ಸಾವಯುವ ಕೃಷಿ, ದೃಢೀಕರಣ ಯೋಜನೆ
ಉಡುಪಿ, ಜೂನ್ 15: ಸಾವಯವ ಕೃಷಿ ಪ್ರಮಾಣೀಕೃತ ಪ್ರದೇಶವನ್ನು ಹೆಚ್ಚಿಸುವುದರೊಂದಿಗೆ ಮಾರುಕಟ್ಟೆಗೆ ನಿರಂತರವಾಗಿ ಒಳ್ಳೆಯ ಗುಣಮಟ್ಟದ ಸಾವಯವ ಕೃಷಿ ಉತ್ಪನ್ನಗಳನ್ನು ಪೂರೈಕೆ ಮಾಡಲು ಸಾವಯವ ಕೃಷಿ ಮತ್ತು ದೃಢೀಕರಣ ಯೋಜನೆಯನ್ನು ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಕ್ಷೇತ್ರವನ್ನು ಸಾವಯವ ಪ್ರಮಾಣೀಕರಣಕ್ಕೆ ಈಗಾಗಲೇ ಪ್ರಥಮ ವರ್ಷಕ್ಕೆ ನೋಂದಾಯಿಸಲಾಗಿರುವ ಮತ್ತು ನೋಂದಾಯಿಸಲು ಆಸಕ್ತಿ ಇರುವ ಅರ್ಹ ನೋಂದಾಯಿತ ಸಂಘ ಸಂಸ್ಥೆಗಳು, ಕೃಷಿಕರ ಸಂಘಗಳು, ಖಾಸಗಿ ಸಂಸ್ಥೆಗಳು, ರೈತ ಉತ್ಪಾದನಾ […]
ಜೂನ್ 18: ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಉಡುಪಿ, ಜೂನ್ 15: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಜೂನ್ 18 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಬೆಳಗ್ಗೆ 8.30 ಕ್ಕೆ ಉಡುಪಿಗೆ ಆಗಮಿಸಿ, ಜಿಲ್ಲೆಯ ಪ್ರವಾಹ/ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವರು, ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಪ್ರವಾಹ/ ಬರ ಪರಿಹಾರ ಕ್ರಮಗಳ ಕುರಿತು ಚರ್ಚೆ ನಡೆಸುವರು ಎಂದು ಪ್ರಕಟಣೆ […]
ಎಸ್.ಎಸ್.ಎಲ್.ಸಿ ಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಯೋಜನೆ ರೂಪಿಸಿ: ದಿನಕರ ಬಾಬು
ಉಡುಪಿ, ಜೂನ್ 15: ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯದಲ್ಲಿ 5 ನೇ ಸ್ಥಾನ ಪಡೆದಿದ್ದು, ಮುಂದಿನ ಬಾರಿ ಜಿಲ್ಲೆ ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ, ಈಗಿನಿಂದಲೇ ಯೋಜನೆ ರೂಪಿಸಿ, ಕಾರ್ಯೋನ್ಮುಖರಾಗುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದ್ದಾರೆ. ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ಯೋಜನೆ ರೂಪಿಸುವಂತೆ ಸೂಚಿಸಿದ ಅಧ್ಯಕ್ಷ […]
ವಿಶೇಷ ಮಕ್ಕಳ ಶಾಲೆಗಳಿಗೆ ದೊಡ್ಡಮಟ್ಟದ ಅನುದಾನ ನೀಡುವ ಪ್ರಯತ್ನ:ರಘುಪತಿ ಭಟ್
ಉಡುಪಿ: ಕೇಂದ್ರ ಸರ್ಕಾರವು ಶಾಸಕರ ನಿಧಿಯಿಂದ ಶೇ. 5ರಷ್ಟು ಅನುದಾನ ವಿಶೇಷ ಮಕ್ಕಳಿಗೆಕಡ್ಡಾಯವಾಗಿ ಮೀಸಲಿಡಬೇಕೆಂಬ ಕಾನೂನು ರೂಪಿಸಿದೆ. ಈ ನಿಟ್ಟಿನಲ್ಲಿ ವಿಶೇಷ ಮಕ್ಕಳಶಾಲೆಗೆ ಗರಿಷ್ಟ ಪ್ರಮಾಣದ ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಹಾಗೂ ಮಣಿಪಾಲ ಅರ್ಚನಾ ಟ್ರಸ್ಟ್‌ನಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಕೆಎಂಸಿಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರಆಯೋಜಿಸಲಾದ ಮಣಿಪಾಲದ ವಿಶೇಷ ಮಕ್ಕಳ ಪುನವರ್ಸತಿ ಕೇಂದ್ರ ‘ಆಸರೆ’ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಶಮಾನೋತ್ಸವವನ್ನು ಉದ್ಘಾಟಿಸಿ ಅಂಬಲಪಾಡಿ […]
ಉಡುಪಿ X press ವರದಿ ಪರಿಣಾಮ: ಎಚ್ಚೆತ್ತ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿಯ ಪುತ್ತಿಗೆ ಸೇತುವೆ ದುರಸ್ತಿ ಕಾಮಗಾರಿ ಶುರು
ಉಡುಪಿ: ಮಲ್ಪೆ ಮೊಣಕಾಲ್ಮೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169A ಯ ಹಿರಿಯಡ್ಕದ ಪುತ್ತಿಗೆ ಸಮೀಪದ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಪುತ್ತಿಗೆ ಸೇತುವೆ ಕುಸಿತದ ಹಾದಿಯಲ್ಲಿತ್ತು . ತಳ ಭಾಗದಲ್ಲಿ ಹಾಕಲಾಗಿದ್ದ ಆಧಾರವಾಗಿದ್ದ ಸ್ತಂಭಗಳು ಬೇರ್ಪಟ್ಟಿದ್ದವು, ಇದು ಇನ್ನೇನು ಕುಸಿದು ಬೀಳಲಿದೆ ಎನ್ನುವ ಎಚ್ಚರದ ವರದಿಯನ್ನು ಉಡುಪಿ xpress 11 ರಂದು “ರಾಷ್ಟ್ರಿಯ ಹೆದ್ದಾರಿ ಪುತ್ತಿಗೆ ಸೇತುವೆಯ ಕುತ್ತಿಗೆ ಉಳುಕಿದೆ” ಎನ್ನುವ ಶೀರ್ಷಿಕೆಯೊಂದಿಗೆ ಪ್ರಕಟಿಸಿತ್ತು. ಇದೀಗ ವರದಿ ನೋಡುತ್ತಲೆ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, […]