣಿಗೆ ದಾಖಲಾಗಿದೆ. 11816 ಕೋಟಿ ಸಾಲ ವಿತರಿಸಿ 5.02 % ವೃದ್ದಿ ದಾಖಲಾಗಿದೆ ಎಂದು ಸಿಂಡಿಕೇಟ್  ಬ್ಯಾಂಕ್‍ನ ರೀಜಿನಲ್ ಮ್ಯಾನೇಜರ್ ಸುಜಾತ ಹೇಳಿದರು.

ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಲೀಡ್ ಡಿಸ್ಟ್ರಿಕ್ಟ್ ಚೀಫ್ ಮ್ಯಾನೇಜರ್‍ರುದ್ರೇಶ್ ಡಿಸಿ ಮಾತನಾಡಿ, 18 ಬ್ಯಾಂಕ್‍ಗಳು ಧನಾತ್ಮಕ ಬೆಳವಣಿಗೆ ಹೊಂದಿದ್ದು, ಕುಂಠಿತಗೊಂಡಿರುವ 13 ಬ್ಯಾಂಕ್‍ಗಗಳ ಸಿಡಿ ಪ್ರಮಾಣದ ಬೆಳವಣಿಗೆಗೆ ಸಲಹೆ ನೀಡಿಸಿಡಿ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸುವಂತೆ ಸೂಚನೆ ನೀಡಿದರು. ಪ್ರಧಾನ ಮಂತ್ರಿಉದ್ಯೋಗಸೃಷ್ಟಿ ಯೋಜನೆಕಾರ್ಯಕ್ರಮದಅಡಿಯಲ್ಲಿ ಮಾರ್ಚ್ 2019ರ ಬ್ಯಾಂಕ್‍ಗೆ 296 ಅಪ್ಲೀಕೇಶನ್‍ಗಳು ಬಂದಿದ್ದು, 103 ಅಪ್ಲೀಕೇಶನ್‍ಗಳನ್ನು ಮಂಜೂರು ಮಾಡಲಾಗಿದೆ.ಮುಖ್ಯ ಮಂತ್ರಿಉದ್ಯೋಗಸೃಷ್ಟಿ ಯೋಜನೆಕಾರ್ಯಕ್ರಮದಅಡಿಯಲ್ಲಿ ಮಾರ್ಚ್ ವರೆಗೆ 289 ಅಪ್ಲೀಕೇಶನ್‍ಗಳು ಬಂದಿದ್ದು, 84 ಅಪ್ಲೀಕೇಶನ್ ಗಳನ್ನು ಮಂಜೂರು ಮಾಡಲಾಗಿದೆಎಂದಅವರು, ರಾಜ್ಯ ಸರಕಾರದ ಪ್ರಾಯೋಜಿತಯೋಜನೆಯಡಿ,ಡಾ. ಬಿಆರ್‍ಅಂಬೆಡ್ಕರ್‍ಅಭಿವೃದ್ಧಿ ನಿಗಮದಯೋಜನೆಯ ವಾರ್ಷಿಕಗುರಿ 19 ಇದ್ದು, 50 ಅರ್ಜಿಗಳು ಬಂದಿದ್ದು, ಈ ಪೈಕಿ 20 ಅರ್ಜಿಗಳು ಮಂಜೂರಾಗಿದೆ.5 ಅರ್ಜಿಗಳು ತಿರಸ್ಕøತಗೊಂಡಿದ್ದು 20 ಅರ್ಜಿಗಳು ಬಾಕಿ ಉಳಿದಿದೆ ಎಂದರು.

ಸಭೆಯಲ್ಲಿ ನಬಾರ್ಡ್ ಎ.ಜಿ.ಎಂ. ರಮೇಶ್, ಆರ್‍ಬಿಐ ಬೆಂಗಳೂರು ನ ಎಜಿಎಂ ಪಿಕೆ ಪಟ್ನಾಯಕ್ ಉಪಸ್ಥಿತರಿದ್ದರು.