ನಿಟ್ಟೂರು: ವಾಹನ ಬಡಿದು ಗೂಳಿ ಸಾವು

ಉಡುಪಿ:  ಗೂಳಿಯೊಂದಕ್ಕೆ ವಾಹನ ಬಡಿದು ಗಂಭೀರ ಗಾಯಗೊಂಡು ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ನಿಟ್ಟೂರಿನ ಬಳಿ ನಡೆದಿದೆ.  ಗಂಭೀರ ಗಾಯಗೊಂಡ ಗೂಳಿಗೆ ವಿಷಯ ತಿಳಿದ ವಿಶು ಶೆಟ್ಟಿ ತಕ್ಷಣ ಪಶು ವೈದ್ಯರ ಮೂಲಕ ಚಿಕಿತ್ಸೆ ನೀಡಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ಗೂಳಿ ಭಾನುವಾರ ಮಧ್ಯಾಹ್ನ ಮೃತ ಪಟ್ಟಿದೆ. ನಂತರ ವಿಶು ಶೆಟ್ಟಿ ಅವರು ಜೆ.ಸಿ.ಬಿ ತರಿಸಿ ಮೃತ ಗೂಳಿಯ ಅಂತ್ಯ ಸಂಸ್ಕಾರ ನಡೆಸಿದರು.    ತುರ್ತು ಚಿಕಿತ್ಸೆಗೆ ಸೌಲಭ್ಯ ಅಗತ್ಯವಿದೆ:    ಪೆಟ್ಟಾದ ಪಶುಗಳಿಗೆ ತುರ್ತು ಚಿಕಿತ್ಸೆಗೆ […]

ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥ ಬಸ್ ನಿಲ್ದಾಣ ಉದ್ಘಾಟನೆ

ಉಡುಪಿ:ವಿಷ್ಣುಮೂರ್ತಿ ದೇವಸ್ಥಾನ ಫ್ರೆಂಡ್ಸ್ – VMT(R.) ವತಿಯಿಂದ ಶ್ರೀ ನಗರದಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥ ನೂತನವಾಗಿ ನಿರ್ಮಿಸಿದ ಬಸ್ ನಿಲ್ದಾಣದ ಉದ್ಘಾಟನೆಯನ್ನು  ಶಾಸಕ ಕೆ ರಘುಪತಿ ಭಟ್ ಸೋಮವಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೈನಿಕರು ನಮ್ಮ ದೇಶವನ್ನು ಕಾಯುತ್ತಾರೆ, ಅಂತಹ ವೀರರನ್ನು ನಾವು ಪ್ರತಿದಿನ ನೆನೆಯಲೇಬೇಕು. ಆದ್ದರಿಂದ ಈ ಯುವಕರ ತಂಡದ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ,ಪಂಚಾಯತ್ ಸದಸ್ಯರುಗಳು ಹಾಗೂ ತಂಡದ ಪದಾಧಿಕಾರಿಗಳು […]

ನದಿಯನ್ನೇ ನುಂಗಲು ಹೊರಟಿದ್ದಾರೆ ನಾಲ್ಕೂರು ಐತನಡ್ಕ‌ದ ಭಟ್ಟರು..!  ನೂರಾರು ಲೋಡ್ ಮಣ್ಣು ಹಾಕಿ ಭೂಕಬಳಿಕೆ

ಉಡುಪಿ Xpress ಸ್ಪೆಷಲ್ ರಿಪೋರ್ಟ್: ಬೆಳ್ತಂಗಡಿ: ಒಂದು ಕಡೆ ಕರಾವಳಿಯ ನದಿಗಳು ಬತ್ತಿ‌ ಹೋಗುತ್ತಿವೆ. ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನದಿಗಳು ಸದ್ಯ ಒಣಗಿ ಮೈದಾನದಂತಾಗಿವೆ. ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಬಂದಷ್ಟು ಬರಲಿ‌ ಎನ್ನುವ ದುರಾಸೆಗೆ ಕೈ ಹಾಕುತ್ತಿದ್ದಾರೆ. ನದಿಯ ದಡಕ್ಕೆ ನೂರಾರು ಲೋಡ್ ಮಣ್ಣು ಹಾಕಿ ಘನಘೋರ ದೌರ್ಜನ್ಯ ಎಸಗುತ್ತಿದ್ದಾರೆ. ಪ್ರಕೃತಿಯ ಮೇಲೆ ಯಾವರೀತಿ ಇಂತಹ ದೌರ್ಜನ್ಯ ಎಸಗುತ್ತಾರೆ ಎನ್ನುವುದಕ್ಕೆ ಉದಾಹರಣೆ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಐತನಡ್ಕದ ಭಟ್ಟರೊಬ್ಬರು. ಫಲ್ಗುಣಿ ನದಿಗೆ ತಾಗಿಕೊಂಡಿರುವಂತೆ ಕಳೆದ […]