ನೀತಿ ಸಂಹಿತೆ ಉಲ್ಲಂಘನೆ- ಉದ್ಯಾವರ ಜಯಲಕ್ಷ್ಮಿ ಟೆಕ್ಸ್ ಟೈಲ್ ಮೇಲೆ ದಾಳಿ

ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಉಡುಪಿ ಉದ್ಯಾವರದ ಜಯಲಕ್ಷ್ಮಿ ಟೆಕ್ಸ್ ಟೈಲ್ ನಲ್ಲಿ ನರೇಂದ್ರ ಮೋದಿ ಚಿತ್ರವುಳ್ಳ ಸೀರೆಗಳನ್ನು, ಟೋಕನ್ ಮೂಲಕ ಸಾರ್ವಜನಿಕರಿಗೆ ವಿತರಿಸುತ್ತಿರುವ ಕುರಿತ ಖಚಿತ ದೂರು ಬಂದ ಹಿನ್ನಲೆಯಲ್ಲಿ ಚುನಾವಣಾ ತಪಾಸಣಾ ತಂಡದ ಅಧಿಕಾರಿಗಳು ದಾಳಿ ನಡೆಸಿ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಮದ್ಯಾಹ್ನ 4 ಗಂಟೆಯ ವೇಳೆಗೆ ಕಾಪು ಚುನಾವಣಾಧಿಕಾರಿಗಳ ತಂಡ ದಾಳಿ ನಡೆಸಿತ್ತು. ಆದರೆ ಅಂಗಡಿ ಮಾಲೀಕರು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ […]

ಲೋಕಸಭೆ ಚುನಾವಣೆ: ಎರಡನೇ ಹಂತದಲ್ಲಿ ಯುಪಿಪಿ ಪಕ್ಷದಿಂದ 14 ಮಂದಿ ಕಣಕ್ಕೆ: ಉಪೇಂದ್ರ

ಉಡುಪಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಈಗಾಗಲೇ  ಪಕ್ಷದ 14 ಮಂದಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, ಎರಡನೆ ಹಂತದಲ್ಲಿ ಮತ್ತೆ 14 ಮಂದಿಯ ಅಭ್ಯರ್ಥಿಯ ಹೆಸರನ್ನು ಎ.7ರ ನಂತರ ಘೋಷಣೆ ಮಾಡಲಾಗುವುದು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ಚಿತ್ರನಟ ಉಪೇಂದ್ರ ಹೇಳಿದರು. ಉಡುಪಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರಗಳಿಗೂ ಭೇಟಿ ನೀಡಿ ಅಭ್ಯರ್ಥಿಗಳನ್ನು ಮಾಧ್ಯಮದ ಮೂಲಕ ಜನರಿಗೆ ಪರಿಚಯಿಸಿ ಪಕ್ಷ ವಿಚಾರವನ್ನು ತಿಳಿಸುವ ಕಾರ್ಯ ಮಾಡುತ್ತಿದ್ದೇನೆ. ನಮ್ಮ ಪಕ್ಷ ವಿಭಿನ್ನ ಅಲ್ಲ. ಇಂದಿನ ಸುಳ್ಳಿನ […]

ದ.ಕ–ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌: ನೂತನ ಅಧ್ಯಕ್ಷರಾಗಿ ‘ಯಶ್‌ಪಾಲ್‌ ಸುವರ್ಣ’ ಪುನರಾಯ್ಕೆ

ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ನೂತನ ಅಧ್ಯಕ್ಷರಾಗಿ ಸತತ 4ನೇ ಅವಧಿಗೆ ಯಶ್‌ಪಾಲ್‌ ಎ. ಸುವರ್ಣ ಅವರು ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪುರುಷೋತ್ತಮ್‌ ಅಮೀನ್‌ ಉಳ್ಳಾಲ ಅವರು ಪುನರಾಯ್ಕೆಯಾಗಿದ್ದಾರೆ. ಬುಧವಾರ ನಡೆದ ಫೆಡರೇಶನ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಮಂಗಳೂರಿನ ಲೆಕ್ಕಪರಿಶೋಧನಾ ಉಪನಿರ್ದೇಶಕ ಮಹೇಶ್ವರಪ್ಪ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಯಶ್‌ಪಾಲ್‌ ಸುವರ್ಣ ಅವರು 2009ರಲ್ಲಿ ಫೆಡರೇಶ್‌ನ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ಫೆಡರೇಶನಿನ ಪ್ರಮುಖ ವ್ಯವಹಾರಗಳಾದ ಸಿಗಡಿ ಮಾರಾಟ, ಡೀಸಿಲ್‌ […]

ನಾಗರಿಕ ಸಮಿತಿಯಿಂದ ಜಾನುವಾರು ಪಕ್ಷಿಗಳಿಗೆ ನೀರುಣಿಸಲು “ಕಲ್ಲ್ ಮರ್ಗಿ” ವ್ಯವಸ್ಥೆ

ಉಡುಪಿ: ವಾತಾವರಣದಲ್ಲಿ ಸುಡು ಬಿಸಿಲ ಧಗೆ ಏರಿಕೆ ಕಂಡು ಬಂದಿದೆ. ಪರಿಸರದ ಬಾವಿ ಹಳ್ಳ ಕೊಳಗಳು ಬತ್ತಲಾರಂಬಿಸಿವೆ. ಜಾನುವಾರು, ಬೀದಿನಾಯಿ, ಪಕ್ಷಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜೀವ ಸಂಕುಲಗಳಿಗೆ  ನೀರುಣಿಸುವ ಸಲುವಾಗಿ, ಉಡುಪಿ ಜಿಲ್ಲಾ ನಾಗರೀಕ ಸಮಿತಿಯು ರಥಬೀದಿ ರಾಘವೇಂದ್ರ ಮಠದ  ಮುಂಬಾಗದ ಆಯಾಕಟ್ಟಿನ ಸ್ಥಳದಲ್ಲಿ  (ಕಲ್ಲ್ ಮರಾಯಿ) ಕಲ್ಲ್ ಮರ್ಗಿ ಇಟ್ಟು, ಜೀವ ಸಂಕುಲಗಳಿಗೆ ದಾಹ ತಣಿಸಲು ಸಹಕರಿಸಿದೆ. ಈ ಕಲ್ಲು ಮರ್ಗಿಯು 150 ವರ್ಷಗಳ ಹಳೆಯದಾಗಿದ್ದು, ಈ ಕಲ್ಲು ಮರ್ಗಿ ಭಂಡಾರಿಗದ್ದೆ ದಿ.ಎಲ್ಲು […]