ದ.ಕ. ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವುದು ನನ್ನ ಗುರಿ: ನಳಿನ್
ಮಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಉತ್ತಮ ಆಡಳಿತದಿಂದಾಗಿ ಜಿಲ್ಲೆಯ ಜನತೆ ನನಗೆ ಆಸೀರ್ವಾದ ಮಾಡಿದ್ದಾರೆ. ಮುಂದೆ ಹಲವು ಯೋಜನೆಗಳ ಮೂಲಕ ಈ ಜಿಲ್ಲೆಯನ್ನು ಮಾದರಿಯನ್ನಾಗಿಸುವುದೇ ನನ್ನ ಗುರಿ ಎಂದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲವು ಸಾಧಿಸಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ರಾಜ್ಯ ಸರಕಾರ ಎಲ್ಲ ಭಾಗದಲ್ಲೂ ಜನತೆ ಬಿಜೆಪಿ ಕೈ ಹಿಡಿದಿದ್ದಾರೆ. ಅಲ್ಲದೇ ಈ ಜಿಲ್ಲೆಯ ಏಳು ಶಾಸಕರ ಉತ್ತಮ ಕಾರ್ಯಗಳಿಂದಾಗಿಯೂ ನನ್ನ ಗೆಲುವು ಸುಲಭವಾಗಿದೆ. […]
ಮೈತ್ರಿ ಸರ್ಕಾರದ ಪತನಕ್ಕೆ ಕ್ಷಣಗಣನೆ: ಶೋಭಾ ಕರಂದ್ಲಾಜೆ
ಉಡುಪಿ: ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ಸಮ್ಮಿಶ್ರ ಸರಕಾರದ ಪತನದ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ಮೋದಿ ಅಲೆಗೆ ಕಾಂಗ್ರೆಸ್‌ನ ಪ್ರಮುಖ ನಾಯಕರೇ ಕೊಚ್ಚಿ ಹೋಗಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಗುರುವಾರ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಚುನಾವಣೋತ್ತರ ಫಲಿತಾಂಶ ಪ್ರಕಟವಾದ ಸಂದರ್ಭ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ತಮಾಷೆ ಮಾಡಿದ್ದರು. ಆದರೆ ಆ ಸಮೀಕ್ಷೆಯೇ ನಿಜವಾಗಿದೆ. ತುಮಕೂರಿನಲ್ಲಿ ದೇವೇಗೌಡ, ಗುಲ್ಬರ್ಗದಲ್ಲಿ ಖರ್ಗೆ, ಬಳ್ಳಾರಿ ಉಗ್ರಪ್ಪ, ಮೊಯ್ಲಿ ಕೂಡಾ […]
ಕರ್ನಾಟಕದಲ್ಲಿ ಬಿಜೆಪಿ ಕೈ ಹಿಡಿದ ಜನತೆ, ಕಾಂಗ್ರೆಸ್ ಗೆ ತೀವ್ರ ಮುಖಭಂಗ
ಬೆಂಗಳೂರು: ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕ್ಕದಲ್ಲಿ ಅತ್ಯಂತ ಬಲಿಷ್ಠ ವಾಗಿದ್ದ ಕಾಂಗ್ರೆಸ್ ಈ ಲೋಕಸಭಾ ಚುಣಾವಣೆಯಲ್ಲಿ ಮಕಾಡೆ ಮಲಗಿದೆ. ಹೀಗಾಗಿ ಕಾಂಗ್ರೆಸ್ ಮಾತ್ರವಲ್ಲದೇ ಆಡಳಿತ ನಡೆಸುತ್ತಿರುವ ದೋಸ್ತಿ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಗೆಲುವಿನ ಸನಿಹದಲ್ಲಿದೆ. 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಖಚಿತಗೊಂಡಿದೆ. ಬಿಜೆಪಿ ಅಲೆಯಿಂದಾಗಿ ಕರ್ನಾಟಕದಲ್ಲಿ ಪ್ರಮುಖ ನಾಯಕರೇ ಸೋಲೊಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕೇವಲ ಒಂದೊಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದು, ಗೆಲುವಿನ ಭರವಸೆ ಮೂಡಿಸಿದೆ. […]
ಬಿಜೆಪಿ ಅಬ್ಬರಕ್ಕೆ ಕಾಂಗ್ರೆಸ್ ಧೂಳಿಪಟ, ದೇಶದಾದ್ಯಂತ ಭಾರೀ ‘ಮೋದಿ’ ಅಲೆ
ನವದೆಹಲಿ: ಲೋಕಸಭಾ ಚುನಾವಣಾ ಫಲಿಂತಾಂಶ ಹೊರ ಬೀಳುತ್ತಿದ್ದು, ಹಾಲಿ ಆಡಳಿತ ಪಕ್ಷ ಬಿಜೆಪಿ ದೇಶದಾದ್ಯಂತ ಭಾರೀ ಮುನ್ನಡೆ ಸಾಧಿಸಿದೆ. 301ಕ್ಕೂ ಅಧಿಕ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಈಗಾಗಲೇ ಗೆಲುವಿನ ಕೇಕೆ ಹಾಕಿದೆ. ದೇಶದ ಒಟ್ಟು 542 ಲೋಕಸಭಾ ಕ್ಷೇತ್ರಗಳ ಪೈಕಿ ಭಾರೀ ಮುನ್ನಡೆಯಲ್ಲಿರುವ ಎನ್ ಡಿಎ 340 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಯುಪಿಎ 89 ಸ್ಥಾನ, 108 ಕ್ಷೇತ್ರಗಳಲ್ಲಿ ಇತರ ಪಕ್ಷಗಳು ಸ್ಥಾನಪಡೆದಿವೆ. ಕರ್ನಾಟಕ ರಾಜ್ಯ ಸೇರಿದಂತೆ ಮಧ್ಯಪ್ರದೇಶ, ಗುಜರಾತ್, […]