ಕಾರ್ಕಳ: ತಾಲೂಕಿನಾದ್ಯಂತ ಅಕ್ರಮ ಕಸಾಯಿಖಾನೆಗಳು ಕಾರ್ಯಚರಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಅಲೆಮಾರಿ ಜಾನುವಾರುಗಳನ್ನು ಅಮಾನುಷವಾಗಿ ಕಡಿದು, ಅದರ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮಂಗಳವಾರ ಮುಡಾರು ಆಲ್ದಟ್ಟ ಸೇತುವೆಯ ತಳಭಾಗದಲ್ಲಿ ಕಪ್ಪು ಬಣ್ಣದ ಕರುವೊಂದರ ತಲೆ, ಚರ್ಮ ಹಾಗೂ ದೇಹದ ಇತರ ಭಾಗ ದೊರೆತಿದೆ.
ಪ್ಲಾಸ್ಟಿಕ್ ಗೋಣಿಯೊಂದರಲ್ಲಿ ತುಂಬಿಸಿ ಎಸೆಯಲಾಗಿದೆ. ಶನಿವಾರ ರಾತ್ರಿಯಿಂದ ರವಿವಾರ ನಸುಕಿನ ಜಾವದೊಳಗಾಗಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.
ತಾಲೂಕಿನ ಬಜಗೋಳಿ, ಹೊಸ್ಮಾರು, ನಿಟ್ಟೆ, ಮುದ್ರಾಡಿ ಮೊದಲಾದ ಭಾಗಗಳಲ್ಲಿ ನಡೆದ ಕೆಲವೊಂದು ಘಟನೆಗಳು ಅಕ್ರಮ ಕಸಾಯಿಖಾನೆಗಳು ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗುವಂತಿದೆ.