ಕೆರಿಬಿಯನ್ ಬೌಲಿಂಗ್ ದಾಳಿಗೆ ನಲುಗಿದ ಪಾಕ್, ವಿಶ್ವಕಪ್ ನಲ್ಲಿ 2ನೇ ಬಾರಿ ಅತೀ ಕಡಿಮೆ ರನ್ ಗೆ ಆಲ್ ಔಟ್
ನಾಟಿಂಗ್ಹ್ಯಾಮ್: ವಿಶ್ವಕಪ್ ಸರಣಿಗೂ ಮುನ್ನ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿದ್ದ ಪಾಕ್ ತಂಡ ಇದೀಗ ವಿಶ್ವಕಪ್ನಲ್ಲೂ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ವಿಶ್ವಕಪ್ ನ ಎರಡನೇ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಕೇವಲ 105 ರನ್ ಗಳಿಗೆ ಸರ್ವಪತನ ಕಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್, ಕೆರಿಬಿಯನ್ ಬೌಲಿಂಗ್ ದಾಳಿಗೆ ಒಳಗಾಗಿ 21.4 ಓವರ್ಗೆ ಆಲ್ ಔಟ್ ಆಗಿದ್ದು, ವಿಶ್ವಕಪ್ನಲ್ಲಿ ಮತ್ತೊಮ್ಮೆ ಅತೀ ಕಡಿಮೆ ರನ್ ಗೆ ಸರ್ವಪತನ ಕಂಡಂತಾಗಿದೆ. 1992 ರಲ್ಲಿ ಇಂಗ್ಲೆಂಡ್ […]
ಸಿಇಟಿ ಸೀಟು ಹಂಚಿಕೆ: ಜಿಲ್ಲೆಯಲ್ಲಿ ದಾಖಲೆ ಪರಿಶೀಲನೆ ಕೇಂದ್ರ ಸ್ಥಾಪನೆ
ಉಡುಪಿ, ಮೇ 31: 2019 ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಅಭ್ಯರ್ಥಿಗಳ ಇಚ್ಛೆಯ ಅನುಸಾರ, ಆನ್ಲೈನ್ ಮೂಲಕ ಸೀಟು ಹಂಚಿಕೆ ಮಾಡಲು ಹಾಗೂ ಅಭ್ಯರ್ಥಿಗಳ ದಾಖಲೆಯನ್ನು ಪರಿಶೀಲನೆ ಮಾಡಲು, ಜಿಲ್ಲೆಯ ಉಡುಪಿ ತಾಲೂಕಿನ ಉದ್ಯಾವರ ಎಸ್.ಡಿ.ಎಂ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ 2019-20 ನೇ ಸಾಲಿನಲ್ಲಿ ಸಹಾಯಕ ಕೇಂದ್ರ ಪ್ರಾರಂಭಿಸಲಾಗಿದೆ. ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲು ಜಿಲ್ಲೆಯ ಇಬ್ಬರು ನೋಡೆಲ್ ಅಧಿಕಾರಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರನ್ನು ನೇಮಕ ಮಾಡಿರುತ್ತಾರೆ. ಎಸ್.ಡಿ.ಎಮ್ ಆಯುರ್ವೇದ ಮೆಡಿಕಲ್ ಕಾಲೇಜ್, ಲಕ್ಷ್ಮೀ […]
ಉಚಿತ ಕಂಪ್ಯೂಟರ್ ತರಬೇತಿ: ನೋಂದಣಿಗೆ ಸೂಚನೆ
