ತುರ್ತು ಸಂದರ್ಭದಲ್ಲಿ ಸನ್ನದ್ದರಿರಿ: ಕರಾವಳಿ ಕಾವಲು ಪೊಲೀಸ್ಗೆ ಸೂಚನೆ
ಉಡುಪಿ: ಇತ್ತೀಚೆಗೆ ದಿನಗಳಲ್ಲಿ ಉದ್ಭವಿಸಿರುವ ಆತಂಕ ಪರಿಸ್ಥಿತಿಯ ಹಿನ್ನಲೆಯಲ್ಲಿ , ಕರಾವಳಿ ಕಾವಲು ಪೊಲೀಸರಿಂದ ಸಮುದ್ರಗಸ್ತು ತೀವ್ರಗೊಳಿಸಿದ್ದು, ಈ ಹಿನ್ನಲೆಯಲ್ಲಿ ಎ.ಎಮ್.ಪ್ರಸಾದ್ ಡಿಜಿಪಿ ಐಎಸ್ಡಿ ಹಾಗೂ ಸಿ.ಹೆಚ್ ಪ್ರತಾಪರೆಡ್ಡಿ, ಎಡಿಜಿಪಿ ಐಎಸ್ಡಿ ಬೆಂಗಳೂರು ರವರು , ಉಡುಪಿ ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಕರಾವಳಿಯ ಸಮುದ್ರದಲ್ಲಿ ಇಂಟರ್ಸೆಪ್ಟರ್ ಬೋಟ್ನಲ್ಲಿ ಪೆಟ್ರೋಲಿಂಗ್ ಮಾಡಿದ ಅವರು, ಶ್ರೀಲಂಕಾದಲ್ಲಿ ಸಂಭವಿಸಿರುವ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ , ಕರಾವಳಿ ಕಾವಲು ಪೊಲೀಸ್ವತಿಯಿಂದ , ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರದತನಕ ಬಿಗಿ ಭದ್ರತೆ, […]
ಸಿಇಟಿ ಪರೀಕ್ಷೆ: ನಿಷೇದಾಜ್ಞೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್ 29 ಮತ್ತು 30 ರಂದು, ಉಡುಪಿ ತಾಲೂಕಿನ 6, ಕುಂದಾಪುರ ತಾಲೂಕಿನ 3 ಮತ್ತು ಕಾರ್ಕಳ ತಾಲೂಕಿನ 2 ಸೇರಿದಂತೆ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಈ ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷ ರಹಿತವಾಗಿ ನಡೆಯಲು, ಎಲ್ಲಾ ರೀತಿಯ ಅವ್ಯವಹಾರ ತಡೆಗಟ್ಟಲು ಮತ್ತು ಕಿಡಿಗೇಡಿಗಳು ಪರೀಕ್ಷಾ ಕೇಂದ್ರದ ಪರಿಸರವನ್ನು ಕಲುಷಿತಗೊಳಿಸದಂತೆ, ನಿಗಧಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಸುತ್ತಲೂ […]
ಹೆಮ್ಮಾಡಿ ಹಬ್ಬದಾಗ್ ಗಿರ್ಕಿ ಹೊಡದ್: ಶ್ರೀಕಾಂತ್ ಹೆಮ್ಮಾಡಿ ಬರೆದ ಜಾತ್ರಾ ಸ್ಪೆಷಲ್ ಬರಹ
