ನಾನು ಐದು ವರ್ಷದಲ್ಲಿ ತುಂಬಾ ಕೆಲಸ ಮಾಡಿದ್ದೇನೆ: ಶೋಭಾ ಕರಂದ್ಲಾಜೆ

ಕುಂದಾಪುರ: ಕಳೆದ ೭೦ ವರ್ಷಗಳಲ್ಲಿ ಆಗದಿರುವಂತಹ ಕೆಲಸವನ್ನು ನಾನು ಈ ೫ ವರ್ಷಗಳಲ್ಲಿ ಮಾಡಿದ್ದೇನೆ.ಇಷ್ಟನ್ನು ಇಲ್ಲಿ ಬೇರೆ ಯಾರೂ ಮಾಡಿಲ್ಲ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.ಅವರು ಗುರುವಾರ ಕುಂದಾಪುರದ ಕೋರ್ಟ್‌ನಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರ ಬಳಿ ಮತಯಾಚಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ನಾನು ತಂದ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರವೇ ಮಾತನಾಡಿದ್ದೇನೆ. ಜಯಪ್ರಕಾಶ್ ಹೆಗ್ಡೆ ನಮ್ಮ ಪಕ್ಷದ ಹಿರಿಯ […]

ಕಾರ್ಕಳದ ಈ ಬ್ಯಾಂಕ್ ಉದ್ಯೋಗಿಗೆ ಓಲ್ಡ್ ಇಸ್ ಗೋಲ್ಡ್: ಹಳೆ ವಸ್ತುಗಳಿಗಾಗಿ ಊರೂರಿಗೆ ಹೋಗ್ತಾರೆ, ಅದ್ರಲ್ಲೇ ಖುಷಿ ಪಡ್ತಾರೆ

ಉತ್ತಮ ಹವ್ಯಾಸಗಳು ನಮ್ಮ ದಿನನಿತ್ಯದ ಜೀವನ ಶೈಲಿಯ ಭಾಗವಾಗಿದೆ. ಒತ್ತಡದ ಬದುಕಿಗೆ ನೆಮ್ಮದಿಯ ಆಹ್ಲಾದಕರ ಹವ್ಯಾಸ ನಮಗೆ ಖುಷಿ ಕೊಡುತ್ತದೆ. ಇಲ್ಲೊಬ್ಬರಿದ್ದಾರೆ ನೋಡಿ ಇವರಿಗೆ ಓಲ್ಡ್ ಇಸ್ ಗೋಲ್ಡ್. ಕಾರ್ಕಳ ತಾಲೂಕಿನ ಹಜಂಕಬೆಟ್ಟುವಿನ ಕೆ.ಮಂಜುನಾಥ್ ಮೂಲತಃ ಬ್ಯಾಂಕ್ ಉದ್ಯೋಗಿ . ಬ್ಯಾಂಕ್ ಉದ್ಯೋಗದ ಜೊತೆಗೆ ಪುರಾತನ ನೂರಾರುವರ್ಷಗಳ ಹಿಂದಿನ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ವಿಶಿಷ್ಟ ಹವ್ಯಾಸವನ್ನು ರೂಪಿಸಿಕೊಂಡಿದ್ದಾರೆ. ಇವರ ಬಳಿ ಹಳೆಯ ಕಾಲದ ನಾಣ್ಯಗಳು ಸುಮಾರು 25 ಸಾವಿರಕ್ಕೂ ಮಿಕ್ಕಿ ಇದೆ ಅಂದರೆ ನಂಬಲೇಬೇಕು. ಐತಿಹಾಸಿಕ ಕತೆ ಹೇಳುವ […]