ವೈರಲ್‌ ಆಯ್ತು ‘ಚೌಕಿದಾರ್ ಶೇರ್‌ ಹೈ’ ಪೋಸ್ಟರ್‌

ಮಂಗಳೂರು:ಮಂಗಳೂರಿನ ಕಲಾವಿದ ರಚಿಸಿದ ‘ಚೌಕಿದಾರ್‌ ಶೇರ್‌ ಹೈ ಪೋಸ್ಟರ್ ಸಾಮಾಜಿಕ ಜಾಲ ತಾಣಗಳಲ್ಲಿ ಇದೀಗ ವೈರಲ್ ಆಗಿದೆ.
 ‘ಮೈ ಭಿ ಚೌಕಿದಾರ್‌’ ಅಭಿಯಾನ ಮಧ್ಯೆ ‘ಚೌಕಿದಾರ್‌ ಶೇರ್‌ ಹೈ’ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ.

ಮಂಗಳೂರಿನ ಕಲಾವಿದ ಜೀವನ್‌ ಆಚಾರ್ಯ ರಚಿಸಿರುವ ‘ಚೌಕಿದಾರ್‌ ಶೇರ್‌ ಹೈ’ ಪೋಸ್ಟರ್‌ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳ ಪ್ರೊಫೈಲ್‌ನಲ್ಲಿ ಅಪ್‌ಲೋಡ್‌ ಆಗುತ್ತಿದ್ದು. ಹವಾ ಕ್ರಿಯೇಟ್ ಮಾಡಿದೆ.

ಅಂದ ಹಾಗೆ 23 ವರ್ಷದ ಡಿಜಿಟಲ್‌ ಕಲಾವಿದ ಜೀವನ್‌ ಆಚಾರ್ಯ ಅವರು, ಪ್ರಧಾನಿ ಮೋದಿ ಅವರ ಅರ್ಧ ಮುಖ ಮತ್ತು ಇನ್ನರ್ಧ ಭಾಗ ಸಿಂಹದ ಮುಖವನ್ನು ಸೇರಿಸಿ, ಈ ಪೋಸ್ಟರ್‌ ನಿರ್ಮಿಸಿದ್ದು  ಸಾಮಾಜಿಕ ತಾಣದಲ್ಲಿ ಅಪ್‌ಲೋಡ್‌ ಮಾಡಿದ್ದರು. ಕೆಲವೇ ಕ್ಷಣಗಳಲ್ಲಿ ಚಿತ್ರ ವೈರಲ್ ಆಗಿದೆ. ಕಲಾವಿಧ ಮೋದಿ ಅಭಿಮಾನಿಯೂ ಆಗಿದ್ದು ಚಿತ್ರ ಹೆಚ್ಚಿನ ಮಹತ್ವ ಪಡೆಯುತ್ತಿದೆ.