ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಇಂದು ಪ್ರಕಟ

ನವದೆಹಲಿ, ಮೇ. 6: ಸಿಬಿಎಸ್ಇ 10ನೇ ತರಗತಿ ಫಲಿತಾಂಶವು ಏ.6 ರಂದು ಹೊರಬಿದ್ದಿದೆ. ಮಧ್ಯಾಹ್ನ 3 ಗಂಟೆ ಬಳಿಕ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ. ಫೆಬ್ರವರಿ 21 ರಿಂದ ಮಾರ್ಚ್ 29 ರವರೆಗೆ ನಡೆದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಸುಮಾರು 18.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎನ್ನಲಾಗಿದೆ. ವಿದ್ಯಾರ್ಥಿಗಳು examresults.com, www.indiaresults.com  ನಲ್ಲಿಯೂ ಕೂಡ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ. ಎಲ್ಲ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು cbse.nic.in ಮತ್ತು cbseresults.nic.in. ವೆಬ್ಸೈಟ್ ಗಳಲ್ಲಿ ವೀಕ್ಷಿಸಬಹುದು.

ಕಾರ್ಕಳ: ಹಿರಿಯಂಗಡಿ ಕುಂಟಲ್ಪಾಡಿ ಹಿಂದು ರುದ್ರಭೂಮಿ ಮುಕ್ತಿಧಾಮ ಲೋಕಾರ್ಪಣೆ

ಕಾರ್ಕಳ: ಹಿರಿಯಂಗಡಿ – ಕುಂಟಲ್ಪಾಡಿಯಲ್ಲಿ ಹಿಂದೂ ಜಾಗರಣ ವೇದಿಕೆ, ಅಂಬಾಭವಾನಿ ಫ್ರೆಂಡ್ಸ್, ಚೇತಕ್ ಯುವಕ –ಯುವತಿ ಮಂಡಲ ಇದರ ಆಶ್ರಯದಲ್ಲಿ ಹಿಂದು ರುದ್ರಭೂಮಿ ಮುಕ್ತಿಧಾಮದ ಲೋಕಾರ್ಪಣೆ ಕಾರ್ಯಕ್ರಮ ಮೇ. 5ರಂದು ನಡೆಯಿತು. ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯಕುಮಾರ್ ಅವರು ಲೋಕಾರ್ಪಣೆಗೊಳಿಸಿ, ಹಿಂದೂ ರುದ್ರಭೂಮಿಯು ಊರಿನ ಶೃದ್ಧಾವಂತ ಹಿಂದೂಗಳ ಸದ್ಬಾವನೆಯ ಪ್ರತಿಕವಾಗಿದೆ. ಸಾವಿನ ನಂತರವು ಬದುಕಿದೆ ಎಂಬ ಹಿಂದೂ ಧಾರ್ಮಿಕ ನಂಬಿಕೆಯ ತಳಹದಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೋತಿಷಿ, ಶಿಕ್ಷಕರಾದ […]

ರಾಜ್ಯ ಗೃಹಮಂತ್ರಿಯ ದಬ್ಬಾಳಿಕೆ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ

ಉಡುಪಿ: ರಾಜ್ಯ ಸರ್ಕಾರದ ಗೃಹ ಮಂತ್ರಿಗಳ ದಬ್ಬಾಳಿಕೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೇತೃತ್ವದ ನಿಯೋಗ ಸೋಮವಾರ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಆ ನಂತರ ಮಾತನಾಡಿದ ಮಟ್ಟಾರು ರತ್ನಾಕರ ಹೆಗ್ಡೆ, ಕಳೆದ ಕೆಲವು ತಿಂಗಳಿನಿಂದ ಸಮ್ಮಿಶ್ರ ಸರ್ಕಾರವು ಮಾಧ್ಯಮವೂ ಸೇರಿದಂತೆ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಿಜೆಪಿಯು ತನ್ನ ವಿರುದ್ಧ ನಡೆಯುತ್ತಿರುವ ಸೇಡಿನ ಕ್ರಮಗಳ ವಿರುದ್ಧ […]

ನಾಗರಿಕ ಸಮಿತಿಯಿಂದ ತುಮಕೂರಿನ ಅನಥಾಶ್ರಮಕ್ಕೆ ಬಟ್ಟೆ ವಿತರಣೆ.

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಇವರಿಂದ ಹಳೆ ಬಟ್ಟೆಗಳಿಗೆ ಮರುಜೀವ ನೀಡುವ 6 ನೇ ಹಂತದ ಕಾರ್ಯಕ್ರಮವು ಮಾರುತಿ ವಿಥೀಕಾ ಬಳಿ ಇರುವ ಸಮಿತಿಯ ಕಛೇರಿಯ ಆಶ್ರಯದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದಲ್ಲಿ  ಸಾರ್ವಜನಿಕರು ಸಮಿತಿಯ ಯೋಜನೆಗೆ ಒಪ್ಪಿಸಿದ, ಉತ್ತಮ ಗುಣಮಟ್ಟದ 35 ಮೂಟೆ ಬಟ್ಟೆಗಳನ್ನು, ತುಮಕೂರಿನಲ್ಲಿ ಅನಾಥಾಶ್ರಮ ನಡೆಸುತ್ತಿರುವ, ಶ್ರೀ ಶಾರದಾಂಬ ಟ್ರಸ್ಟ್ ಇವರಿಗೆ ಹಸ್ತಾಂತರಿಸಲಾಯಿತು. ಬಟ್ಟೆಗಳನ್ನು ಟ್ರಸ್ಟಿನ ಪರವಾಗಿ ತುಮಕೂರಿನ ಮಣಿಕಂಠ, ಆಶಾ ಅವರು ಸ್ವಿಕರಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, […]

ಮೇ 8 :ವಿಶ್ವ ರೆಡ್ ಕ್ರಾಸ್ ದಿನಾಚರಣೆ, ನೂತನ ಕೃತಕ ಅವಯವ ಜೋಡಣಾ ಘಟಕ ಉದ್ಘಾಟನೆ

ಉಡುಪಿ, : ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದಲ್ಲಿ ಮೇ 8 ರಂದು ಬೆಳಗ್ಗೆ 10 ಕ್ಕೆ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಮತ್ತು ನೂತನ ಕೃತಕ ಅವಯವ ಜೋಡಣಾ ಘಟಕವನ್ನು ಉಡುಪಿ ಜಿಲ್ಲಾಧಿಕಾರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷೆ ಹೆಪ್ಸಿಬಾ ರಾಣಿ ಕೊರ್ಲಪಾಟಿ ಉದ್ಘಾಟಿಸಲಿದ್ದಾರೆ.  ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಘಟಕದಲ್ಲಿ ಗುರುತಿಸಲಾದ 7 ಫಲಾನುಭವಿಗಳಿಗೆ ಕೃತಕ ಅವಯವಗಳನ್ನು ಜಿಲ್ಲಾಧಿಕಾರಿಗಳು ಹಸ್ತಾಂತರಿಸಲಿರುವರು. ವಿವಿಧ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದಲ್ಲಿ ಅತ್ಯುತ್ತಮ […]