Day: February 26, 2019
-
ಸ್ನೇಹಿತರಿಗೆ ವಂಚಿಸಿ ಇನ್ನೋವಾ ಕಾರು ಕಳವು
ಉಡುಪಿ: ಮಣಿಪಾಲದ ವಿಜಯ ರೆಸಿಡೆನ್ಶಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಲಾಗಿದ್ದ ಇನ್ನೋವಾ ಕಾರು ಕಳವು ಆಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ನಿವಾಸಿ ಬಿ. ಸತೀಶ್ ಕುಮಾರ್ ಎಂಬುವವರು ತಮ್ಮ ಸಹೋದರರಾದ ಪ್ರಕಾಶ್, ಸುಭಾಷ್ ಹಾಗೂ ಗೆಳೆಯರಾದ ಶ್ರಾವಣ್ ಮತ್ತು ಕೆ. ಪ್ರತಾಪ್ ಅವರೊಂದಿಗೆ ಫೆ. 12ರಂದು ಬೆಂಗಳೂರಿನಿಂದ ಹೊರಟು ಹಾಸನ, ಬೇಲೂರಿಗೆ ಹೋಗಿ ನಂತರ ಮಣಿಪಾಲದ ವಿಜಯ ರೆಸಿಡೆನ್ಸಿಗೆ ಬಂದು ರೂಂ ಮಾಡಿದ್ದರು. ಅಂದು ರಾತ್ರಿ ರೂಮ್‌ನ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು…
-
ಪತ್ರಕರ್ತರು ಸಮಾಜದಲ್ಲಿನ ಸಮಸ್ಯೆಗಳಿಗೆ ತಮ್ಮ ಹರಿತವಾದ ಲೇಖನಿಗಳ ಮೂಲಕ ಜಾಗೃತಿ ಮೂಡಿಸುತ್ತಾರೆ: ಯಶ್‍ಪಾಲ್
ಪತ್ರಕರ್ತರು ಸಮಾಜದಲ್ಲಿನ ಸಮಸ್ಯೆಗಳಿಗೆ ತಮ್ಮ ಹರಿತವಾದ ಲೇಖನಿಗಳ ಮೂಲಕ ಜಾಗೃತಿ ಮೂಡಿಸುತ್ತಾರೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ದಣಿವರಿಯದೇ ಸೇವೆ ಸಲ್ಲಿಸುವ ಜಿಲ್ಲೆಯ ಪತ್ರಕರ್ತರು ಕ್ರೀಡಾಕೂಟ ಏರ್ಪಡಿಸುವ ಮೂಲಕ ಕೀಡಾ ಸ್ಪೂರ್ತಿ ಮೆರೆದಿರುವುದು ಶ್ಲಾಘನೀಯ ಎಂದು ಮೀನುಗಾರಿಕ ಮಂಡಳಿ ಅಧ್ಯಕ್ಷ ಯಶ್‍ಪಾಲ್ ಸುವರ್ಣ ಹೇಳಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಮಂಗಳವಾರ ಅಜ್ಜರಕಾಡು ಕ್ರೀಡಾಂಗದಲ್ಲಿ ನಡೆದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವನ್ನುದ್ದೇಶಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾದ ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ…
-
ಭಾರತೀಯ ಸೇನೆಯಿಂದ ಉಗ್ರರ ತಾಣ ನಾಶ, ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ
