ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಗಡಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ಉಡುಪಿ: ಮುಂಬರುವ ಲೋಕ ಸಭಾ ಚುನಾವಣೆ 2019 ರ ಪ್ರಯುಕ್ತ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಹಾಗೂ ಪೊಲೀಸ್ ಜಿಲ್ಲಾ ವರಿಷ್ಟಾಧಿಕಾರಿ ನಿಶಾ ಜೇಮ್ಸ್, ಸಹಾಯಕ ಚುನಾವಣಾಧಿಕಾರಿ, ಕಾರ್ಕಳ ವಿಧಾನ ಸಭಾ ಕ್ಷೇತ್ರದ ತಹಶೀಲ್ದಾರ್, ಹೆಬ್ರಿ-ತಹಶೀಲ್ದಾರ್, ಕಾರ್ಕಳ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಎಲ್ಲಾ ಸೆಕ್ಟರ್ ಅಧಿಕಾರಿಯವರ ಜೊತೆಗೆ ಮಾ. 7 ರಂದು  ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಗಡಿ ಪ್ರದೇಶ ಹಾಗೂ ಚೆಕ್ ಪೋಸ್ಟ್ ನಿರ್ಮಾಣ ಮಾಡುವ ಸಂಬಂಧ ಕಾರ್ಕಳ ತಾಲೂಕಿಗೆ ಭೇಟಿ ನೀಡಿದ್ದು, […]

ಅಂಬಿ-ಅಯ್ಯ ಕಪ್-2019 ;ರಾಜ್ಯ ಮಟ್ಟದ ಟೆನ್ನಿಸ್ ಕ್ರಿಕೆಟ್ ಪಂದ್ಯಾಕೂಟ

ಕಲಿಯುಗದ ಕರ್ಣ,ಮಂಡ್ಯದ ಗಂಡು ದಿ|ರೆಬೆಲ್ ಸ್ಟಾರ್ ಡಾ|ಅಂಬರೀಷ್ ಹಾಗೂ ಅಂಬಿ‌ ಆಪ್ತರಾದ  ಅಗಲಿದ ಮೈಸೂರಿನ ರಾಷ್ಟ್ರೀಯ ಕ್ರೀಡಾ ಪಟು ಶಿವಕುಮಾರ್ (ಅಯ್ಯ)ಸ್ಮರಣಾರ್ಥ 2 ದಿನಗಳ ಕ್ರಿಕೆಟ್ ಪಂದ್ಯಾಟವನ್ನು ಮೈಸೂರಿನ ಕುಂಬಾರಕೊಪ್ಪಲಿನ ಕೆಂಪೇಗೌಡ ಕ್ರೀಡಾಂಗಣದಲ್ಲಿ   ಮಾರ್ಚ್ 9ರ  ಶನಿವಾರ ಹಾಗೂ ಮಾ 10ರ  ರವಿವಾರ ಹಗಲಿನಲ್ಲಿ ಏರ್ಪಡಿಸಲಾಗಿದೆ. ದೂರದ ಚೆನ್ನೈ, ಬೆಂಗಳೂರು,ಮೈಸೂರು,ದಾವಣಗೆರೆ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 17 ತಂಡಗಳು ಭಾಗವಹಿಸಲಿದ್ದು ರೋಚಕ ಹಣಾಹಣಿಗೆ ಕುಂಬಾರಕೊಪ್ಪಲಿನ  ಕ್ರೀಡಾಂಗಣ ಸಾಕ್ಷಿಯಾಗಲಿದೆ. ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಪ್ರತಿಷ್ಟಿತ ತಂಡಗಳಾದ […]

ಮಾ.13ರಿಂದ ಶ್ರೀಕೃಷ್ಣಮಠದ ಗರ್ಭಗುಡಿ ಮೇಲ್ಛಾವಣಿಗೆ ಚಿನ್ನದ ತಗಡು ಅಳವಡಿಕೆ ಕಾರ್ಯ ಆರಂಭ

ಉಡುಪಿ: ಇಲ್ಲಿನ ಶ್ರೀಕೃಷ್ಣಮಠದ ಗರ್ಭಗುಡಿಯ ಮೇಲ್ಛಾವಣಿಗೆ ಬಂಗಾರದ ಹೊದಿಕೆ ಅಳವಡಿಸುವ ಕಾರ್ಯ ಮಾ. 13ರಿಂದ ಆರಂಭಗೊಳ್ಳಲಿದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಉಡುಪಿ ಶ್ರೀಕೃಷ್ಣಮಠದ ಕನಕ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಗರ್ಭಗುಡಿಯ ಮೇಲ್ಛಾವಣಿ ನವೀಕರಣ ಕಾರ್ಯಕ್ಕೂ ಮುಂಚೆ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆ ಬಳಿಕ ಗರ್ಭಗುಡಿಯ ಶಿಖರ ಕಲಶವನ್ನು ಕೆಳಗಿಳಿಸಿ ಚಿನ್ನ ಲೆಪಿತ ತಗಡು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ನವೀಕರಣ ಕಾರ್ಯಕ್ಕೂ […]

“ಸುಶ್ಮಿತಾ”ಯಕ್ಷಲೋಕದ ತಕದಿಮಿತಾ:ಗೆಜ್ಜೆ ಕಟ್ಟಿ, ಹೆಜ್ಜೆ ಇಟ್ಟ ಈ ಹುಡುಗಿಯ ಕತೆ ಕೇಳಿ

ಇಂದು ಮಹಿಳಾ ದಿನಾಚರಣೆ,ಅಪರೂಪದ ಸಾಧನೆಗೈದ ಮಹಿಳೆಯರನ್ನು ಹುಡುಕಿಕೊಂಡು ಹೊರಟಾಗ “ಉಡುಪಿ X press” ತಂಡಕ್ಕೆ ಸಿಕ್ಕ ಮೊದಲ ಕಲಾಮುತ್ತು ಸುಶ್ಮಿತಾ ಸಾಲಿಗ್ರಾಮ. ಮಹಿಳೆಯೆ0ದರೆ ಬದುಕಿಗೆ ಚೈತನ್ಯ ಶಕ್ತಿ, ಸ್ನೇಹದ ಅಕ್ಕರೆ, ಒಲವಿನ ಸಕ್ಕರೆ, ತಾಳ್ಮೆಯ ಕಡಲು, ಉಲ್ಲಾಸದ ಮುಗಿಲು, ಬದುಕಿನ ಪ್ರತೀ ಕ್ಷಣವೂ ಮಹಿಳೆ ನಮಗೆಲ್ಲಾ ಸ್ಪೂರ್ತಿ, ಶಕ್ತಿ. ಮಹಿಳೆಯಿಲ್ಲದೇ ನಮ್ಮ ಬದುಕು ನಡೆಯೋದು ಸಾಧ್ಯವೇ ಇಲ್ಲ.ಬರೀ ಮಾರ್ಚ್-8  ಮಾತ್ರವಲ್ಲ  ಯಾವಾಗಲೂ ಮಹಿಳೆಯರ ಶಕ್ತಿ ನಮಗೆ ಕಾಡುತ್ತಲೇ ಇರಬೇಕು. ಈ ಇಡೀ ಮಾರ್ಚ್  ತಿಂಗಳು “ಉಡುಪಿ X press […]