ಉಡುಪಿ, ಮೇ 31: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉಡುಪಿ, ಇಲ್ಲಿ ಸಾಫ್ಟ್ ಸ್ಕೀಲ್ಸ್ ಮತ್ತು ಬೇಸಿಕ್ ಕಂಪ್ಯೂಟರ್, ಕನ್ನಡನುಡಿ ಟೈಪಿಂಗ್ ತರಬೇತಿಯನ್ನು ಪಡೆಯಲು ಇಚ್ಚಿಸುವ ಕೆಲಸ ಹುಡುಕುವ ಆಸಕ್ತ ಯುವಕ, ಯುವತಿಯರು, ವಿದ್ಯಾರ್ಥಿಗಳು ನೋಂದಾವಣಿ ಮಾಡಬಹುದಾಗಿದೆ. ತರಬೇತಿಯು ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕಛೇರಿಯನ್ನು ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ರಜತಾದ್ರಿ, ಮಣಿಪಾಲ, ದೂರವಾಣಿ ಸಂಖ್ಯೆ; 0820-2574869, 9480259790 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ […]
ಅಕೌಂಟೆಂಟ್ಗಳ ಸೇವೆ ಪಡೆಯಲು ಟೆಂಡರ್ ಆಹ್ವಾನ
ಉಡುಪಿ, ಮೇ 31: ಜಿಲ್ಲೆಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ ಅಗತ್ಯವಿರುವ 9 ಅಕೌಂಟೆಂಟ್ಗಳ ಸೇವೆಯನ್ನು ಖಾಸಗಿ ಸಂಸ್ಥೆಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಪಡೆದುಕೊಳ್ಳಲು ದಾಸ್ತಾವೇಜಿನಲ್ಲಿ ತಿಳಿಸಿರುವ ನಿಬಂಧನೆಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಟೆಂಡರ್ನ್ನು ಆಹ್ವಾನಿಸಲಾಗಿದೆ. ಇಚ್ಛೆಯುಳ್ಳ ಸಂಸ್ಥೆಯವರು ಟೆಂಡರ್ ಅರ್ಜಿಯನ್ನು ಇ-ಪೇಮೆಂಟ್ ಮುಖಾಂತರ (ಕ್ರೆಡಿಟ್/ ಡೆಬಿಟ್ ಕಾರ್ಡ್ ಮುಖಾಂತರ ಅಥವಾ NEFT ಚಲನ್ ಮೂಲಕ) ಜೂನ್ 27 ರೊಳಗೆ www.eproc.karnataka.gov.in ನಲ್ಲಿ ಸಲ್ಲಿಸಬಹುದಾಗಿದೆ. ಇ-ಟೆಂಡರ್ನ್ನು ಜೂನ್ 28 ರಂದು ಸಂಜೆ 4 ಗಂಟೆಗೆ ತೆರೆಯಲಾಗುವುದು […]
ಕಾರ್ಕಳ ಪ್ರಧಾನ ಮಂತ್ರಿ ಆವಾಸ್ ಯೋಜನೆ: ಅರ್ಜಿ ಆಹ್ವಾನ
ಉಡುಪಿ, ಮೇ 31: ಕೇಂದ್ರ ಸರ್ಕಾರವು 2019-20 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (ನಗರ) ಹೌಸಿಂಗ್ ಫಾರ್ ಆಲ್ ಯೋಜನೆಯನ್ನು ಜಾರಿಗೊಳಿಸಿರುತ್ತದೆ. ಯೋಜನೆ ಉದ್ದೇಶವು ಆರ್ಥಿಕ ದುರ್ಬಲ ವಿಭಾಗ, ಕಡಿಮೆ ಆದಾಯ ಗುಂಪು, ಮಧ್ಯಮ ಆದಾಯ-I, ಮಧ್ಯಮ ಆದಾಯ-II ವರ್ಗಕ್ಕೆ ಸೇರಿದ ಅರ್ಹ ಫಲಾನುಭವಿಗಳಿಗೆ ಬ್ಯಾಂಕುಗಳು, ಫೈನಾನ್ಸ್ ಕಂಪನಿಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಬಡ್ಡಿ ಸಹಾಯಧನದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಅವಕಾಶ ಕಲ್ಪಿಸಿದೆ. ಆರ್ಥಿಕ ದುರ್ಬಲ ವರ್ಗದವರಿಗೆ ವಾರ್ಷಿಕ ಆದಾಯ 3 ಲಕ್ಷದ ವರೆಗೆ […]