ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1,513231 ಮತದಾರರು

ಎಪ್ರಿಲ್ 18 ರಂದು  ನಡೆಯುವ ಉಡುಪಿ  ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂದಿಸಿದಂತೆ,  ಕುಂದಾಪುರದ 222 ಮತಗಟ್ಟೆ ವ್ಯಾಪ್ತಿಯಲ್ಲಿ 97,692 ಪುರುಷರು, 1,05585 ಮಹಿಳೆಯರು ಮತ್ತು ಇತರೆ 2 ಸೇರಿ ಒಟ್ಟು 2,03279, ಉಡುಪಿ ಯ 226 ಮತಗಟ್ಟೆ ವ್ಯಾಪ್ತಿಯಲ್ಲಿ 1,01386 ಪುರುಷರು, 1,08116 ಮಹಿಳೆಯರು ಮತ್ತು ಇತರೆ 2 ಸೇರಿ ಒಟ್ಟು 2,09504, ಕಾಪು ನ 208 ಮತಗಟ್ಟೆ ವ್ಯಾಪ್ತಿಯಲ್ಲಿ 87,704 ಪುರುಷರು, 96,384 ಮಹಿಳೆಯರು ಮತ್ತು ಇತರೆ 13 ಸೇರಿ ಒಟ್ಟು 1,84101, ಕಾರ್ಕಳದ 209  ಮತಗಟ್ಟೆ ವ್ಯಾಪ್ತಿಯಲ್ಲಿ 87,915 ಪುರುಷರು, 95,612 ಮಹಿಳೆಯರು ಮತ್ತು ಇತರೆ 1 ಸೇರಿ ಒಟ್ಟು 1,83528, ಶೃಂಗೇರಿಯ 256 ಮತಗಟ್ಟೆ ವ್ಯಾಪ್ತಿಯಲ್ಲಿ  81,605 ಪುರುಷರು, 83,889 ಮಹಿಳೆಯರು ಮತ್ತು ಇತರೆ 4 ಸೇರಿ ಒಟ್ಟು 1,65498, ಮೂಡಿಗೆರೆಯ 231 ಮತಗಟ್ಟೆ ವ್ಯಾಪ್ತಿಯಲ್ಲಿ 83,054 ಪುರುಷರು, 85,711 ಮಹಿಳೆಯರು ಮತ್ತು ಇತರೆ 9 ಸೇರಿ ಒಟ್ಟು 1,68774, ಚಿಕ್ಕಮಗಳೂರಿನ 257 ಮತಗಟ್ಟೆ ವ್ಯಾಪ್ತಿಯಲ್ಲಿ 1,06964 ಪುರುಷರು, 1,07971 ಮಹಿಳೆಯರು ಮತ್ತು ಇತರೆ 23 ಸೇರಿ ಒಟ್ಟು 2,19958 ಹಾಗೂ ತರೀಕೆರೆಯ 228 ಮತಗಟ್ಟೆ ವ್ಯಾಪ್ತಿಯಲ್ಲಿ 92,183 ಪುರುಷರು, 91,406 ಮಹಿಳೆಯರು ಸೇರಿದಂತೆ ಒಟ್ಟು 1,83589 ಮತದಾರರಿದ್ದಾರೆ.

ಒಟ್ಟು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರದ 1,837 ಮತಗಟ್ಟೆಯಲ್ಲಿ 7,38503 ಪುರುಷರು, 7,74674 ಮಹಿಳೆಯರು, 54 ಇತರೆ ಸೇರಿ ಒಟ್ಟು 15,13231 ಮತದಾರರಿದ್ದಾರೆ.