ಕುಂದಾಪುರ: ಕೆರೆಗಳ ಮೀನು ಪಾಶುವಾರು ಹಕ್ಕು ನೇರ ಗುತ್ತಿಗೆ- ಅರ್ಜಿ ಆಹ್ವಾನ

ಉಡುಪಿ :  ಕುಂದಾಪುರ ತಾಲೂಕಿನ ಕೋಡಿಕೆರೆ ಮತ್ತು ಕೋಟೆಕೆರೆಗಳ ಮೀನು ಪಾಶುವಾರು ಹಕ್ಕನ್ನು 2019-20 ನೇ ಮೀನುಗಾರಿಕೆ ಫಸಲಿವರ್ಷದಿಂದ 2023-24 ನೇ ಮೀನುಗಾರಿಕೆ ಫಸಲಿ ವರ್ಷದವರೆಗೆ ಗರಿಷ್ಟ 5 ವರ್ಷಗಳಿಗೆ ಸರ್ಕಾರದ ನಿಯಮ, ಷರತ್ತು ಮತ್ತು ನಿಬಂಧನೆಗೊಳಪಟ್ಟಂತೆ ಅರ್ಹ ಮೀನುಗಾರಿಕೆ ಸಹಕಾರಿ ಸಂಘಕ್ಕೆ ಗುತ್ತಿಗೆ ನೀಡಲಾಗುವುದು.      ಗುತ್ತಿಗೆ ಪಡೆಯಲಿಚ್ಛಿಸುವ ಅರ್ಹ ಮೀನುಗಾರರ ಸಹಕಾರ ಸಂಘದವರು ಮಾತ್ರ ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಮೇ 23 ರ ಒಳಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಶ್ರೇಣಿ-2, ಕುಂದಾಪುರ, ಕಚೇರಿಗೆ ಕಚೇರಿ […]

ನಿರ್ದೇಶಕ ವಿಗ್ನೇಶ್ ಜತೆ ನಟಿ ನಯನತಾರಾ ನಿಶ್ಚಿತಾರ್ಥ!

ಲೇಡಿ ಸೂಪರ್ ಸ್ಟಾರ್ ನಯನತಾರಾ ನಿರ್ದೇಶಕ ವಿಗ್ನೇಶ್ ಜತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತನ್ನ ಬಹುದಿನದ ಗೆಳೆಯ, ನಿರ್ದೇಶಕ ವಿಗ್ನೇಶ್ ಶಿವನ್ ಜತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, 2020ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್‍ನಲ್ಲಿ ಹರಿದಾಡುತ್ತಿದೆ. ನಯನತಾರಾ ಗೆಳೆಯ ವಿಗ್ನೇಶ್ ಜತೆಗೆ ಹಲವು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ನಿಶ್ಚಿತಾರ್ಥ ಆಗುತ್ತಿರುವ ವಿಷಯ ಕಾಲಿವುಡ್‍ನಲ್ಲಿ ಸದ್ಯ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ನಯನತಾರಾ ಆಗಲಿ ವಿಗ್ನೇಶ್ ಆಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ. […]

ಎಂ.ಎನ್. ರಾಜೇಂದ್ರ ಕುಮಾರ್‌ಗೆ ‘ಗ್ಲೋಬಲ್ ಲೀಡರ್‌ಶಿಪ್’ ಪ್ರಶಸ್ತಿ ಮಲೇಷಿಯಾದ ಕೌಲಾಲಂಪುರದಲ್ಲಿ ಪ್ರಶಸ್ತಿ ಪ್ರದಾನ

ಮಂಗಳೂರು: ಎಂ.ಎನ್. ರಾಜೇಂದ್ರ ಕುಮಾರ್ ಅವರು ಸಹಕಾರಿ ರಂಗದಲ್ಲಿ ಮಾಡಿರುವ ಅಪ್ರತಿಮ ಸಾಧನೆಯನ್ನು ಗುರುತಿಸಿ ಅವರಿಗೆ ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಸ್ಟಡೀಸ್ ಸಂಸ್ಥೆ ಔಟ್ಸ್ಟಾಂಡಿಂಗ್ ‘ಗ್ಲೋಬಲ್ ಲೀಡರ್ಶಿಪ್ ಅವಾರ್ಡ್’ ನೀಡಿ ಗೌರವಿಸಿದೆ. ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ ಇಂಡೋ-ಮಲೇಷಿಯಾ ಎಕನಾಮಿಕ್ಸ್ ಕೋ-ಆಪರೇಷನ್ ಸೆಮಿನಾರ್‍ನಲ್ಲಿ ಮಲೇಷಿಯಾ ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಮುಹಮ್ಮದ್ ಭಕ್ತಾರ್ ಬಿನ್ ವಾನ್ ಚಿಕ್‍ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಮಲೇಷಿಯಾ ವಾಣಿಜ್ಯೋದ್ಯಮ ಅಭಿವೃದ್ಧಿ ಸಚಿವರಾದ ದಾತೋ ಸೆರಿ ಮೊಹಮ್ಮದ್ ರೆಜುವಾನ್ […]

ಆಳ್ವಾಸ್‌ ಕಾಲೇಜು: 2,406 ಮಂದಿಗೆ ಪದವಿ ಪ್ರದಾನ,  ಪೋಷಕರ ತ್ಯಾಗ, ಒಡನಾಡಿಗಳ ಸ್ನೇಹ ಮರೆಯದೆ ಸಾಧಕರಾಗಲು ಪ್ರಯತ್ನಿಸಿ: ಡಾ. ಸಚ್ಚಿದಾನಂದ ಕಾಮತ್

ಮೂಡುಬಿದಿರೆ, ಮೇ 4: ಪ್ರತಿಯೊಬ್ಬರಿಗೂ ಸಾಧಿಸಬೇಕೆನ್ನುವ ಇಚ್ಚೆ ಇರುತ್ತದೆ. ಆದರೆ ಪೋಷಕರ ತ್ಯಾಗ, ವಾತ್ಸಲ್ಯ, ಗುರುಗಳ ಮಾರ್ಗದರ್ಶನ, ಒಡನಾಡಿಗಳ ಸ್ನೇಹ ಮರೆಯದೆ, ಪರಿಶ್ರಮ, ನೈತಿಕತೆ, ಸಮಾಜಋಣ ತೀರಿಸುವ ಮನೋಭಾವದಿಂದ ಸಾಧಕರಾಗಲು ಪ್ರಯತ್ನಿಸಿ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೈಸ್‌ಛಾನ್ಸೆಲರ್‌ ಡಾ| ಸಚ್ಚಿದಾನಂದ್‌ ಹೇಳಿದರು. ವಿದ್ಯಾಗಿರಿಯ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ, ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ನ 2019ರ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಜೀವನದಲ್ಲಿ ಶ್ರೇಷ್ಠತೆ […]