ಚೆಣ್ಕಿಪ್ಪತಿಗಿಂದ್ ಹಿಡ್ದ್ ಹಳ್ತ್ ಆರು ಈ ಹೆಮ್ಮಾಡಿ ಹಬ್ಬದ್ ನೆನ್ಪ್ ಅಂಬುದ್ ಹಾಂಗೆ ಇರತ್ ಕಾಣಿ. ಈಗಳೂ ಹೆಮ್ಮಾಡಿ ಹಬ್ಬದ್ ಗರ್ನಗೆ ಕಾಲಿಟ್ರೆ ಹಳಿ ನೆನ್ಪೆಲ್ಲಾ ಒಂದ್ಸಲ ಹಾಂಗೆ ರಪಕ್ ಅಂದೆಳಿ ಪಾಸ್ ಆಯ್ ಹ್ವಾತ್ತ್ ಕಾಣಿ. ಅಂತದ್ದೆ ಕೆಲವೇ ಕೆಲವ್ ನೆನ್ಪ್ಗಳನ್ನ್ ನಾನ್ ನಿಮ್ಮುಟ್ಟಿಗ್ ಹಂಚ್ಕಂತೆ. ಆಗಳಿಕೆಲ್ಲಾ ಪಾಸ್ಪೈಲ್ ಆದ್ ಕೂಡ್ಲೆ ನೆನ್ಪಿಗ್ ಬಪ್ಪುದ್ ಹೆಮ್ಮಾಡಿ ಹಬ್ಬ. ಪಾಸ್ ಪೈಲ್ ಆದ್ ಮಾರ್ನೆ ದಿನ್ವೆ ಹೆಮ್ಮಾಡಿ ಹಬ್ಬ ಏಗಳಿಕ್ ಬತತಪ್ಪಾ ಅಂತ್ ಕಾಂತ ಕೂಕಂಬುದ್ […]
ರೋಚಕ ಘಟ್ಟದಲ್ಲಿ ಅಣುಕು ಸಾಮಾನ್ಯ: ಅಶ್ವಿನ್
ಬೆಂಗಳೂರು: ಬುಧವಾರ ನಡೆದ ನನ್ನ ಮತ್ತು ವಿರಾಟ್ ಕೊಹ್ಲಿ ಆವರ ನಡವಳಿಕೆಯು ಆ ಸಂದರ್ಭದ ಒತ್ತಡದಲ್ಲಿ ನಡೆದಿದೆಯಷ್ಟೇ ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಹೇಳಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ 202 ರನ್ಗಳ ಗುರಿ ನೀಡಿತ್ತು. ಬೆನ್ನಟ್ಟಿದ ಪಂಜಾಬ್ ಗೆ ಕೊನೆಯ ಓವರ್ನಲ್ಲಿ 27 ರನ್ಗಳ ಅಗತ್ಯವಿತ್ತು. ಆ ಓವರ್ ಬೌಲಿಂಗ್ ಮಾಡಿದ ಉಮೇಶ್ ಯಾದವ್ ಎಸೆತವನ್ನು ಅಶ್ವಿನ್ ಲಾಂಗ್ ಆನ್ ಬೌಂಡರಿ ಗೆರೆ ದಾಟಿಸುವ ಪ್ರಯತ್ನ ಮಾಡಿದರು. ಆದರೆ […]
ಶ್ರೀಲಂಕಾ ಸ್ಫೋಟದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಶಾಂತಿ, ಪ್ರೀತಿ ಅಹಿಂಸೆಯಿಂದ ಜಗತ್ತು ಗೆಲ್ಲಲು ಸಾಧ್ಯ: ಜೆರಾಲ್ಡ್ ಐಸಾಕ್
ಉಡುಪಿ: ಶ್ರೀಲಂಕಾದಲ್ಲಿ ಉಗ್ರರ ಸ್ಫೋಟಕ್ಕೆ ಮೃತರಾದವರಿಗೆ ಗುರುವಾರ ನಗರದ ಶೋಕಮಾತ ಇಗರ್ಜಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅವರು ಮಾತನಾಡಿ ಭಯೋತ್ಪಾದನೆ, ಹಿಂಸೆ, ದ್ವೇಷ ಹಾಗೂ ಕ್ರೂರ ಕೃತ್ಯಗಳಿಂದ ಜಗತ್ತನ್ನು ನಾಶ ಮಾಡಲು ಸಾಧ್ಯವಿಲ್ಲ. ಬದಲಾಗಿ ಶಾಂತಿ, ಪ್ರೀತಿ, ಅಹಿಂಸೆ ಹಾಗೂ ಕ್ಷಮೆಯ ಮೂಲಕ ಜಗತ್ತನ್ನು, ಮಾನವ ಕುಲವನ್ನು ಜಯಿಸಲು ಸಾಧ್ಯ’ ಎಂದರು. ತಮ್ಮದಲ್ಲದ ತಪ್ಪಿಗೆ ನೂರಾರು ಮಂದಿ ಬಲಿಯಾಗಿದ್ದಾರೆ. ಈ ಕ್ರೂರ ಕೃತ್ಯವನ್ನು ಇಡೀ ಜಗತ್ತು ಖಂಡಿಸುತ್ತದೆ. […]