ಮಿಸೆಸ್ ಯೂನಿವರ್ಸಲ್‌ ಗೆ ಉಡುಪಿಯ ಡಾ.ಪದ್ಮಾ ಗಡಿಯಾರ್ ಆಯ್ಕೆ

ಉಡುಪಿ : ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಯೂನಿವರ್ಸಲ್ ಸ್ಪರ್ಧೆಯಲ್ಲಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿರುವ ಉಡುಪಿಯ ಮಹಿಳೆಯೊಬ್ಬರು ಮಿಸೆಸ್ ಯೂನಿವರ್ಸಲ್‌ಗೆ ಪ್ರವೇಶ ಪಡೆದು ಗಮನ ಸೆಳೆದಿದ್ದಾರೆ. ಉಡುಪಿ ತೆಂಕಪೇಟೆಯ ಅರುಣ್ ಶೆಣೈ-ಅರ್ಚನಾ ಶೆಣೈ ದಂಪತಿ ಪುತ್ರಿ ಡಾ.ಪದ್ಮಾ ಗಡಿಯಾರ್ ಬ್ರಿಸ್ಬೇನ್‌ನಲ್ಲಿ 2018 ಅಕ್ಟೋಬರ್ ತಿಂಗಳಲ್ಲಿ ಯು.ಎಸ್. ಮೂಲದ ಸಂಸ್ಥೆ ಆಯೋಜಿಸಿದ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸಸ್ ಸೌತ್ ಇಂಡಿಯಾ ಯೂನಿವರ್ಸಲ್ ಕಿರೀಟ ಗೆದ್ದಿದ್ದರು.ಇದೀಗ ಇದೇ ಬರುವ ಆಗಸ್ಟ್‌ನಲ್ಲಿ ಮೆಕ್ಸಿಕೊದಲ್ಲಿ ಮಿಸೆಸ್ ಯೂನಿವರ್ಸಲ್ […]

ಕುಂದಾಪುರ: ಭಯೋತ್ಪಾದಕರ ದಾಳಿ ಖಂಡಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಖಂಡನಾ ಸಭೆ

ಕುಂದಾಪುರ: ಭಯೋತ್ಪಾದಕರನ್ನು ತಯಾರು ಮಾಡಿ ರಫ್ತು ಮಾಡುವ ಸ್ಥಿತಿ ಪಾಕ್‌ಗೆ ಬಂದಿದೆ. ನಿರಂತರವಾಗಿ ಕಳೆದ ದಶಕಗಳಿಂದ ಸೈನಿಕರಿಗೆ ಕಿರುಕುಳ ಕೊಡುವ ಮೂಲಕ ಈ ದೇಶವನ್ನೇ ಮುಗಿಸಲು ಪ್ರಯತ್ನ ಪಡುತ್ತಲೇ ಬಂದಿದ್ದು, ನಾಲ್ಕುವರೆ ವರ್ಷಗಳಲ್ಲಿ ನರೇಂದ್ರ ಮೋದಿ ಆಡಳಿತದ ಬಳಿಕ ನಮ್ಮ ಸೈನಿಕರಿಗೆ ಕಿರುಕುಳ ಕೊಡುವುದನ್ನು ಕಡಿಮೆ ಮಾಡಿದ್ದಾರೆ. ಆದರೂ ಮೊನ್ನೆ ನಡೆದ ಘಟನೆ ನಮ್ಮೆಲ್ಲರ ಮನಸ್ಸಿಗೂ ನೋವಾಗಿದೆ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಸುಬ್ರಹ್ಮಣ್ಯ ಹೊಳ್ಳ ಹೇಳಿದರು. ಅವರು ಸಿಆರ್‌ಪಿಎಫ್ ಯೋಧರ ಮೇಲಿನ ಭಯೋತ್ಪಾದಕರ ದಾಳಿ ಖಂಡಿಸಿ […]

