ಕುಂದಾಪುರ:ಅಕ್ರಮ ಮರಳು ಸಾಗಿಸುತ್ತಿದ್ದ ಏಳು ಮಂದಿ ಬಂಧನ

ಕುಂದಾಪುರ: ಮೀನು ಸಾಗಾಟದ ಇನ್ಸುಲೇಟರ್ ವಾಹನವೊಂದರಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವಾಗ ಪೊಲೀಸರು ವಾಹನ ಸಮೇತ ಏಳು ಮಂದಿಯನ್ನು ಬಂಧಿಸಿದ ಘಟನೆ ಸೋಮವಾರ ಬೆಳಿಗ್ಗೆ ಕುಂದಾಪುರದ ಬೀಜಾಡಿ ಎಂಬಲ್ಲಿ ನಡೆದಿದೆ. ಇನ್ಸುಲೇಟರ್ ವಾಹನ ಚಾಲಕ ಕಾಸರಗೋಡು ಪಾವೂರು ಮಂಜೇಶ್ವರದ ಅಬ್ದುಲ್ ಸತ್ತಾರ್ (೨೩), ಬ್ರಹ್ಮಾವರ ವಾರಂಬಳ್ಳಿ ನಿವಾಸಿಗಳಾದ ಮಂಜುನಾಥ್ (೧೯), ಶ್ರೀಕಾಂತ್ (೨೮), ಶರಣಪ್ಪ (೧೯), ಮಂಗಳೂರು ಬಿಜೈ ನಿವಾಸಿ ರಾಜೇಶ್ ಶೆಟ್ಟಿ (೪೦), ಸುರತ್ಕಲ್ ಕುಳಾಯಿ ನಿವಾಸಿ ಸುಕೇಶ್ ಕೋಟ್ಯಾನ್ (೩೪), ಕಾಸರಗೋಡು ಪಾವೂರಿನ ನೌಶಾದ್ ಅಲಿ […]

ಈ ಬೇಸಿಗೆಯಲ್ಲಿ ಐಸ್ ಕ್ಯಾಂಡಿ ತಿನ್ನೋದು ಡೇಂಜರ್ ಮಾರ್ರೆ! ಕುಂದಾಪುರದಲ್ಲಿ ಐಸ್‌ಕ್ಯಾಂಡಿ ಸೇವಿಸಿ ಮಕ್ಕಳು, ಪೋಷಕರು ಅಸ್ವಸ್ಥ

 ಕುಂದಾಪುರ: ಭಾನುವಾರ ಮನೆ ಸಮೀಪ ಮಾರಾಟ ಮಾಡಲು ಬಂದಿರುವ ಐಸ್‌ಕ್ಯಾಂಡಿ ಸೇವಿಸಿದ ಪರಿಣಾಮ ಮಕ್ಕಳು ಸೇರಿದಂತೆ ನೂರಕ್ಕೂ ಅಧಿಕ ಪೋಷಕರು ಅಸ್ವಸ್ಥರಾದ ಘಟನೆ ಇಲ್ಲಿನ ತೊಂಬತ್ತುವಿನಲ್ಲಿ ನಡೆದಿದೆ. ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಿದ್ಕಲ್‌ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲವರು ದಾಖಲಾಗಿದ್ದು. ಇನ್ನೂ ಹಲವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಭಾನುವಾರ ಹೆಂಗವಳ್ಳಿ, ಬೆಳ್ವೆ, ತೊಂಬತ್ತು ಪ್ರದೇಶಗಳಿಗೆ […]

ಕುಂದಾಪುರ: ಅಭಿಮತ ಸಂಭ್ರಮ `ಒಡ್ಡೋಲಗ’ ಕಾರ್ಯಕ್ರಮ

ಕುಂದಾಪುರ: ಜನಸೇವಾ ಟ್ರಸ್ಟ್ ಕೋಟ-ಮೂಡುಗಿಳಿಯಾರು ಆಶ್ರಯದಲ್ಲಿ ಶನಿವಾರ ಇಲ್ಲಿನ ಸಂಯುಕ್ತ ಪ್ರೌಢ ಶಾಲೆಯ ಮೈದಾನದ ಮೈನಾಡಿಮನೆ ದಿ| ಕುಶಲ ಹೆಗ್ಡೆ ವೇದಿಕೆಯಲ್ಲಿ ಅಭಿಮತ ಸಂಭ್ರಮ `ಒಡ್ಡೋಲಗ’ ಕಾರ್ಯಕ್ರಮ ಜರಗಿತು. ಸಾಮಾಜಿಕ ಚಿಂತಕರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ| ಮೋಹನ್ ಆಳ್ವಾ ಮಾತನಾಡಿ, ಜನಾಸೇವಾ ಟ್ರಸ್ಟ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ ಹಾಗೂ ಇಂದು ಸಮ್ಮಾನಗೊಂಡಿರುವ ಸಾಧಕರು ಅತ್ಯಂತ ಶ್ರೇಷ್ಠ ಸಾಧನೆಗಳನ್ನು ಮಾಡಿರುತ್ತಾರೆ. ಮುಂದೆ […]

ಕಾರ್ಕಳ ಮಂಜುನಾಥ ಪೈ ಕಾಲೇಜಿನಲ್ಲಿ “ಪ್ಲೇ ಸ್ಟೋರ್” ಮ್ಯಾನೇಜ್ ಮೆಂಟ್ ಫೆಸ್ಟ್ ಉದ್ಘಾಟನೆ

ಕಾರ್ಕಳ: ವಿದ್ಯಾರ್ಥಿಗಳಿಗೆ ಮ್ಯಾನೇಜ್ ಮೆಂಟ್ ಫೆಸ್ಟ್ ಗಳು, ಸ್ಪರ್ಧಾತ್ಮಕ ಜಗತ್ತಲ್ಲಿ ಕ್ರಿಯಾಶೀಲರಾಗುವುದನ್ನು ಕಲಿಸಿಕೊಡುತ್ತದೆ. ಇಲ್ಲಿನ ಸ್ಪರ್ಧೆಗಳನ್ನು ಸೋಲು-ಗೆಲುವಿನ ದೃಷ್ಟಿಯಿಂದ ನೋಡಬಾರದು. ವಿದ್ಯಾರ್ಥಿಗಳಿಗೆ ಇದೊಂದು ಅಪೂರ್ವ ಅವಕಾಶದ ಹಾದಿ, ವಿದ್ಯಾರ್ಥಿ ಜೀವನಕ್ಕೆ ಇಂತಹ ಕ್ರಿಯಾಶೀಲ ಸ್ಪರ್ಧೆಗಳಿಂದಲೇ ವಿಶೇಷ ಅರ್ಥ ಲಭಿಸುತ್ತದೆ ಎಂದು ಜಸ್ಟಿಸ್ ಕೆ.ಎಸ್.ಎಚ್.ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಟ್ಟೆ ಇಲ್ಲಿನ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಶರ್ಮಾ ಅವರು ಹೇಳಿದ್ದಾರೆ.ಸೋಮವಾರ ಮಂಜುನಾಥ ಪೈ ಸ್ಮಾರಕ ಪ್ರಥಮದರ್ಜೆ ಕಾಲೇಜಿನ ಎಂ.ಕಾಂ.ಸ್ನಾತಕೋತ್ತರ ವಿಭಾಗದ ವತಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಪ್ಲೇ ಸ್ಟೋರ್’”ಮೆನೇಜ್ ಮೆಂಟ್ […]