ಹಿರಿಯಡಕ : ಆಂಗ್ಲಭಾಷೆ ಕಲಿಕೆಯ ಉಪನ್ಯಾಸ
ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕದಲ್ಲಿ ಮಾರ್ಚ್ 26 ರಂದು ಆಂಗ್ಲಭಾಷಾ ವಿಭಾಗದ ಆಶ್ರಯದಲ್ಲಿ ಆಂಗ್ಲಭಾಷೆಯ ಕಲಿಕೆಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಶಂಕರನಾರಾಯಣ ಮದರ್ ಥೆರೆಸಾ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕ ರಾಮ ಭಟ್ಟ ಮಾತನಾಡಿ, ಪ್ರಮುಖವಾಗಿ ಆಂಗ್ಲಭಾಷೆಯ ಮೇಲಿನ ಭಯವನ್ನು ಹೋಗಲಾಡಿಸಿದರೆ ಆ ಭಾಷೆಯನ್ನು ಸುಲಭವಾಗಿ ಕಲಿಯಬಹುದು ಎಂದು ನುಡಿದರು. ವಿದ್ಯಾರ್ಥಿಗಳಲ್ಲಿ ಆಂಗ್ಲಭಾಷೆಯನ್ನು ಕಲಿಯುವಾಗ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳು ಮತ್ತು ಅವುಗಳನ್ನು ಎದುರಿಸುವ ರೀತಿಯ ಬಗ್ಗೆ ಮಾತನಾಡಿದರು. ಕಾಲೇಜಿನ […]
ಹಿರಿಯಡಕ : ಕ್ರೀಡೆ ಹಾಗೂ ಶಾರೀರಿಕ ಚಟುವಟಿಕೆಗಳ ಬಗ್ಗೆ ಯುವ ಜನಾಂಗ ದೃಷ್ಟಿಕೋನ- ವಿಶೇಷ ಕಾರ್ಯಕ್ರಮ
ಉಡುಪಿ: ಐಕ್ಯುಎಸಿ ಹಾಗೂ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಿಂದ ಇತ್ತೀಚೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇಲ್ಲಿ ‘ಕ್ರೀಡೆ ಹಾಗೂ ಶಾರೀರಿಕ ಚಟುವಟಿಕೆಗಳ ಬಗ್ಗೆ ಯುವ ಜನಾಂಗ ದೃಷ್ಟಿಕೋನ” ಎಂಬ ವಿಷಯದ ಬಗ್ಗೆ ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೋರಿಯಲ್ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ಬೋಧಕರಾದ ಜಯಭಾರತಿ ಎ. ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯುವ ಜನರು ಹೆಚ್ಚು […]
ವೈರಲ್ ಆಯ್ತು ‘ಚೌಕಿದಾರ್ ಶೇರ್ ಹೈ’ ಪೋಸ್ಟರ್
ಮಂಗಳೂರು:ಮಂಗಳೂರಿನ ಕಲಾವಿದ ರಚಿಸಿದ ‘ಚೌಕಿದಾರ್ ಶೇರ್ ಹೈ ಪೋಸ್ಟರ್ ಸಾಮಾಜಿಕ ಜಾಲ ತಾಣಗಳಲ್ಲಿ ಇದೀಗ ವೈರಲ್ ಆಗಿದೆ. ‘ಮೈ ಭಿ ಚೌಕಿದಾರ್’ ಅಭಿಯಾನ ಮಧ್ಯೆ ‘ಚೌಕಿದಾರ್ ಶೇರ್ ಹೈ’ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ಮಂಗಳೂರಿನ ಕಲಾವಿದ ಜೀವನ್ ಆಚಾರ್ಯ ರಚಿಸಿರುವ ‘ಚೌಕಿದಾರ್ ಶೇರ್ ಹೈ’ ಪೋಸ್ಟರ್ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳ ಪ್ರೊಫೈಲ್‌ನಲ್ಲಿ ಅಪ್‌ಲೋಡ್ ಆಗುತ್ತಿದ್ದು. ಹವಾ ಕ್ರಿಯೇಟ್ ಮಾಡಿದೆ. ಅಂದ ಹಾಗೆ 23 ವರ್ಷದ ಡಿಜಿಟಲ್ ಕಲಾವಿದ ಜೀವನ್ ಆಚಾರ್ಯ ಅವರು, ಪ್ರಧಾನಿ ಮೋದಿ […]
ವಿಜಯಾ ಬ್ಯಾಂಕ್ ಇನ್ನಿಲ್ಲ: ಏ.1 ರಿಂದ ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನ
ಉಡುಪಿ : ನಮ್ಮೂರಿನ ಹೆಮ್ಮೆಯ ವಿಜಯ ಬ್ಯಾಂಕ್ ಉಳಿಸಿ ಎನ್ನುವ ಕುರಿತು ಸಾಕಷ್ಟು ಜನಪರ ಹೋರಾಟಗಳು ನಡೆದರೂ ಏ.೧ ರಿಂದ ದಕ್ಷಿಣ ಕನ್ನಡ ಮೂಲದ ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಳ್ಳಲಿದೆ. ಈ ಕುರಿತು ಇದೀಗ ಅಧಿಕೃತವಾಗಿ ಬ್ಯಾಂಕಿನ ಗ್ರಾಹಕರಿಗೆ ಸಂದೇಶ ರವಾನೆಯಾಗಿದೆ. ಎಪ್ರಿಲ್ 1ರಿಂದ ವಿಜಯ ಬ್ಯಾಂಕ್ ಹೆಸರೂ, ಹಳದಿ ಲೋಗೋ ಕೂಡ ಗ್ರಾಹಕರ ಕಣ್ಣಿಂದ ಕಣ್ಮರೆಯಾಗಲಿದೆ. ಇನ್ನೇನಿದ್ದರೂ ಬ್ಯಾಂಕ್ ಹೆಸರು ಇತಿಹಾಸದ ಪುಟ ಸೇರಲಿದೆ. ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕ್ ಅನ್ನು […]
ಎಸ್.ಎಸ್.ಎಲ್.ಸಿ ಪರೀಕ್ಷೆ: 180 ಮಂದಿ ಗೈರು
ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಎಸ್‍ಎಸ್‍ಎಲ್‍ಸಿ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 13584 ಮಂದಿ ಪರೀಕ್ಷೆ ಬರೆದಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 13,764 ಮಂದಿ ನೊಂದಾಯಿಸಿದ್ದು, ಇದರಲ್ಲಿ 180 ಮಂದಿ ಗೈರು ಹಾಜರಾಗಿದ್ದಾರೆ. ಪರೀಕ್ಷೆಗೆ ನೊಂದಾಯಿಸಿದ ರೆಗ್ಯುಲರ್ ಮತ್ತು ರೆಗ್ಯುಲರ್ ಪುನರಾವರ್ತಿತ 13317 ಮಂದಿ ವಿದ್ಯಾರ್ಥಿಗಳಲ್ಲಿ 126 ಮಂದಿ ಗೈರು ಹಾಜರಾಗಿದ್ದು, 13191 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. 447 ಮಂದಿ ಖಾಸಗಿಯಾಗಿ ಪರೀಕ್ಷೆಗೆ ನೊಂದಾಯಿಸಿದ್ದ ಅಭ್ಯರ್ಥಿಗಳಲ್ಲಿ 54 ಮಂದಿ ಗೈರು ಹಾಜರಾಗಿದ್ದು, 393 ಮಂದಿ […]