ಪಾಕಿಸ್ತಾನದೊಂದಿಗೆ ಯುದ್ದ ಆಗಲೇಬೇಕು: ನಿವೃತ್ತ ಯೋಧ ಗಣಪತಿ ಖಾರ್ವಿ

ಕುಂದಾಪುರ: ಭಾರತದ ಗಡಿಗಳಲ್ಲಿ ಸಂಭವಿಸುತ್ತಿರುವ ಅನಾಹುತಗಳನ್ನು ಕಂಡು ಇಂದಿನ ಯುವಕರು ದೇಶ ಕಾಯುವ ಯೋಧರಾಗಲು ಮುಂದೆ ಬರುತ್ತಿಲ್ಲ. ನಮ್ಮ ದೇಶದಲ್ಲಿ ಒಗ್ಗಟ್ಟಿಲ್ಲದೆ ಪದೇ ಪದೇ ಪಾಕಿಸ್ತಾನ ಈ ರೀತಿಯ ದಾಳಿಗಳನ್ನು ನಡೆಸುತ್ತಿದೆ. ಎದುರಾಳಿಗಳಿಗೆ ಭಯ ಹುಟ್ಟಿಸಲು ಸರ್ಜಿಕಲ್ ಸ್ಟ್ರೈಕ್ ಅಥವಾ ಪಾಕಿಸ್ತಾನದೊಂದಿಗೆ ಯುದ್ದ ನಡೆಯಲೇಬೇಕು ಎಂದು ನಿವೃತ್ತ ಯೋಧ ಬಸ್ರೂರು ಗಣಪತಿ ಖಾರ್ವಿ ಗುಡುಗಿದ್ದಾರೆ. ಅವರು ಇತ್ತೀಚೆಗೆ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ವೀರ ಯೋಧರಿಗೆ ಮೊಂಬತ್ತಿ ಬೆಳಗಿ ಶ್ರದ್ದಾಂಜಲಿ ಸಲ್ಲಿಸಿ ವಿದ್ಯಾರಂಗ ಮಿತ್ರ ಮಂಡಳಿ, ಮಹಾಕಾಳಿ ದೇಸ್ಥಾನದ […]

ಪಾಕಿಸ್ತಾನ ವಿರುದ್ಧ ಭಾರತೀಯ ಯುವಕನ ಸರ್ಜಿಕಲ್ ಸ್ಟ್ರೈಕ್

ಹೊಸದಿಲ್ಲಿ: ಉಗ್ರದಾಳಿಗೆ ಪ್ರತೀಕಾರದ ಉರಿ ದೇಶದೆಲ್ಲೆಡೆ ಕೇಳಿಬರುತ್ತಿದ್ದರೆ ಅಂಶುಲ್ ಸಕ್ಸೇನಾ ಎಂಬ ಯುವಕನೋರ್ವ ಸದ್ದಿಲ್ಲದೇ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ್ದಾನೆ. ಪಾಕ್ ವಿರುದ್ಧ ಸೈಬರ್ ಯುದ್ಧ ನಡೆಸುತ್ತಿರುವ ಅಂಶುಲ್, ಗುರುವಾರದಿಂದಲೇ ಕಾರ್ಯಪ್ರವೃತ್ತನಾಗಿದ್ದು, ಪಾಕಿಸ್ತಾನ ಸರಕಾರಕ್ಕೆ ಸಂಬಂಧಪಟ್ಟ ಕೆಲವು ಪ್ರಮುಖ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಾನೆ. ಉಗ್ರರು ದಾಳಿ ನಡೆಸಿದ 24 ಗಂಟೆಯೊಳಗೆ ಪಾಕಿಸ್ತಾನದ ಪ್ರಧಾನಿ ಸೇರಿದಂತೆ ಪ್ರಮುಖ ಸರ್ಕಾರಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ “ನಾನು ಯುದ್ಧ ಭೂಮಿಯಲ್ಲಿ ನಿಂತು ಯುದ್ಧ ಮಾಡಲು ಸಾಧ್ಯವಿಲ್ಲ. ಆದರೆ ನನ್ನಿಂದ […]

ಸೈಬ್ರಕಟ್ಟೆ ;ಹುತಾತ್ಮ ಯೋಧರಿಗೆ ನಮನ

ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಉಗ್ರಗಾಮಿಗಳ ದಾಳಿಗೆ ತುತ್ತಾಗಿ ಗುರುವಾರ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಭೆ  ಶನಿವಾರ ಸಂಜೆ 6ಗಂಟೆಗೆ ಸೈಬ್ರಕಟ್ಟೆ ಮುಖ್ಯ ಪೇಟೆಯಲ್ಲಿ ಸಾರ್ವಜನಿಕರ ವತಿಯಿಂದ ನಡೆಯಿತು.ಈ ಸಂದರ್ಭದಲ್ಲಿ ಹಣತೆ ದೀಪಗಳನ್ನುಬೆಳಗಿ,ಮೌನ ಪ್ರಾರ್ಥನೆಯ ಮೂಲಕ  ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭಾರತೀಯ ಸೇವಾದಳದ ಉಡುಪಿ ಜಿಲ್ಲಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿಯವರು ಯೋಧರ ಕುರಿತ ನುಡಿನಮನ ಸಲ್ಲಿಸಿದರು . ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.