ಕಾರ್ಕಳ ಮಂಜುನಾಥ ಪೈ ಕಾಲೇಜಿನಲ್ಲಿ “ಪ್ಲೇ ಸ್ಟೋರ್” ಮ್ಯಾನೇಜ್ ಮೆಂಟ್ ಫೆಸ್ಟ್ ಉದ್ಘಾಟನೆ

ಕಾರ್ಕಳ: ವಿದ್ಯಾರ್ಥಿಗಳಿಗೆ ಮ್ಯಾನೇಜ್ ಮೆಂಟ್ ಫೆಸ್ಟ್ ಗಳು, ಸ್ಪರ್ಧಾತ್ಮಕ ಜಗತ್ತಲ್ಲಿ ಕ್ರಿಯಾಶೀಲರಾಗುವುದನ್ನು ಕಲಿಸಿಕೊಡುತ್ತದೆ. ಇಲ್ಲಿನ ಸ್ಪರ್ಧೆಗಳನ್ನು ಸೋಲು-ಗೆಲುವಿನ ದೃಷ್ಟಿಯಿಂದ ನೋಡಬಾರದು. ವಿದ್ಯಾರ್ಥಿಗಳಿಗೆ ಇದೊಂದು ಅಪೂರ್ವ ಅವಕಾಶದ ಹಾದಿ, ವಿದ್ಯಾರ್ಥಿ ಜೀವನಕ್ಕೆ ಇಂತಹ ಕ್ರಿಯಾಶೀಲ ಸ್ಪರ್ಧೆಗಳಿಂದಲೇ ವಿಶೇಷ ಅರ್ಥ ಲಭಿಸುತ್ತದೆ ಎಂದು ಜಸ್ಟಿಸ್ ಕೆ.ಎಸ್.ಎಚ್.ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಟ್ಟೆ ಇಲ್ಲಿನ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಶರ್ಮಾ ಅವರು ಹೇಳಿದ್ದಾರೆ.
ಸೋಮವಾರ ಮಂಜುನಾಥ ಪೈ ಸ್ಮಾರಕ ಪ್ರಥಮದರ್ಜೆ ಕಾಲೇಜಿನ ಎಂ.ಕಾಂ.ಸ್ನಾತಕೋತ್ತರ ವಿಭಾಗದ ವತಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಪ್ಲೇ ಸ್ಟೋರ್'”ಮೆನೇಜ್ ಮೆಂಟ್ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಔದ್ಯೋಗಿಕ ಜಗತ್ತಲ್ಲಿ ಉದ್ಯೋಗ ಗಳಿಕೆಗೆ ಅಂಕಗಳೇ ಮಾನದಂಡವಾಗಿ ಉಳಿದಿಲ್ಲ. ಅಂಕಗಳಿಗಿಂತಲೂ ಹೆಚ್ಚಾಗಿ ಜೀವನ ಕೌಶಲಗಳು, ಕ್ರಿಯಾಶೀಲತೆಯೇ ಮುಖ್ಯವಾಗಿದೆ. ಮ್ಯಾನೇಜ್ ಮೆಂಟ್ ಜಗತ್ತಲ್ಲಿ ವ್ಯವಹಾರ ಮೌಲ್ಯಗಳಿಗೂ ಅದರದ್ದೇ ಆದ ಮಹತ್ವವಿದೆ. ವಿದ್ಯಾರ್ಥಿಗಳೂ ಮ್ಯಾನೇಜ್ ಮೆಂಟ್ ಕ್ಷೇತ್ರಕ್ಕೆ ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿದೆಸೆಯಲ್ಲಿಯೇ ರೂಢಿಸಿಕೊಳ್ಳಬೇಕು, ಎಲ್ಲಾ ಕ್ಷೇತ್ರಗಳಿಗೂ ಅದರದ್ದೇ ಆದ ತತ್ವವಿರುತ್ತದೆ. ಆ ತತ್ವವನ್ನು ಪಾಲಿಸಿದ್ದಲ್ಲಿ ಯಶಸ್ಸು ಖಂಡಿತಾ ನಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀವರ್ಮ ಅಜ್ರಿ ಮಾತನಾಡಿ, ಮ್ಯಾನೇಜ್ ಮೆಂಟ್ ಹಬ್ಬಗಳು ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸಿನ ಜೊತೆ ಜೊತೆಗೆ ಕ್ರಿಯಾಶೀಲತೆಯನ್ನೂ ಸೃಷ್ಟಿ ಮಾಡುತ್ತದೆ. ಸರಕಾರಿ ಕಾಲೇಜುಗಳಲ್ಲಿ ಫೆಸ್ಟ್ ಆಯೋಜಿಸುವುದು ಸವಾಲಿನ ಸಂಗತಿ. ಆ ಸವಾಲನ್ನು ಸ್ವೀಕರಿಸುವಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಫಲರಾಗಿದ್ದಾರೆ ಎಂದರು. ಸ್ನಾತಕೋತ್ತರ ಎಂ.ಕಾಂ. ವಿಭಾಗದ ಮುಖ್ಯಸ್ಥ, ಕಾರ್ಯಕ್ರಮ ಸಂಯೋಜಕ ಪ್ರೊ. ವಿದ್ಯಾಧರ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಜ್ಯೋತಿ ಎಲ್ ಜನ್ನೆ ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ, ಮಂಜುನಾಥ್ ಸ್ವಾಗತಿಸಿದರು, ಪ್ರಾಧ್ಯಾಪಕಿ ಸಂಧ್ಯಾ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು. ಕಾವ್ಯಾ ಆಚಾರ್ ಕಾರ್ಯಕ್ರಮ ನಿರೂಪಿಸಿ, ಅಕ್ಷಯ್ ಎಂ.ಜೆ ವಂದಿಸಿದರು.