ಕೋಟ ಜೋಡಿ ಕೊಲೆ ಪ್ರಕರಣ :ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಕುಂದಾಪುರ; ಜ.೨೬ ರಂದು ಕೋಟ ಚಿಕ್ಕನಕೆರೆ ಎಂಬಲ್ಲಿ ತಡರಾತ್ರಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ೧೬ ಮಂದಿ ಆರೋಪಿಗಳನ್ನು ಶುಕ್ರವಾರ ಕುಂದಾಪುರ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತ ಅವರ ಮುಂದೆ ಹಾಜರುಪಡಿಸಲಾಗಿದೆ. ಪೊಲೀಸರಿಂದ ಬಂಧನಕ್ಕೊಳಗಾಗಿ ಇಂದಿನವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಅಭಿಷೇಕ್ ಪಾಲನ್, ರೊಟ್ಟಿ ನಾಗರಾಜ್, ಸಂತೋಷ್ ಕುಂದರ್, ಪ್ರಣವ್ ರಾವ್, ಪವನ್ ಅಮೀನ್, ವಿರೇಂದ್ರ ಆಚಾರ್ಯ, ರಿತೇಶ್ ಕರ್ಕೇರಾ, ಶಂಕರ ಮೊಗವೀರ ಹಾಗೂ ಪೊಲೀಸ್ ಕಸ್ಟಡಿಯಲ್ಲಿದ್ದ ರಾಜಶೇಖರ ರೆಡ್ಡಿ, ಹರೀಶ್ ರೆಡ್ಡಿ, ರಾಘವೇಂದ್ರ […]

ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಿ ದಾಳಿ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು: ಪೇಜಾವರ ಶ್ರೀ

ಉಡುಪಿ: ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಿ ದಾಳಿ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು. ಯಾವುದೇ ಯುದ್ಧಕ್ಕೆ ಎಡೆಮಾಡಿಕೊಡಬಾರದು. ಸರ್ಜಿಕಲ್ ಸ್ಡ್ರೈಕ್ ಮಾಡಿದರೂ ಉತ್ತಮ.  ಯುದ್ಧ ನಡೆದರೆ ಎರಡು ದೇಶಗಳ ಅಮಾಯಕ ಜನರು ಹಾಗೂ ಯೋಧರು ಬಲಿಯಾಗುತ್ತಾರೆ. ಉಗ್ರರಿಗೆ ಶಾಕ್ ಕೊಡಲು ಪ್ರಧಾನಿ ತೀರ್ಮಾನ ಕೈಗೊಳ್ಳಬೇಕು. ರಾಮಮಂದಿರ ನಿರ್ಮಾಣ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರದ ಹಿರಿಯ ಮುಖಂಡರು ನಾಲ್ಕು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಚುನಾವಣಾ ಸಮಯವಾಗಿರುವುದರಿಂದ ರಾಮಮಂದಿರ ವಿಷಯ ಎತ್ತಿದರೆ ತಪ್ಪಾಗಬಹುದು. ಹಾಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ. […]

ಕೋಟ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಪಕ್ಷದಿಂದ ಅಮಾನತು

ಉಡುಪಿ : ಕೋಟ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ರವರ ಹೆಸರು ಕೋಟ ಪೋಲಿಸ್ ಠಾಣಾ ವ್ಯಾಪ್ತಿಯ ಅವಳಿ ಕೊಲೆ ಪ್ರಕರಣದಲ್ಲಿ ಆರೋಪಿಯೆಂದು ಹೆಸರಿಸಲ್ಪಟ್ಟಿರುವುದರಿಂದ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾದ ಮಟ್ಟಾರ್ ರತ್ನಕಾರ ಹೆಗ್ಡೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಶ್ರದ್ಧಾಂಜಲಿ ಸಭೆ

ಉಡುಪಿ: ಶ್ರೀನಗರ-ಜಮ್ಮು ಹೆದ್ದಾರಿಯ ಅವಂತಿಪೋರಾ ಎಂಬಲ್ಲಿ ಉಗ್ರರ ದಾಳಿಗೆ ತುತ್ತಾಗಿ ಹುತಾತ್ಮರಾದ ಕೇಂದ್ರ ಮೀಸಲು ಪೊಲೀಸ್‌ ಪಡೆ ಯೋಧರಿಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕದಲ್ಲಿ ಶುಕ್ರವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು. ಹುತಾತ್ಮ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಮಂದಾರ್ತಿ ಮಾತನಾಡಿ, ದೇಶವನ್ನು ನುಚ್ಚುನೂರು ಮಾಡಬೇಕು. ದೇಶದ ಅಸ್ತಿತ್ವವನ್ನು ದುರ್ಬಲಗೊಳಿಸಬೇಕೆಂದು ಉಗ್ರರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ದೇಶದ ಜನತೆ ಅವಕಾಶ ನೀಡಬಾರದು. ದೇಶದ ಗಡಿ ಕಾಯುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು. ಈ ಕೃತ್ಯದ  […]

ಉಗ್ರರ ಸೆದೆಬಡಿಯಲು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ… ಮೊದಲ ಬಾರಿಗೆ ಸ್ವಾತಂತ್ರ್ಯ ನೀಡಿದ ಮೋದಿ ಸರ್ಕಾರ….!

ನವದೆಹಲಿ: ಉಗ್ರರ  ಅಟ್ಟಹಾಸಕ್ಕೆ ಬಲಿಯಾದ ಯೋದರನ್ನು ನೆನೆದು ಇಡೀ ದೇಶವೇ ಕಣ್ಣೀರು ಹಾಕಿದ್ದು, ಯಾವ ರೀತಿ‌ ಪ್ರತಿಕಾರ ನೀಡಬಹುದು ಎಂದು ಇಡೀ ದೇಶ ಎದುರು ನೋಡುತ್ತಿದೆ. ಈ ಮಧ್ಯೆ ದೇಶದ ಜನತೆಗೆ ಮೋದಿ ಸಂದೇಶ ರವಾನಿಸಿದ್ದು, ಪಾಕಿಸ್ತಾನದ ವಿರುದ್ದ ಪ್ರತಿಕಾರ ತೀರಿಸಲು ಭಾರತೀಯ ಸೈನ್ಯಕ್ಕೆ ಪೂರ್ಣ ಸ್ವತಂತ್ರ ನೀಡಿದ್ದಾರೆ. ಪಾಪಿ ಪಾಕಿಸ್ತಾನವನ್ನು ಒಬ್ಬಂಟಿ ಮಾಡಲು ಕೇಂದ್ರ ಸರಕಾರ ವಿವಿಧ ತಂತ್ರ ರೂಪಿಸುತ್ತಿದೆ. ಹೇಡಿ ಉಗ್ರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದು ನಿಮ್ಮ ಕೊನೆಗಾಲ ಸನ್ನಿಹಿತವಾಗಿದೆ ಎಂದು ಮೋದಿ ತಿಳಿಸಿದ್ದಾರೆ. ದುಷ್ಕೃತ್ಯದ […]