ಸರಿಗಮಪ ರಿಯಾಲಿಟಿ ಶೋ ಫೈನಲ್‌ ಪ್ರವೇಶಕ್ಕೆ ಟಿಆರ್ಪಿ‌ ಮಾನದಂಡವಾಯ್ತೆ?:ನೈಜ ಪ್ರತಿಭೆಗಳಿಗೆ ಮನ್ನಣೆ ಕೊಡದ ಚಾನೆಲ್, ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಗರಂ

ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಸರಿಗಮಪ ರಿಯಾಲಿಟಿ ಶೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಸಮದಾನ ವ್ಯಕ್ತವಾಗಿದ್ದು, ಕೇವಲ‌ ಟಿಆರ್ಪಿಯೇ ಮಾನದಂಡವೇ  ಎಂದು‌ ಹಲವರು ಪ್ರಶ್ನಿಸಿದ್ದಾರೆ. ಸರಿಗಮಪದಲ್ಲಿ ಫೈನಲ್ ಗೆ ಆಯ್ಕೆಯಾಗದ ಸ್ಪರ್ಧಿಗಳನ್ನು ಕಂಡು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೈಜ ಗಾಯಕರನ್ನು ಅಂತಿಮ ಘಟ್ಟಕ್ಕೆ ಆಯ್ಕೆ ಮಾಡದೇ ವಿನ್ನರ್ ಯಾರೆಂದು ಮೊದಲೇ ಫಿಕ್ಸ್ ಆಗಿರುತ್ತದೆ ಎನ್ನುವ ವಿಚಾರ ಹರಿದಾಡುತ್ತಿದೆ. ಎಲ್ಲವೂ ಮಾರ್ಕೆಟಿಂಗ್ ಗುರು: ತೀರ್ಪುಗಾರರಿಗೆ ಗೊತ್ತಾಗದ ಹಾಗೆ ಮಾರ್ಕೆಟಿಂಗ್ ಅನ್ನೋ ಗುಪ್ತಗಾಮಿನಿಯೊಂದು […]

ಫೆ.19: ಕೋಟ ಹಿರೇಮಹಾಲಿಂಗೇಶ್ವರ ಮನ್ಮಹಾರಥೋತ್ಸವ

ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ  ಮನ್ಮಹಾರಥೋತ್ಸವ ಕಾರ್ಯಕ್ರಮ ಫೆ.19 ರಂದು ಜರಗಿತು . ಈ ಪ್ರಯುಕ್ತ 11:56 ಕ್ಕೆ ರಥಾರೋಹಣ , ಸಂಜೆ ರಥಾವರೋಹಣ, ರಾಜಮಾರ್ಗದಲ್ಲಿ ಮೆರವಣಿಗೆ ನಡೆಯಿತು . ಹಿರೇಮಹಾಲಿಂಗೇಶ್ವರ ಮಿತ್ರ ವೃಂದ ಕೋಟ ಇದರ ಸದಸ್ಯರ ಆಶ್ರಯದಲ್ಲಿ ಕೀಲು  ಕುದುರೆ , ಡೊಳ್ಳು ಕುಣಿತ, ಚಂಡೆ  ವಾದನ, ಬ್ಯಾಂಡ್  ಸೆಟ್ , ಬೆಂಗಳೂರು ಮಿತ್ರರಿಂದ ಸುಡು ಮದ್ದು ಪ್ರದರ್ಶನ ಬಹಳ ವಿಜೃಂಭಣೆಯಿಂದ ನಡೆಯಿತು .

ಯರ್ಲಪಾಡಿಯಲ್ಲಿ ಶೃದ್ದಾಂಜಲಿ ಸಭೆ

ಬೈಲೂರು: ಯರ್ಲಾಪಾಡಿ ಗ್ರಾಮಸ್ಥರ ವತಿಯಿಂದ ನಿವೃತ್ತ ಸೈನಿಕರ ಅಸೋಸಿಯೇಶನ್ ಅಧ್ಯಕ್ಷ ಗಿಲ್ಬರ್ಟ್ ಬ್ರಗೋನ್ಸಾ ಅವರ ನೇತೃತ್ವದಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಬಾಂಬ್ ಸ್ಫೋಟದಿಂದ ಹುತಾತ್ಮರಾದ ಕೇಂದ್ರೀಯ ಮೀಸಲು ಪಡೆಯ 42 ಜನ ವೀರ ಯೋದರಿಗೆ ಶ್ರದ್ಧಾಂಜಲಿ  ಸಭೆ ಸೋಮವಾರ ರಾತ್ರಿ ನಡೆಯಿತು. ನೂರಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಫೆ.20: ಜಿಲ್ಲೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಪ್ರವಾಸ

ಉಡುಪಿ: ವಿಧಾನ ಪರಿಷತ್ತಿನ ವಿರೋಧ ಪಕ್ಷದ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಫೆಬ್ರವರಿ 20 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ಕೆ.ಎಂ.ಸಿ ಮಣಿಪಾಲದಲ್ಲಿ ಹೋಮ್ ಕೇರ್ ಸರ್ವೀಸಸ್ ಉದ್ಘಾಟನಾ ಕಾರ್ಯಕ್ರಮ, ಮಧ್ಯಾಹ್ನ 12 ಕ್ಕೆ ಕೋಟೇಶ್ವರ ಪದವಿ ಪೂರ್ವ ಕಾಲೇಜಿನ ಸಮಾರಂಭದಲ್ಲಿ ಭಾಗವಹಿಸಿ ನಂತರ ಕಾರವಾರಕ್ಕೆ ತೆರಳುವರು.

ಸರ್ಕಾರಿ ನೌಕರರ ಸಂಘದ ಚುನಾವಣೆ- ದಾಖಲೆ ಸಲ್ಲಿಸಲು ಸೂಚನೆ

ಉಡುಪಿ: ಸರ್ಕಾರಿ ನೌಕರರ ಸಂಘಧ 2019-23 ನೇ ಸಾಲಿನ ಚುನಾವಣೆ ಪ್ರಕ್ರೀಯೆ ಆರಂಭಗೊಂಡಿದ್ದು, ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು 2019 ನೇ ಸಾಲಿನ ಸದಸ್ಯತ್ವ ಶುಲ್ಕವನ್ನು ಕಡ್ಡಾಯವಾಗಿ ನೀಡಬೇಕಾಗಿದ್ದು, ಈಗಾಗಲೇ ಎಚ್.ಆರ್.ಎಂ.ಎಸ್ ಮುಖಾಂತರ ನೇರವಾಗಿ ಸಂಘದ ಬೆಂಗಳೂರು/ಉಡುಪಿ ಖಾತೆಗೆ ಜಮಾ ಮಾಡಿದ ಬಗ್ಗೆ ದಾಖಲೆಗಳನ್ನು ತುರ್ತಾಗಿ ಸಂಘದ ಕಛೇರಿಗೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.