ಪಾಕಿಸ್ತಾನ ವಿರುದ್ಧ ಭಾರತೀಯ ಯುವಕನ ಸರ್ಜಿಕಲ್ ಸ್ಟ್ರೈಕ್

ಹೊಸದಿಲ್ಲಿ: ಉಗ್ರದಾಳಿಗೆ ಪ್ರತೀಕಾರದ ಉರಿ ದೇಶದೆಲ್ಲೆಡೆ ಕೇಳಿಬರುತ್ತಿದ್ದರೆ ಅಂಶುಲ್ ಸಕ್ಸೇನಾ ಎಂಬ ಯುವಕನೋರ್ವ ಸದ್ದಿಲ್ಲದೇ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ್ದಾನೆ.
ಪಾಕ್ ವಿರುದ್ಧ ಸೈಬರ್ ಯುದ್ಧ ನಡೆಸುತ್ತಿರುವ ಅಂಶುಲ್, ಗುರುವಾರದಿಂದಲೇ ಕಾರ್ಯಪ್ರವೃತ್ತನಾಗಿದ್ದು, ಪಾಕಿಸ್ತಾನ ಸರಕಾರಕ್ಕೆ ಸಂಬಂಧಪಟ್ಟ ಕೆಲವು ಪ್ರಮುಖ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಾನೆ.

ಉಗ್ರರು ದಾಳಿ ನಡೆಸಿದ 24 ಗಂಟೆಯೊಳಗೆ ಪಾಕಿಸ್ತಾನದ ಪ್ರಧಾನಿ ಸೇರಿದಂತೆ ಪ್ರಮುಖ ಸರ್ಕಾರಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ “ನಾನು ಯುದ್ಧ ಭೂಮಿಯಲ್ಲಿ ನಿಂತು ಯುದ್ಧ ಮಾಡಲು ಸಾಧ್ಯವಿಲ್ಲ. ಆದರೆ ನನ್ನಿಂದ ಸಾಧ್ಯವಿರುವುದನ್ನು ಮಾಡಿದ್ದೇನೆ. ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳಲಿ” ಎಂದಿದ್ದಾನೆ. ಜೊತೆಗೆ ದೇಶದೊಳಗಿದ್ದುಕೊಂಡೇ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ದೇಶ ವಿರೋಧಿ ಪೋಸ್ಟ್ ಹಾಕುವವರ ಖಾತೆಯನ್ನೂ ಹ್ಯಾಕ್ ಮಾಡಿ ಪೋಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ.ಅಷ್ಟೇ ಅಲ್ಲದೆ ನಮ್ಮ ಯೋಧರ ಸಾವನ್ನು ಸಂಭ್ರಮಿಸಿ ಫೇಸ್‌ಬುಕ್ ಪೋಸ್ಟ್‌ ಮತ್ತು ಟ್ವೀಟ್ ಮಾಡಿದವರ ಖಾತೆಯನ್ನು ಕೂಡ ಅಂಶುಲ್ ಹ್ಯಾಕ್ ಮಾಡಿದ್ದು, ಅವರ ಖಾತೆ ವಿವರವನ್ನು ಪೊಲೀಸ್ ಮತ್ತು ಸಂಬಂಧಿತ ಇಲಾಖೆಗೆ ನೀಡಿದ್ದಾನೆ. ಇದರಿಂದ ಖಾತೆದಾರರ ಮಾಹಿತಿ ಸುಲಭದಲ್ಲಿ ದೊರೆತಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.  ನಿಮಗೂ ಅಂತಹ ಪೋಸ್ಟ್ ಕಂಡು ಬಂದರೆ ಅದರ ಲಿಂಕ್ ಅಥವ  ಸ್ಕ್ರೀನ್ ಶಾಟ್ ತೆಗೆದು  ಅಂಶುಲ್ ಮೇಲ್ ವಿಳಾಸಕ್ಕೆ ಕಳುಹಿಸಬಹುದು: anshulhelp@gmail.com