ಮಕ್ಕಳ ಆರೋಗ್ಯ ಸದೃಢತೆಗೆ ಕಬಡ್ಡಿ ಪೂರಕ: ಅದಮಾರು ಶ್ರೀ

ಉಡುಪಿ: ಕಬಡ್ಡಿಯಿಂದ ಮಕ್ಕಳ ಏಕಾಗೃತೆ ವೃದ್ಧಿಯಾಗುವುದರ ಜತೆಗೆ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕೂಡ ಸದೃಢಗೊಳ್ಳುತ್ತದೆ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು. ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಪುರುಷರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಕೂಟ ಶ್ರೀ ಪ್ರಜ್ಞಾ ಟ್ರೋಫಿ—2019 ಕ್ಕೆ ಚಾಲನೆ ನೀಡಿ ಮಾತನಾಡಿದರು. ಮನುಷ್ಯರ ಆರೋಗ್ಯ ಚೆನ್ನಾಗಿರಬೇಕಾದರೆ ಮಣ್ಣಿನ ಸಂಪರ್ಕ ಕೂಡ ಇರಬೇಕೆಂದು ಹಿರಿಯರು […]

ಜವಾಬ್ದಾರಿ ನೀಡಿದ ಹುದ್ದೆಗಳಿಗೆ ನ್ಯಾಯ ಸಲ್ಲಿಸುವುದು ಪಕ್ಷದ ಕಾರ್ಯಕರ್ತನ ಆದ್ಯ ಕರ್ತವ್ಯ: ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ವರಿಷ್ಠರು ಭರದ ತಯಾರಿ ನಡೆಸಿದ್ದು ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ಅನೇಕ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಕ್ಷದಲ್ಲಿರುವ ಎಲ್ಲ ನಿಷ್ಠಾವಂತ ಕಾರ್ಯಕರ್ತರಿಗೆ ಅವರವರ ಅರ್ಹತೆಗೆ ತಕ್ಕಂತೆ ವಿವಿಧ ಸ್ಥರಗಳಲ್ಲಿ ಜವಾಬ್ದಾರಿಗಳನ್ನು ನೀಡಿದ್ದು ಪಕ್ಷದ ಯೋಜನೆಗಳನ್ನು ಶಿರಸಾ ಕಾರ್ಯರೂಪಕ್ಕೆ ತರುವುದು ಅವರ ಕರ್ತವ್ಯವಾಗಿರುತ್ತದೆ ಮತ್ತು ಪಾಲಿಸುವಲ್ಲಿ ತನ್ನ ಕೆಳಸ್ತರದ ಕಾರ್ಯಕರ್ತರಿಗೆ ಪ್ರೇರೇಪಣೆಯಾಗಿ ನಿಲ್ಲುವುದು ಕೂಡ ಅಗತ್ಯವಾಗಿರುತ್ತದೆ ಎಂದು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಮತ್ತು ಉಡುಪಿ ಚಿಕ್ಕಮಗಳೂರು ಲೋಕಸಭಾ […]

ಹಣೆಗೆ ಕುಂಕುಮ ಹಾಕಿದವರೆಲ್ಲರೂ ಸಿದ್ದರಾಮಯ್ಯರಿಗೆ ಭಯೋತ್ಪಾದಕರಂತೆ ಕಾಣುತ್ತಾರೆ: ಕೋಟ ವ್ಯಂಗ್ಯ

ಉಡುಪಿ: ಹಣೆಗೆ ಕುಂಕುಮ ಹಾಕಿದವರೆಲ್ಲರೂ ಸಿದ್ದರಾಮಯ್ಯ ಅವರಿಗೆ ಭಯೋತ್ಪಾದಕರಂತೆ ಕಾಣುತ್ತಿದ್ದಾರೆ, ಅಂತಹ ಸಿದ್ದರಾಮಯ್ಯ ಅವರ ಹೇಳಿಕೆಗೆಲ್ಲಾ ನಾವು ಪ್ರತಿಕ್ರಿಯೆ ನೀಡಬೇಕಾಗಿಲ್ಲ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾವಿ, ನಾಮ ಧರಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟೀಕೆಗೆ ಉತ್ತರಿಸಿದ ಕೋಟ ಅವರು, ಯೋಗಿ ಆದಿತ್ಯನಾತ್ ಅವರು ಸಿಎಂ ಆಗಿ ಮಾಡಿರುವ ಕೆಲಸವನ್ನು ದೇಶವೇ ಮೆಚ್ಚುತ್ತಿದೆ. ಅಂತಹ ರಾಷ್ಟ್ರಭಕ್ತನ ಅವಹೇಳನ ಮಾಡಿದ್ರೆ […]