ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1,513231 ಮತದಾರರು

ಎಪ್ರಿಲ್ 18 ರಂದು  ನಡೆಯುವ ಉಡುಪಿ  ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂದಿಸಿದಂತೆ,  ಕುಂದಾಪುರದ 222 ಮತಗಟ್ಟೆ ವ್ಯಾಪ್ತಿಯಲ್ಲಿ 97,692 ಪುರುಷರು, 1,05585 ಮಹಿಳೆಯರು ಮತ್ತು ಇತರೆ 2 ಸೇರಿ ಒಟ್ಟು 2,03279, ಉಡುಪಿ ಯ 226 ಮತಗಟ್ಟೆ ವ್ಯಾಪ್ತಿಯಲ್ಲಿ 1,01386 ಪುರುಷರು, 1,08116 ಮಹಿಳೆಯರು ಮತ್ತು ಇತರೆ 2 ಸೇರಿ ಒಟ್ಟು 2,09504, ಕಾಪು ನ 208 ಮತಗಟ್ಟೆ ವ್ಯಾಪ್ತಿಯಲ್ಲಿ 87,704 ಪುರುಷರು, 96,384 ಮಹಿಳೆಯರು ಮತ್ತು ಇತರೆ 13 ಸೇರಿ ಒಟ್ಟು 1,84101, ಕಾರ್ಕಳದ 209  […]

ಮತದಾನದ ಮಹತ್ವ ಸಾರಿದ ಯಕ್ಷಗಾನ

ಉಡುಪಿ: ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಮಹತ್ವವನ್ನು ಸಾರುವ ಯಕ್ಷಗಾನ ಹಾಗೂ ಚಿತ್ರಕಲಾ ಪ್ರದರ್ಶನ ಗುರುವಾರ ಉಡುಪಿ ನಿರ್ಮಿತಿ ಕೇಂದ್ರದ ಆವರಣದಲ್ಲಿ ನಡೆಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪದ್ಧತಿಯಿಂದ ಪ್ರಜಾಡಳಿತ ಜಾರಿಗೆ ಬಂದು, ಜನಪ್ರತಿನಿಧಿಗಳ ಪಾತ್ರ ಹಾಗೂ ಅವರ ಆಯ್ಕೆಯಲ್ಲಿ ಮತದಾರರು ವಹಿಸಬೇಕಾದ ಜಾಗರೂಕತೆ, ಹಣ ಆಮಿಷಕ್ಕೊಳಗಾಗಿ ಮತದಾನ ಮಾಡುವುದರ ಕೆಡುಕುಗಳು, ಚುನಾವಣೆ ಪ್ರಕ್ರಿಯೆಯಲ್ಲಿ ಜನಸಮಾನ್ಯರ ಪಾತ್ರ ಮತ್ತಿತರ ವಿಷಯಗಳ ಬಗ್ಗೆ ಕೋಟ ಕಲಾಪೀಠ ತಂಡದವರು ಯಕ್ಷಗಾನದ ಮೂಲಕ […]

ಚುನಾವಣ ಕರ್ತವ್ಯ ನಿರತ ಸಿಬ್ಬಂದಿ ಮತದಾನದಿಂದ ವಂಚಿತರಾಗಬಾರದು: ಅಪರ ಜಿಲ್ಲಾಧಿಕಾರಿ

ಏಪ್ರಿಲ್ 18 ರಂದು ನಡೆಯುವ ಉಡುಪಿ -ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ  ಅವರಿಗೆ ಅಂಚೆಮತ ಪತ್ರ ಮತ್ತು ಇಡಿಸಿ ವಿತರಿಸುವಲ್ಲಿ  ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸೂಚಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ನಿಯೋಜಿಸರುವ  ಅಂಚೆ ಮತಪತ್ರ ನಿರ್ವಹಣೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಚುನಾವಣೆಯಲ್ಲಿ ಪ್ರತಿ ಮತವೂ ಅಮೂಲ್ಯವಾಗಿದೆ, ಅದರಲ್ಲೂ ಚುನಾವಣಾ […]

ದೇಶದ ಭದ್ರತೆ ದೃಷ್ಟಿಯಿಂದ ಮೋದಿ ಅವರನ್ನು ಬೆಂಬಲಿಸಿ :ಶೋಭಾ ಕರಂದ್ಲಾಜೆ

ಕುಂದಾಪುರ: ಮಹಾಘಟ್‌ಬಂಧನ್ ಈಗಾಗಲೇ ಛಿದ್ರವಾಗಿದೆ. ಇದಕ್ಕೆ ರಾಜ್ಯದಲ್ಲಿರುವ ಮೈತ್ರಿ ಸರಕಾರದಲ್ಲಿರುವ ಗೊಂದಲಗಳೇ ಮೊದಲ ವೈಫಲ್ಯ. ದೇಶದ ಭದ್ರತೆ ದೃಷ್ಟಿಯಿಂದ ಮೋದಿ ಸರ್ಕಾರವನ್ನು ಬೆಂಬಲಿಸಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು. ಅವರು ಗುರುವಾರ ಕುಂದಾಪುರದ ಕೋರ್ಟ್‌ನಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರ ಬಳಿ ಮತಯಾಚಿಸಿದ ಬಳಿಕ ಮಾತನಾಡಿದರು. ಉಡುಪಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮತ್ತೊಮ್ಮೆ ಗೆಲ್ಲಿಸಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ […]

ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಬಿ.ಕಿಶೋರ್ ಕುಮಾರ್ ಭೇಟಿ ಮಾಡಿದ ಮಧ್ವರಾಜ್: ಪ್ರಮೋದ್ ಗೆ ಕಿಶೋರ್ ಬೆಂಬಲ

ಕುಂದಾಪುರ: ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾದ ಬಿ.ಕಿಶೋರ್ ಕುಮಾರ್ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ಮತಯಾಚಿಸಿದರು. ಗುರುವಾರ ಬೆಳಗ್ಗೆ ಕುಂದಾಪುರ ಕಲಾಕ್ಷೇತ್ರದ ಕಚೇರಿಗೆ ಆಗಮಿಸಿದ ಪ್ರಮೋದ್ ಅವರನ್ನು ಬಿ.ಕಿಶೋರ್ ಕುಮಾರ್ ಹಾಗೂ ಮಾಜಿ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ ಅವರು ಹಸ್ತಲಾಘವ ಕೊಟ್ಟು ಬರಮಾಡಿಕೊಂಡರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಪ್ರಮೋದ್ ಕೈಮುಗಿದು ಕೇಳಿಕೊಂಡರು. […]