ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ: ಕಡ್ಡಾಯ ಹಾಜರಾತಿಗೆ ಸೂಚನೆ

ಉಡುಪಿ: ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ 2019 ರ ಕರ್ತವ್ಯ ನಿರ್ವಹಿಸಲು ನೇಮಕಾತಿ ಆದೇಶ ಪಡೆದ ಎಲ್ಲಾ ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮಾರ್ಚ್ 31 ರಂದು 118- ಬೈಂದೂರು ವಿಧಾನಸಭಾ ಕ್ಷೇತ್ರದ ಶೀರೂರು ಗ್ರೀನ್ ವ್ಯಾಲಿ ಇಂಟರ್ ನ್ಯಾಷನಲ್ ಸ್ಕೂಲ್, 119- ಕುಂದಾಪುರ ವಿಧಾನಸಭಾ ಕ್ಷೇತ್ರದ ಕುಂದಾಪುರ ಜೂನಿಯರ್ ಕಾಲೇಜು, 120- ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಗಿರಿ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆ, 121- ಕಾಪು ವಿಧಾನಸಭಾ ಕ್ಷೇತ್ರದ ಕಾಪು ಉಳಿಯಾರಗೋಳಿ ದಂಡತೀರ್ಥ […]

ಕುಂದಾಪುರ:ವಿಶ್ವ ರಂಗಭೂಮಿ ದಿನಾಚರಣೆ

ಕುಂದಾಪುರ: ಮೃಗವಾಗಿದ್ದ ನಮ್ಮ ಪೂರ್ವಜರು ಮಾನವರಾದದ್ದು ಕೇವಲ ಜೈವಿಕ ವಿಕಾಸದಿಂದಷ್ಟೇ ಅಲ್ಲ, ನಾವು ಮನುಷ್ಯ ಎಂದು ಕರೆಯಿಸಿಕೊಳ್ಳಲು ಸಾಧ್ಯವಾದದ್ದೇ ಸಾಂಸ್ಕ್ರತಿಕ ವಿಕಾಸದಿಂದ. ಪ್ರಶ್ನೆಯೇ ನಮ್ಮಲ್ಲಿ ಪ್ರಜ್ಞೆಯನ್ನು ಹುಟ್ಟಿಸಿತು. ಆ ಪ್ರಶ್ನೆಯನ್ನು ಇನ್ನೊಬ್ಬರಿಗೆ ಕೇಳುವಾಗಲೇ ರಂಗಭೂಮಿ ಹುಟ್ಟಿತು ಎಂದು ಸಮುದಾಯ ಸಂಘಟನೆಯ ಅಧ್ಯಕ್ಷ ಉದಯ ಗಾಂವ್ಕರ್ ಹೇಳಿದರು. ಅವರು ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಬುಧವಾರ ಸಮುದಾಯ ಸಾಂಸ್ಕ್ರತಿಕ ಸಂಘಟನೆ, ಜೇಸಿಐ ಕುಂದಾಪುರ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಜೆಸಿಐ ಭವನದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ […]

ಉಡುಪಿಯಲ್ಲಿ ಉತ್ಕರ್ಷ ಯೋಗ ಶಿಬಿರ

ಉಡುಪಿ: ರವಿಶಂಕರ್ ಗುರೂಜಿ ಅವರ ಜೀವನ ಕಲಾ ಸಂಸ್ಥೆ ಉಡುಪಿ ಇವರಿಂದ 8 ರಿಂದ 13 ವರ್ಷದ ಮಕ್ಕಳಿಗೆ ನಾಯಕತ್ವ, ಜವಾಬ್ದಾರಿ‌ ಹಾಗೂ ಒತ್ತಡ ಮುಕ್ತ ಪರೀಕ್ಷಾ ಸಿದ್ಧತೆಯನ್ನು ಏ. 1 ರಿಂದ 6 ರ ವರೆಗೆ ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಉಡುಪಿ ಕೋರ್ಟ್ ರೋಡಿನ ನೈವೇದ್ಯ ಹೋಟೆಲ್ ನಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ. ಸಂಪರ್ಕಿಸಿ: 9663140170, 9141413897

ಯಕ್ಷಗಾನ, ಬೀದಿನಾಟಕ ಮೂಲಕ ಮತದಾನ ಅರಿವು

ಹೇ ಇವತ್ತು ನಿನಗೆ ಕೂಲಿ ಕೆಲಸಕ್ಕೆ ರಜೆ ಎಂದ ಜಮೀನ್ದಾರರ ಮಾತಿನಿಂದ ಕಳವಳಗೊಂಡ ಸಿದ್ದ, ಬುದ್ದೀ ಇವತ್ತು ಕೂಲಿ ಇಲ್ಲ ಎಂದರೆ ನಾನು ನನ್ನ ಕುಟುಂಬದ ಹೊಟ್ಟೆಗೆ ತಣ್ಣಿರು ಬಟ್ಟೆಯೇ ಗತಿ ಎಂದ, ಇದಕ್ಕೆ ಉತ್ತರಿಸಿದ ಜಮೀನ್ದಾರ ಹೇ ಸಿದ್ದ, ಇಂದು ಮತದಾನದ ದಿನ ಕೂಲಿ ಕೆಲಸಕ್ಕೆ ಮಾತ್ರ ರಜೆ, ನೀನು ಓಟು ಹಾಕಿ ಬಾ, ಎಷ್ಟು ಹೊತ್ತಾದರೂ ಸರಿ ಬಾ ಇಂದಿನ ಕೂಲಿ ಕೊಡುತ್ತೇನೆ ಆದರೆ ಮತದಾನ ಮಾತ್ರ ತಪ್ಪಿಸಬೇಡ ಎನ್ನುತ್ತಾನೆ, ಇದು ಉಡುಪಿ ಜಿಲ್ಲೆಯಲ್ಲಿ […]

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ: ನಿಗಾ ವಹಿಸಲು ಕೇಂದ್ರ ವೀಕ್ಷಕರ ಸೂಚನೆ

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ ನಡೆಸುವುದರ ವಿರುದ್ಧ ತೀವ್ರ ನಿಗಾ ಇಡಬೇಕು. ಸಾಮಾಜಿಕ ಜಾಲತಾಣಗಳು ಇಲೆಕ್ಟ್ರಾನಿಕ್ ಮಾಧ್ಯಮವಾಗಿರುವುದರಿಂದ ಅವುಗಳಲ್ಲಿ ನಡೆಸುವ ಯಾವುದೇ ಪ್ರಚಾರವು ಪೂರ್ವಾನುಮತಿ ಪಡೆದಿರಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕೇಂದ್ರ ವೀಕ್ಷಕ ಕೃಷ್ಣ ಕುನಾಲ್ ಸೂಚಿಸಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಧಿಕಾರಿಗಳ ಜಂಟೀ ಸಭೆ ನಡೆಸಿ ಮಾತನಾಡುತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಲು ಇನ್ನಷ್ಟು ಪರಿಣಾಮಕಾರಿಯಾದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಮತದಾರರಿಗೆ ಮತದಾನಕ್ಕೆ […]