ಉಡುಪಿ: ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ವೈಮಾನಿಕ ದಾಳಿ ನಡೆಸಿ ಉಗ್ರರ ತಾಣಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಮಂಗಳವಾರ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಶ್ಯಾಮಲ ಕುಂದರ್ ಮಾತನಾಡಿ, ಉಗ್ರರ ತಾಣಗಳನ್ನು ಧ್ವಂಸ ಮಾಡುವ ಮೂಲಕ ಭಾರತ ಸಾಮರ್ಥ್ಯ ಏನೆಂಬುವುದನ್ನು ನಮ್ಮ ಸೈನಿಕರು ಪಾಕಿಸ್ತಾನಕ್ಕೆ ತೋರಿಸಿಕೊಟ್ಟಿದ್ದಾರೆ. ಇನ್ನಾದರೂ ಪಾಕಿಸ್ತಾನ ಉಗ್ರರರಿಗೆ ಬೆಂಬಲ ನೀಡುವುದನ್ನು…
-
ಪಾಕ್ ನಮ್ಮ ಮೇಲೆ ಬಾಂಬ್ ಹಾಕುವುದು ಬಿಡಿ, ಎರಡು ಟೊಮೆಟೋ ಕೂಡಾ ಅವರಿಗೆ ಸಿಗದ ಸ್ಥಿತಿ ಬಂದಿದೆ: ಚಕ್ರವರ್ತಿ ಸೂಲಿಬೆಲೆ
ಭಾರತವು ಪಾಕಿಸ್ತಾನದ ಜೊತೆ ನೇರ ಯುದ್ಧ ಮಾಡಬೇಕಾದ ಅಗತ್ಯ ಇಲ್ಲ. ಬೇರೆ ಬೇರೆ ಕಾರಣಗಳಿಂದ ಪಾಕ್ ಅನ್ನು ಕುಗ್ಗಿಸಬಹುದು. ಈಗಾಗಲೇ ರೈತರು ಪಾಕ್ ಗೆ ಟೊಮೆಟೋ ರಪ್ತು ನಿಲ್ಲಿಸಿ ತಮ್ಮ ದೇಶ ಪ್ರೇಮ ಮೆರೆದಿದ್ದಾರೆ. ಪಾಕ್ ನಮ್ಮ ಮೇಲೆ ಬಾಂಬ್ ಹಾಕುವುದು ಬಿಡಿ ಎರಡು ಟೊಮೆಟೋ ಕೂಡಾ ಅವರಿಗೆ ಸಿಗದ ಸ್ಥಿತಿ ಬಂದಿದೆ ಎಂದು ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಕುಂದಾಪುರದ ಕುಂದೇಶ್ವರ ಮುಖ್ಯದ್ವಾರದ ಎದುರು ಸೋಮವಾರ ಸಂಜೆ ಟೀಮ್ ಮೋದಿ ಕುಂದಾಪುರ ವತಿಯಿಂದ ನಡೆದ…
-
ಪಾಕ್ ಗೆ ಬಿಗ್ ಶಾಕ್: ಉಗ್ರರ ಅಡ್ಡಾ ಚೆಲ್ಲಾಡಿದ ಭಾರತ, ಉಗ್ರರನ್ನು ಮಟಾಶ್ ಮಾಡಿತು ಸೇನೆ
ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಎಲ್‍ಓಸಿ (ಪಾಕ್ ಆಕ್ರಮಿತ ಕಾಶ್ಮೀರ) ಭಾಗದಲ್ಲಿ ಬೀಡುಬಿಟ್ಟಿದ್ದ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಮಂಗಳವಾರ ಮುಂಜಾವಿನ ವೇಳೆ ಧ್ವಂಸಗೊಳಿಸಿದೆ. ಗಡಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಯ ಮೇಲೆ ಬರೋಬ್ಬರಿ ಸಾವಿರ ಕೆಜಿಯ ಬಾಂಬ್ ಹಾಕಲಾಗಿದೆ ಎನ್ನಲಾಗಿದೆ.ಅಲ್ಲಿದ್ದ ಉಗ್ರರ ಸಂಘಟನೆಯ ಕ್ಯಾಂಪ್ ಸಂಪೂರ್ಣ ಧ್ವಂಸವಾಗಿದ್ದು, ಪುಲ್ವಾಮಾ ದಾಳಿಗೆ ದಿಟ್ಟ ಪ್ರತೀಕಾರವನ್ನು ಭಾರತ ತೆಗೆದುಕೊಂಡಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.