ಮಾ. 9-10 : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್, ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ

ಉಡುಪಿ:ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ) ದಕ್ಷಿಣ ಕನ್ನಡ –ಉಡುಪಿ ಇದರ ವತಿಯಿಂದ ವೃತ್ತಿಪರ ಛಾಯಾಗ್ರಾಹಕರ ಕುಟುಂಬಕ್ಕೆ ಭದ್ರತೆ ನೀಡುವ ದೃಷ್ಟಿಯಿಂದ ನಿಧಿ ಸಂಗ್ರಹಕ್ಕಾಗಿ ಛಾಯಾಗ್ರಾಹಕರಿಗಾಗಿ ರಾಜ್ಯ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಮಾ. 9-10 ರಂದು  ಉಡುಪಿ ಬೀಡಿನ ಗುಡ್ಡೆ  ಮಹಾತ್ಮ ಗಾಂಧಿ  ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದೆ.  ಈ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ರೂ 1,11,111 ಹಾಗು ದ್ವಿತೀಯ ಬಹುಮಾನ ರೂ: 55,555  ಹಾಗು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಮಾರ್ಚ್ 9ರಂದು ಬೆಳಿಗ್ಗೆ ಗಂಟೆ 8.45ಕ್ಕೆ ಉದ್ಘಾಟನಾ ಸಮಾರಂಭ […]

ಮಾ. 10 ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ-ಉದ್ಘಾಟನೆ

ಉಡುಪಿ: ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಮಾರ್ಚ್ 10 ರಂದು ಬೆಳಗ್ಗೆ 8 ಕ್ಕೆ ಬೀಡಿನಗುಡ್ಡೆಯ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.  

ಆದಾಯ ಹೆಚ್ಚಿಸುವ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಕೆಲಸವಾಗಲಿ:ಡಾ. ಜಯಮಾಲ

ಉಡುಪಿ : ಪ್ರವಾಸೋದ್ಯಮ ಅತೀ ಹೆಚ್ಚು ಪ್ರಚಾರ ಪಡೆದು ಜನರಿಗೆ ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಪ್ರತಿ ಕ್ಷಣದಲ್ಲೂ ಪ್ರವಾಸೋದ್ಯಮದ ಮಾಹಿತಿಯನ್ನು ನೀಡಿ ಸೆಳೆಯುವಂತಾಗಬೇಕು. ಮುಂದಿನ ದಿನಗಳಲ್ಲಿ ಎಷ್ಟು ಜನರನ್ನು ತಲುಪುತ್ತೇವೆಯೋ ಅಷ್ಟು ವೇಗವಾಗಿ ಪ್ರವಾಸೋದ್ಯಮ ಬೆಳೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹೇಳಿದರು. ಅವರು ಬುಧವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ(ರಿ)ರವರ ಸಹಯೋಗದಲ್ಲಿ ರಜತಾದ್ರಿಯ […]

ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಮುಗಿಸಿ: ಜಯಮಾಲ

ಉಡುಪಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲಾ ಟೆಂಡರ್, ವರ್ಕ್ ಆರ್ಡರ್ ಹಾಗೂ ಇತರ ಎಲ್ಲಾ ಕೆಲಸಗಳನ್ನು ಶೀಘ್ರವಾಗಿ ಪೂರೈಸಿಕೊಳ್ಳುವಂತೆ ಆಯಾ ಇಲಾಖೆ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಸೂಚಿಸಿದ್ದಾರೆ. ಅವರು ಬುಧವಾರ ರಜತಾದ್ರಿಯ ಜಿ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಉಂಟಾಗಿರುವ ಮರಳು ಸಮಸ್ಯೆ ಬಗ್ಗೆ ಚರ್ಚೆ ನಡೆದಿದ್ದು, ಜಿಲ್ಲೆಯಲ್ಲಿ ಮರಳು ದೊರಕುವ ಜಾಗ ಹಾಗೂ ಸಾರ್ವಜನಿಕರು ಮರಳು ಸಿಗಬೇಕಾದರೆ […]

ಎಂಥಾ ಅವಸ್ಥೆ ಮಾರ್ರೆ ಈ ರಸ್ತೆದು !   ಬೈಲೂರು- ಪಳ್ಳಿ ರಸ್ತೆ ಕಾಮಗಾರಿ ಅರ್ಧದಲ್ಲೇ ಸ್ಟಾಪ್: ಪ್ರಯಾಣಿಕರ ಬೈಗುಳ Non stop

ಕಾರ್ಕಳ: ಬೈಲೂರು ಮತ್ತು ಪಳ್ಳಿ ಗ್ರಾ.ಪಂ.ಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಮಗಾರಿ ಪ್ರಾರಂಭಗೊಂಡು ವರ್ಷ ಕಳೆದರೂ ಅರ್ಧದಷ್ಟೂ ಕಾಮಗಾರಿ ನಡೆಯದೆ ಪ್ರಯಾಣಿಕರುಸಂಕಟಪಡುತ್ತಿದ್ದಾರೆ. ಸುಮಾರು 3.5 ಕಿ.ಮೀ. ಉದ್ದವಿರುವ ಈ ರಸ್ತೆ ಕಾಂಕ್ರಿಟೀಕರಣಕ್ಕೆ ಕೇಂದ್ರ ರಸ್ತೆನಿಧಿ ಯೋಜನೆಯ 4 ಕೋಟಿ ಅನುದಾನ ಒದಗಿಸಲಾಗಿತ್ತು. ಕುಂಟುತ್ತ ಸಾಗಿದ ಕಾಮಗಾರಿ ಈಗ ಸಂಪೂರ್ಣ ಸ್ಥಗಿತವಾಗಿದೆ. ಕಾಮಗಾರಿಗಾಗಿ ಹಿಂದಿದ್ದ ಡಾಮಾರು ರಸ್ತೆ ಅಗೆಯಲಾಗಿದ್ದು, ಈಗ ವಾಹನ ಸಂಚಾರ ದುಸ್ತರವಾಗಿದೆ.   ಈ ರಸ್ತೆಯ ಮೂಲಕ ಪಳ್ಳಿ, ಬೆಳ್ಳೆ, ಉಡುಪಿ ಮಾರ್ಗವಾಗಿ ಬಹಳಷ್ಟು ಬಸ್ಸುಗಳು ಸೇರಿದಂತೆ […]