ನವದೆಹಲಿ: ಲೋಕಸಭಾ ಚುನಾವಣಾ ಫಲಿಂತಾಂಶ ಹೊರ ಬೀಳುತ್ತಿದ್ದು, ಹಾಲಿ ಆಡಳಿತ ಪಕ್ಷ ಬಿಜೆಪಿ ದೇಶದಾದ್ಯಂತ ಭಾರೀ ಮುನ್ನಡೆ ಸಾಧಿಸಿದೆ. 301ಕ್ಕೂ ಅಧಿಕ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಈಗಾಗಲೇ ಗೆಲುವಿನ ಕೇಕೆ ಹಾಕಿದೆ.
ದೇಶದ ಒಟ್ಟು 542 ಲೋಕಸಭಾ ಕ್ಷೇತ್ರಗಳ ಪೈಕಿ ಭಾರೀ ಮುನ್ನಡೆಯಲ್ಲಿರುವ ಎನ್ ಡಿಎ 340 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಯುಪಿಎ 89 ಸ್ಥಾನ, 108 ಕ್ಷೇತ್ರಗಳಲ್ಲಿ ಇತರ ಪಕ್ಷಗಳು ಸ್ಥಾನಪಡೆದಿವೆ. ಕರ್ನಾಟಕ ರಾಜ್ಯ ಸೇರಿದಂತೆ ಮಧ್ಯಪ್ರದೇಶ, ಗುಜರಾತ್, ಉತ್ತರಪ್ರದೇಶ, ಬಿಹಾರ, ಹರಿಯಾಣ ಮೊದಲಾದ ರಾಜ್ಯಗಳಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ.