ಉಡುಪಿ, ಮೇ 31: ಜಿಲ್ಲೆಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ ಅಗತ್ಯವಿರುವ 9 ಅಕೌಂಟೆಂಟ್‍ಗಳ ಸೇವೆಯನ್ನು ಖಾಸಗಿ ಸಂಸ್ಥೆಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಪಡೆದುಕೊಳ್ಳಲು ದಾಸ್ತಾವೇಜಿನಲ್ಲಿ ತಿಳಿಸಿರುವ ನಿಬಂಧನೆಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಟೆಂಡರ್‍ನ್ನು ಆಹ್ವಾನಿಸಲಾಗಿದೆ.
ಇಚ್ಛೆಯುಳ್ಳ ಸಂಸ್ಥೆಯವರು ಟೆಂಡರ್ ಅರ್ಜಿಯನ್ನು ಇ-ಪೇಮೆಂಟ್ ಮುಖಾಂತರ (ಕ್ರೆಡಿಟ್/ ಡೆಬಿಟ್ ಕಾರ್ಡ್ ಮುಖಾಂತರ ಅಥವಾ NEFT ಚಲನ್ ಮೂಲಕ) ಜೂನ್ 27 ರೊಳಗೆ www.eproc.karnataka.gov.in ನಲ್ಲಿ ಸಲ್ಲಿಸಬಹುದಾಗಿದೆ. ಇ-ಟೆಂಡರ್‍ನ್ನು ಜೂನ್ 28 ರಂದು ಸಂಜೆ 4 ಗಂಟೆಗೆ ತೆರೆಯಲಾಗುವುದು ಎಂದು ಉಡುಪಿ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.