ಸಖತ್ ಸದ್ದು ಮಾಡ್ತಿದೆ “ಆಸರೆ” ಆಲ್ಬಂ ಸಾಂಗ್: ಇಲ್ಲಿದೆ ಪ್ರೀತಿ-ಪ್ರೇಮದ ನಶೆ,ಒಲವಿನ ಪರಿಭಾಷೆ
ಕೋಸ್ಟಲ್ ವುಡ್ ನಲ್ಲಿ ಸಣ್ಣನೆ ಆಲ್ಬಾಂ ಸಾಂಗುಗಳು ಗುಲ್ಲೆಬ್ಬಿಸುತಿದೆ . ತುಳು ಭಾಷೆಯ ಲ್ಲಿ ನಿರ್ಮಾಣ ಗೊಂಡ ಆಲ್ಬಂ “ಆಸರೆ” ಪ್ರೋಮೋ ಯೂಟ್ಯೂಬ್ನ ಲ್ಲಿ ರಿಲೀಸ್ ಆಗಿದ್ದು ವೈರಲ್ ಆಗುತ್ತಿದೆ.. ಬಲೆತೆಲಿಪಾಲೆ ಖ್ಯಾತಿಯ ಕನಸು ಕಡ್ತಲ ಹಾಗು ಕರಾವಳಿಯ ಪ್ರತಿಷ್ಠಿತ www.manipalchoice.com ಸಂಸ್ಥೆ ಗಳ ಸಹಯೋಗ ದಲ್ಲಿ ನಿರ್ಮಾಣ ಗೊಂಡ ಈ ಆಸರೆ ಆಲ್ಬಂ ಅರಳು ಪ್ರತಿಭೆ ಗಳಾದ ಉಮೇಶ್ ಆಚಾರ್ಯ ಅಭಿಲಾಶ್ ಪೂಜಾರಿ ಸಾಹಿತ್ಯದ ಲ್ಲಿ ಮೂಡಿ ಬಂದಿದ್ದು ಕರಾವಳಿ ಕರ್ನಾಟಕದ ಗಾನ ಕೋಗಿಲೆ ಬಿರುದಾಂಕಿತ ಗಂಗಾಧರ್ […]
ಕುಡಿಯುವ ನೀರಿನ ಬೇಡಿಕೆ ಈಡೇರಿಸದ ಜಿಲ್ಲಾಡಳಿತ:ಸ್ಥಳೀಯರಿಂದ ಮತದಾನ ಬಹಿಷ್ಕಾರ
ಕುಂದಾಪುರ: ಬಿಜೂರು ಗರಡಿ, ಕಳಿಹಿತ್ಲು, ನಿಸರ್ಗಕೇರಿ ಗ್ರಾಮಸ್ಥರು ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕಾರ ಹಾಕಿದರು. ಕಳೆದ ಕೆಲ ವರ್ಷಗಳಿಂದ ಕುಡಿಯುವ ನೀರಿನ ಬೇಡಿಕೆ ಇಡುತ್ತಲೇ ಬಂದಿದ್ದೇವೆ. ಆದರೆ ಜಿಲ್ಲಾಡಳಿತ ನಮ್ಮ ಬೇಡಿಕೆ ಈಡೇರಿಸಿಲ್ಲ ಹೀಗಾಗಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಇಲ್ಲಿನ ನಿವಾಸಿಗಳು ಒಂದು ತಿಂಗಳ ಹಿಂದೆಯೇ ಬ್ಯಾನರ್ ಅಳವಡಿಸಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಮಧ್ಯಪ್ರವೇಶಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆಂದು ಗ್ರಾಮಸ್ಥರ ಮನವೊಲಿಸಿದ ಬಳಿಕ ಬ್ಯಾನರ್ ತೆರವುಗೊಳಿಸಲಾಗಿತ್ತು. […]
ಕೆರಾಡಿ ಪ್ರಾಥಮಿಕ ಶಾಲೆಯಲ್ಲಿ ಚಿತ್ರನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ ಚಲಾವಣೆ
ಬೈಂದೂರು: ಚಿತ್ರನಟ, ನಿರ್ದೇಶಕ ರಿಷಬ್ ಶೆಟ್ಟಿ ಕೆರಾಡಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು
ಮಣಿಪಾಲ ಭೇಟಿ ಖುಷಿ ಕೊಟ್ಟಿದೆ: ರಾಹುಲ್ ದ್ರಾವಿಡ್
ಮಣಿಪಾಲ:ಮಣಿಪಾಲ ಭೇಟಿ ಅವಿಸ್ಮರಣೀಯ ಅನುಭವ ಕೊಟ್ಟಿದೆ.ಏಕೆಂದರೆ ಮಣಿಪಾಲ ಸಮೂಹವು ತನ್ನ ಸಂಶೋಧನಾ ಚಟುವಟಿಕೆಗಳಿಗೆ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿಗೆ ಹೆಸರುವಾಸಿಯಾಗಿದೆ ಎಂದು ಖ್ಯಾತ ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಅವರು ಮಂಗಳವಾರ ಮಣಿಪಾಲ ಆಸ್ಪತ್ರೆಗಳ ಪ್ರಚಾರ ರಾಯಭಾರಿಯಾಗಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಭ್ರೂಣ ಶಿಶು ಔಷಧ ವಿಭಾಗ ಮತ್ತು ಹಿರಿಯ ನಾಗರೀಕರ ಚಿಕಿತ್ಸಾಲಯ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು. “ಭ್ರೂಣದ ಮೆಡಿಸಿನ್ ಮತ್ತು ಹಿರಿಯ ನಾಗರೀಕರ ಚಿಕಿತ್ಸಾಲಯವು ವೈದ್ಯಕೀಯ ವಿಜ್ಞಾನದಲ್ಲಿ ಒಂದು ಪ್ರಗತಿಯಾಗಿದ್ದು ಮತ್ತು ಇದು ಸಾರ್ವಜನಿಕರಿಗೆ ಬಹಳಷ್ಟು […]
ಮುನಿಯಾಲು: ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು, ಮನೆಗಳಿಗೆ ಹಾನಿ ಅಪಾರ ನಷ್ಟ
ಉಡುಪಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಿದ್ದು ಅಪಾರ ಹಾನಿ ಸಂಭವಿಸಿದೆ. ಕಾರ್ಕಳ ತಾಲೂಕಿನ ಮುನಿಯಾಲು ಭಾಗದಲ್ಲಿ ಸಂಜೆಯ ವೇಳೆಗೆ ಬೀಸಿದ ಭಾರಿ ಗಾಳಿಯಿಂದಾಗಿ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವಾರು ಮನೆಗಳ ಹಂಚು, ಶೀಟ್ಗಳು ಗಾಳಿಗೆ ಹಾನಿಯಾಗಿದೆ. ಸ್ಥಳೀಯ ಕಾಲೇಜು ಕಂಪೌಂಡ್ ಹಾನಿಯಾಗಿದೆ. ಗಾಳಿಯಿಂದಾಗಿ ಮರಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲ ತಾಸು ರಸ್ತೆ ರಸ್ತೆ ತಡೆಯುಂಟಾಗಿದೆ. ಉಡುಪಿ ನಗರದಲ್ಲೂ ಗಾಳಿ ಸಹಿತ ಉತ್ತಮ ಮಳೆಯಾಗಿದೆ.