ಕೆದೂರಿನ ಸ್ಪೂರ್ತಿಧಾಮ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸಿದ್ದೇನೆ: ಶ್ಯಾಮಲಾ ಕುಂದರ್

ಕುಂದಾಪುರ: ಕೆದೂರಿನ ಸ್ಪೂರ್ತಿಧಾಮ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸಿದ್ದೇನೆ. ಡಿಐಜಿ ಹಾಗೂ ಜಿಲ್ಲಾಧಿಕಾರಿಯವರ ಜೊತೆ ಈ ಬಗ್ಗೆ ಮಾತನಾಡಿದ್ದು, ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಖಂಡಿತವಾಗಿಯೂ ಸ್ಪೂರ್ತಿ ಸಂಸ್ಥೆ ಮುಚ್ಚುವ ಕೆಲಸದಲ್ಲಿ ಪೊಲೀಸ್ ಇಲಾಖೆ ಕೆಲಸ ನಿರ್ವಹಿಸುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಉಡುಪಿಯ ಶ್ಯಾಮಲಾ ಕುಂದರ್ ಹೇಳಿದರು. ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ […]

ಐಪಿಎಲ್ 2019: ಉದ್ಘಾಟನಾ ಪಂದ್ಯದಲ್ಲಿ RCBಗೆ ಮುಖಭಂಗ!

ಐಪಿಎಲ್  2019ರ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದೆ. ಆದರೆ ಈ ಸಲಾ ಕಪ್ ನಮ್ದೆ ಅನ್ನೋ ವಿಶ್ವಾಸದೊಂದಿಗೆ ಕಣಕ್ಕಿಳಿದಿರುವ RCB ಆರಂಭದಲ್ಲೇ ಮುಗ್ಗರಿಸಿದೆ.

ಅನಿವಾಸಿ ಕನ್ನಡಿಗರ ಮರ್ಡರ್‌ ಮಿಸ್ಟರಿ ‘ರತ್ನಮಂಜರಿ’ಚಿತ್ರದ ಟೀಸರ್ ಬಿಡುಗಡೆ

ಕರುನಾಡ ಮೇಲಿನ ಅಭಿಮಾನದಿಂದಾಗಿ ಅನೇಕ ಅನಿವಾಸಿ ಕನ್ನಡಿಗರು ಸಿನಿಮಾ ರಂಗದತ್ತ ಮುಖ   ಮಾಡುತ್ತಿದ್ದಾರೆ. ಈ ಯಾದಿಗೆ ಹೊಸ ಸೇರ್ಪಡೆ ರತ್ನಮಂಜರಿ ಟೀಮ್‌. ಅಮೆರಿಕಾದಲ್ಲಿ ನಡೆದ ಭಾರತೀಯರೊಬ್ಬರ ಕೊಲೆಯ ಹಿನ್ನೆಲೆಯಾಗಿಟ್ಟುಕೊಂಡು ಇವರು ಸಿನಿಮಾ ಮಾಡುತ್ತಿದ್ದು, ಕೆಲ ಅನಿವಾಸಿ ಕನ್ನಡಿಗರು ಈ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ.  ಕನ್ನಡ ಚಿತ್ರರಂಗಕ್ಕೆ ಹೆಚ್ಚು ವಿಭಿನ್ನ ಚಿತ್ರಗಳೊಂದಿಗೆ ಕಾಲಿಡುತ್ತಿದ್ದಾರೆ.ಇದೊಂದು ಮರ್ಡರ್‌ ಮಿಸ್ಟರಿ ಕಥೆಯಾಗಿದ್ದು, ಅಮೆರಿಕಾದಲ್ಲಿ ಕನ್ನಡಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ನಟರಾಜ್‌ ಹಳೇಬಿಡು ಮತ್ತು ತಂಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಂದೀಪ್‌ ಕುಮಾರ್‌ […]

ಈ ಪರಿಯ ಸೊಬಗು :ಪ್ರಶಾಂತ್ ನಾಯಕ್ ಕ್ಲಿಕ್ಕಿಸಿದ ಚಿತ್ರ

ಪ್ರಶಾಂತ್ ನಾಯಕ್ ಕಿಲಾರ್ ಕಜೆ ಸುಳ್ಯದವರು. ಪ್ರಸ್ತುತ ಎಂ.ಆರ್.ಪಿ.ಎಲ್ ನಲ್ಲಿ ಹುದ್ದೆಯಲ್ಲಿರುವ ಇವರು ಸುರತ್ಕಲ್ ನಿವಾಸಿ. ಆಗಾಗ  ಚಂದ ಚಂದ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಇವರಿಗೆ ಛಾಯಗ್ರಹಣವೊಂದು ಹವ್ಯಾಸ. ಇತ್ತೀಚೆಗೆ ಸಾಲಿಗ್ರಾಮದ ಮೇಳದ ಆಟಕ್ಕೆ ಹೋದಾಗ ಪ್ರೀತಿಯಿಂದ ಅವರು  ಕ್ಲಿಕ್ಕಿಸಿದ ಈ ಚಿತ್ರ, ಕರಾವಳಿಯ ಯಕ್ಷಗಾನದ ಸೊಗಡನ್ನು, ಸೊಗಸನ್ನು ಸಾರುತ್ತಿದೆ.

ನಾಯಕ್ ಮಾಮನ “ಲಾಯಕ್” ಊಟ: ಆಗುಂಬೆಗೆ ಬಂದ್ರೆ ಈ ಹೊಟೇಲ್ ಊಟ ಮಿಸ್ ಮಾಡ್ಕೊಬೇಡಿ

ಕ್ಯಾಬೆಜ್ ಅಂಬೊಡೆ, ಗುಳ್ಳದ ಪೋಡಿ, ಬಿಸಿ ಬಿಸಿ ಇಡ್ಲಿ ಸಾಂಬರ್, ಮಧ್ಯಾಹ್ನಕ್ಕೆ ಅನ್ನ, ತಿಳಿ ಸಾರು, ದಾಳಿತೊವ್ವೆ, ರುಚಿ ರುಚಿ ಉಪ್ಪಿನಕಾಯಿ, ಅಲಸಂಡೆ ಉಪ್ಕರಿ, ಬಿಟ್ರೂಟ್ ಪಲ್ಯ, ರಸಂ, ದೊಡ್ಡದ್ದೊಂದು ಹಪ್ಪಳ ಇವೆಲ್ಲ ಆಗುಂಬೆಯ ಸುರೇಂದ್ರ ನಾಯಕ್ ಮಾಮನ ಮನೆಯಂತಹ ಹೊಟೇಲಿನ ಬಾಯಿಬಿರಿಸೋ ಖಾದ್ಯಗಳು.ಆಗುಂಬೆ-ಕೊಪ್ಪ ದಾರಿಯಲ್ಲಿ ಸುಮಾರು 40 ವರ್ಷಗಳಿಂದಲೂ ಗುರುಪ್ರಸಾದ್ ಹೊಟೇಲ್ ನಡೆಸುತ್ತಿರುವ ನಾಯಕ್ ಮಾಮನ ಹೊಟೇಲ್‌ನಲ್ಲಿ ಕೂತು ಊಟ ಮಾಡುತ್ತಲೋ, ಅಂಬೊಡೆ ಮುಕ್ಕುತ್ತಲೋ‌‌ ಆಗುಂಬೆಯ ಕಾಡನ್ನು ನೋಡುವುದೇ ಒಂದು ಚೆಂದ ಅನುಭವ‌.     […]