ಕಾರ್ಕಳ ಮುಡಾರು ಕರುವಿನ‌ ರುಂಡ ಪತ್ತೆ, ತಾಲೂಕಿನಾದ್ಯಂದ ಅಕ್ರಮ ಕಸಾಯಿಖಾನೆ ನಡೆಯುತ್ತಿರುವ ಶಂಖೆ

ಕಾರ್ಕಳ: ತಾಲೂಕಿನಾದ್ಯಂತ ಅಕ್ರಮ ಕಸಾಯಿಖಾನೆಗಳು ಕಾರ್ಯಚರಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಅಲೆಮಾರಿ ಜಾನುವಾರುಗಳನ್ನು ಅಮಾನುಷವಾಗಿ ಕಡಿದು, ಅದರ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮಂಗಳವಾರ ಮುಡಾರು ಆಲ್ದಟ್ಟ ಸೇತುವೆಯ ತಳಭಾಗದಲ್ಲಿ ಕಪ್ಪು ಬಣ್ಣದ ಕರುವೊಂದರ ತಲೆ, ಚರ್ಮ ಹಾಗೂ ದೇಹದ ಇತರ ಭಾಗ ದೊರೆತಿದೆ. ಪ್ಲಾಸ್ಟಿಕ್ ಗೋಣಿಯೊಂದರಲ್ಲಿ ತುಂಬಿಸಿ ಎಸೆಯಲಾಗಿದೆ. ಶನಿವಾರ ರಾತ್ರಿಯಿಂದ ರವಿವಾರ ನಸುಕಿನ ಜಾವದೊಳಗಾಗಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ತಾಲೂಕಿನ ಬಜಗೋಳಿ, ಹೊಸ್ಮಾರು,  ನಿಟ್ಟೆ, ಮುದ್ರಾಡಿ ಮೊದಲಾದ ಭಾಗಗಳಲ್ಲಿ ನಡೆದ […]

ಫೆ.8: ಉಡುಪಿ ಕಿದಿಯೂರು ಶ್ರೀ ವಿದ್ಯಾಸಮುದ್ರತೀರ್ಥ ಪ್ರೌಢಶಾಲೆ ಸುವರ್ಣ ಸಂಭ್ರಮ

ಉಡುಪಿ: ಕಿದಿಯೂರು ವಿದ್ಯಾಸಮುದ್ರತೀರ್ಥ ಪ್ರೌಢಶಾಲೆಯ ಸುವರ್ಣ ಸಂಭ್ರಮ ಇದೇ 8ರಿಂದ 10ರ ವರೆಗೆ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ಉದಯಕುಮಾರ್‌ ಶೆಟ್ಟಿ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯ ಸುವರ್ಣ ಮಹೋತ್ಸವ ಸಮಿತಿಯ ವತಿಯಿಂದ ಈ ಸಮಾರಂಭ ಜರುಗಲಿದೆ. ಫೆ. 8ರಂದು ಬೆಳಿಗ್ಗೆ 9ಗಂಟೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುವರ್ಣ ಸಂಭ್ರಮದ ಧ್ವಜಾರೋಹಣ ನೆರವೇರಿಸುವರು. ಬೆಳಿಗ್ಗೆ 9.30ಕ್ಕೆ ಉದ್ಯಮಿ ಜಿ. ಶಂಕರ್‌ ನೂತನ ಸಭಾಂಗಣವನ್ನು ಉದ್ಘಾಟಿಸುವರು. […]