ವೃದ್ಧರೊವರ್ವರ ಶವ ಪತ್ತೆ; ಆತ್ಮಹತ್ಯೆ ಶಂಕೆ
ಸುಭ್ರಮಣ್ಯ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವೃದ್ಧರೊವರ್ವರ ಶವವು ಮನೆಯ ವಠಾರದಲ್ಲಿನ ಹಲಸಿನ ಮರದಲ್ಲಿ ನೇಣುಕುಣಿಕೆಯಲ್ಲಿ ನೇಲತ್ತಿರುವ ಸ್ಥಿತಿಯಲ್ಲಿ ಕಂಡು ಬಂದ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿ ಕೂಲಿ ಕಾರ್ಮಿಕ ತಿಮ್ಮಪ್ಪ (63 ) ಎಂದು ತಿಳಿದು ಬಂದಿದೆ. ವಿಪರೀತ ಕುಡಿತದ ಚಟಹೊಂದಿರುವ ವೃದ್ಧರು ಆತ್ಮಹತ್ಯೆ ಮಾಡಿ ಕೊಂಡಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಲು, ಸಮಾಜಸೇವಕ ನಿತ್ಯಾನಂದ ಒಳಕಾಡು […]
ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪ್ರತಿಭಟನೆ
ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು. ಶಿಕ್ಷಕರ ವರ್ಗಾವಣೆ ಕಾಯ್ದೆ 2017ರ ಪ್ರಕಾರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿಯೇ ಪೂರ್ಣಗೊಳಿಸಬೇಕು. ಆದರೆ ಚುನಾವಣಾ ನೀತಿ ಸಂಹಿತೆ ಹಾಗೂ ಇತರೆ ಅನಿವಾರ್ಯ ಕಾರಣಗಳಿಂದ ಮುಂದೂಡುತ್ತಾ ಬಂದಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಕಳೆದ ಮೂರು ವರ್ಷದಿಂದ ಆಗಿಲ್ಲ. […]
ಪುಲ್ವಾಮ ದಾಳಿ ವಿರೋಧಿಸಿ ಫೆ. 19ರಂದು ಕರ್ನಾಟಕ ಬಂದ್ ಗೆ ಕರೆ
ಬೆಂಗಳೂರು : ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿ ವಿರೋಧಿಸಿ ಫೆ. 19 ರಂದು ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಬೆಂಗಳೂರಿನಲ್ಲಿ ಶನಿವಾರ ಸುದ್ದೀಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ , ಕರ್ನಾಟಕ ಬಂದ್ ಗೆ ಕರೆ ನೀಡಿದ್ದರ ಕುರಿತು ತಿಳಿಸಿದ್ದಾರೆ. ಫೆ. 19 ರಂದು ಬೆಳಿಗ್ಗೆ 6ರಿಂದ ಸಂಜೆಯವರೆಗೂ ಬಂದ್ ನಡೆಯಲಿದೆ. ಆಸ್ಪತ್ರೆ, ಔಷಧಿ, ಹಾಲು ಮಾರಾಟಕ್ಕೆ ಹೊರತುಪಡಿಸಿ, ಸಿನಿಮಾ, ಖಾಸಗಿ ವಾಹನ, ಬಸ್ ಸಂಚಾರ ಬಂದ್ ಆಗಲಿದೆ, […]
ಕುಂದಾಪುರ: ದೇಶಕ್ಕಾಗಿ ಮಡಿದ ವೀರ ಯೋಧರಿಗೆ ಮೊಂಬತ್ತಿ ಬೆಳಗಿ ಶ್ರದ್ದಾಂಜಲಿ
ಕುಂದಾಪುರ: ಹಲವು ಸಮಯದ ಬಳಿಕ ತಮ್ಮ ಬಂಧು ಬಳಗವನ್ನು ಸೇರಿಕೊಂಡು ಕೆಲಹೊತ್ತು ಅವರೊಂದಿಗೆ ಕಾಲ ಕಳೆದು ಸೇನಾ ಕ್ಯಾಂಪ್ಗೆ ೭೮ ಬಸ್ಗಳಲ್ಲಿ ಸಿಆರ್ಪಿಎಫ್ ಯೋಧರು ಮರಳುತ್ತಿರುವ ಸಂದರ್ಭದಲ್ಲಿ ಹೊಂಚು ಹಾಕಿ ಕುಳಿತಿದ್ದ ಉಗ್ರಗಾಮಿಗಳು ದಾಳಿ ನಡೆಸಿ ೪೪ ಯೋಧರನ್ನು ಹತ್ಯೆಗೈದಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡಿದ ಜೀವಕ್ಕೆ ನಾವು ನಮ್ಮ ದೇಶದ ಆಂತರಿಕ ಭದ್ರತೆಯನ್ನು, ಆಂತರಿಕ ಶಾಂತಿ, ಸೌಹಾರ್ದತೆಯನ್ನು, ನಾವು ಸಹೋದರರು ಎಂಬ ಭಾವನೆಯನ್ನು ಭಿತ್ತುವ ಮೂಲಕ ನಮ್ಮನ್ನಗಲಿದ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸೋಣ ಎಂದು ಪತ್ರಕರ್ತ, ಚಿಂತಕ ರಾಮಕೃಷ್ಣ […]
ಅಂದು, ಈ ಹುಡುಗಿ ಏನ್ ಯಕ್ಷಗಾನ ಮಾಡ್ತಾಳೆ, ಎಂದು ಟೀಕಿಸಿದರು. ಇಂದು ಆ ಹುಡುಗಿಗೇ ಸನ್ಮಾನ ಮಾಡಿದರು :”ದಿವ್ಯಶ್ರೀ” ಅನ್ನೋ ನಾದಲೋಕದ ಕುವರಿಯ ಕತೆ
“ಈ ಹುಡುಗಿ ಏನ್ ಯಕ್ಷಗಾನ ಮಾಡ್ತಾಳೆ, ಚೆಂಡೆ ಬಾರಿಸ್ತಾಳಾ. ಹುಡುಗಿಯರು ಇಂತದಕ್ಕೆಲ್ಲಾ ಹೋದ್ರೆ ಹಾಳಾಗ್ತಾರೆ ಅಷ್ಟೆ” ಎಂದು ತನ್ನನ್ನು ಪರೋಕ್ಷವಾಗಿ ಮೂದಲಿಸಿದ ಧ್ವನಿಗಳಿಗೆ ಸವಾಲು ಹಾಕಿ ಬೆಳೆದ ಈ ಹುಡುಗಿ, ಕ್ರಮೇಣ ಅಪ್ರತಿಮ ಚೆಂಡೆ ಸಾಧಕಿಯಾಗುತ್ತಾಳೆ. ವಿದೇಶ ನೆಲದಲ್ಲಿಯೂ ಕಾರ್ಯಕ್ರಮ ಕೊಡುತ್ತಾಳೆ. ಈಗ ಆವತ್ತು, “ಈ ಹುಡುಗಿ ಏನ್ ಯಕ್ಷಗಾನ ಮಾಡ್ತಾಳೆ ?”ಅಂತ ಟೀಕಿಸಿದ ಧ್ವನಿಗಳೇ, “ಅಬ್ಬಾ ಎಂಥಾ ಚೆಂಡೆ ಬಾರಿಸ್ತಾಳೆ ಈ ಹುಡುಗಿ, ಗ್ರೇಟ್ ಅನ್ನುತ್ತಿದ್ದಾರೆ. ಅವರೇ ಸನ್ಮಾನ ಮಾಡುತ್ತಿದ್ದಾರೆ. ತನ್ನ ವಿಭಿನ್ನ ಶೈಲಿಯ ಚೆಂಡೆಯ […]