ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟ
ಉಡುಪಿ: ವಿಶ್ವಕರ್ಮ ಸಮಾಜ ಬಾಂಧವರಿಗಾಗಿ “ಭಾರ್ಗವ ಕ್ರಿಕೆಟರ್ಸ್ ಸಾಲಿಗ್ರಾಮ” ತಂಡದ ದಶಮಾನೋತ್ಸವದ ಪ್ರಯುಕ್ತ “ದಿವಂಗತ ಪಾರಂಪಳ್ಳಿ ವೆಂಕಟರಮಣ ಆಚಾರ್ಯ” ಸ್ಮರಣಾರ್ಥ ಫೆಬ್ರವರಿ 16 ಹಾಗೂ 17 ಶನಿವಾರ ಮತ್ತು ಭಾನುವಾರ ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ವಿಶಿಷ್ಟ ಮಾದರಿಯ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟವನ್ನು ಏರ್ಪಡಿಸಲಾಗಿದೆ. ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ 24 ತಂಡಗಳು ಭಾಗವಹಿಸಲಿದ್ದು, ರೋಚಕ ರೋಮಾಂಚಕಾರಿ ಹಣಾಹಣಿಗಿಳಿಯಲಿದೆ. ವಿಶೇಷ ಆಕರ್ಷಣೆ ಎಂಬಂತೆ ವಿಶ್ವಕರ್ಮ ಪಂದ್ಯಾಕೂಟದಲ್ಲೇ ದಾಖಲೆ ಎಂಬಂತೆ ಅತೀ ಎತ್ತರ ಹಾಗೂ ಅಗಲದ ಆಕರ್ಷಕ ಟ್ರೋಫಿಗಳು,ಇದೇ ಮೊದಲ ಬಾರಿಗೆ […]
ಶ್ರೀಕ್ಷೇತ್ರ ಮಂದಾರ್ತಿ; ಮನ್ಮಹಾರಥೋತ್ಸವ
ಉಡುಪಿ: ಶ್ರೀಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮನ್ಮಹಾರಥೋತ್ಸವ ಫೆ .14ರಂದು ನಡೆಯಿತು.
ದೇಶದ ಇತಿಹಾಸದಲ್ಲಿ ಅತಿ ದೊಡ್ಡ ಉಗ್ರರ ಕೃತ್ಯ
ಶ್ರೀನಗರ: ಸರ್ಜಿಕಲ್ ಸ್ಟ್ರೈಕ್ ನಡೆದರೂ ಪಾಕಿಸ್ತಾನ ಪ್ರಾಯೋಜಿತ ಉಗ್ರರಿಗೆ ಬುದ್ಧಿ ಬಂದಿಲ್ಲ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಬಸ್ಸಿನಲ್ಲಿದ್ದ 42 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ದೇಶದ ಸೇನಾ ಇತಿಹಾಸದಲ್ಲಿ ಅತಿ ದೊಡ್ಡ ಉಗ್ರರ ದಾಳಿ ಇದಾಗಿದೆ. ದಾಳಿಯಲ್ಲಿ 45 ಮಂದಿ ಗಾಯಗೊಂಡಿದ್ದು, 18 ಯೋಧರ ಸ್ಥಿತಿ ಗಂಭೀರವಾಗಿದೆ. ಗೋರಿಪೋರ ಪ್ರದೇಶದಲ್ಲಿ ಉಗ್ರರು ಸುಧಾರಿತ ಸ್ಫೋಟಕ ಬಳಸಿ ಸಿಆರ್‌ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ […]