ಫೆ.9 ರಿಂದ ಶ್ರೀ ಕಾಂತಾಬಾರೆ ಬೂದಬಾರೆ ಜನ್ಮ ಕ್ಷೇತ್ರ ಕೊಲ್ಲೂರು ವರ್ಷಾವಧಿ ಜಾತ್ರಾ ಮಹೋತ್ಸವ

ಶ್ರೀ ಕಾಂತಾಬಾರೆ ಬೂದಬಾರೆ ಜನ್ಮ ಕ್ಷೇತ್ರ ಕೊಲ್ಲೂರು, ಮಂಗಳೂರು ತಾಲೂಕು ಇದರ  ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.9 ರಿಂದ ಫೆ.11 ವರೆಗೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಸೇವೆ ಹಾಗೂ ಕಾಲಾವಧಿ ಜಾತ್ರೆಯು ಶನಿವಾರ ಏಳಂಜೆ ವೇದ ಮೂರ್ತಿ ಶ್ರೀ ಶ್ರೀಧರ ಭಟ್ ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಫೆ.9ರಂದು ಗಣ ಹೋಮ, ನವಕ ಶುದ್ಧ, ಪ್ರತಾ: ಶುದ್ಧ, ಚಪ್ಪರ ಮುಹೂರ್ತ ನಡೆಯಲಿದೆ. ಫೆ.10 ರಂದು ಶ್ರೀ ನಾಗದೇವರ ಸನ್ನಿದಿಯಲ್ಲಿ ನಾಗತಂಬಿಲ, ಪೂರ್ವ ಪ್ರಸನ್ನ […]

ರೈಲಿನಲ್ಲಿ ಡಿಸೇಲ್ ಸಾಗಾಟ- ವ್ಯಕ್ತಿ ಬಂಧನ

ಉಡುಪಿ : ರೈಲ್ವೇ ಪ್ರೊಟೆಕ್ಷನ್ ಪೋರ್ಸ್‍ನ ಅಧಿಕಾರಿಗಳು ಫೆ. 6 ರಂದು ಗಸ್ತು ತಿರುಗುತ್ತಿದ್ದ ವೇಳೆ ಭಟ್ಕಳದಿಂದ ಉಡುಪಿಗೆ ಡೀಸೆಲ್ ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ರೈಲ್ವೆ ನಿಯಮಗಳ ಪ್ರಕಾರ ರೈಲಿನಲ್ಲಿ ಡೀಸೆಲ್‍ನಂತಹ ಅಪಾಯಕಾರಿ ವಸ್ತುಗಳನ್ನು ಕೊಂಡು ಹೋಗುವುದು ಶಿಕ್ಷಾರ್ಹವಾಗಿದ್ದು, ವ್ಯಕ್ತಿಯನ್ನು ಬಂಧಿಸಿ, ಜಿಲ್ಲಾ  ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಶಿಕ್ಷೆ ವಿಧಿಸಲಾಗಿದೆ.     ರೈಲ್ವೆ ನಿಯಮಗಳ ಪ್ರಕಾರ ಪ್ಯಾಸೆಂಜರ್ ರೈಲಿನಲ್ಲಿ ಡೀಸೆಲ್‍ನಂತಹ ಅಪಾಯಕಾರಿ ವಸ್ತುಗಳನ್ನು ಕೊಂಡು ಹೋಗುವುದು ಅಪಾಯಕಾರಿ ಹಾಗೂ ಶಿಕ್ಷಾರ್ಹವಾಗಿದ್ದು, ಇದರಿಂದ ಪ್ರಯಾಣಿಕರಿಗೂ ತೊಂದರೆ ಆಗುವ […]

ತೆಂಗಿನ ಮರದಿಂದ ನೀರಾ ಉತ್ಪಾದನೆ – ಪ್ರಾತ್ಯಕ್ಷಿಕೆ ಮತ್ತು ತರಬೇತಿ

ಉಡುಪಿ : ಕೇಂದ್ರೀಯ ಪ್ಲಾಂಟೇಷನ್ ಬೆಳೆಗಳ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಕೆ.ಬಿ. ಹೆಬ್ಬಾರ್ ಇವರ ವತಿಯಿಂದ ಫೆ. 8 ರಂದು ತೆಂಗಿನ ಮರದಿಂದ ನೀರಾ ಉತ್ಪಾದನೆ, ಪ್ರಾತ್ಯಕ್ಷಿಕೆ ಮತ್ತು ತೆಂಗಿನ ಮೌಲ್ಯವರ್ಧನೆ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಲ್ಲಿ ಹಮ್ಮಿಕೊಳ್ಳಲಾಗಿದೆ.  ಆಸಕ್ತರು ಕೃಷಿ ವಿಜ್ಞಾನ ಕೇಂದ್ರದ ದೂರವಾಣಿ ಸಂಖ್ಯೆ: 0820-2563923 ಗೆ ಕರೆ ಮಾಡಿ ಹೆಸರು  ನೋಂದಾಯಿಸಿಕೊಳ್ಳುವಂತೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

ಯಾವುದೇ ಶ್ರಮ ಪಡದವರಿಗೂ, ಕಠಿಣ ಶ್ರಮ  ಪಡುವವರಿಗೂ ಒಂದೇ ಅನುದಾನ ಸರಿಯಲ್ಲ

ಉಡುಪಿ: ಸರಕಾರ ಯಾವುದೇ ಶ್ರಮಪಡದೆ ಆರಾಮಾಗಿ ಎಸಿ ಕೊಠಡಿಯಲ್ಲಿ ಕುಳಿತು ಬರೆಯುವವರ ಸಾಹಿತ್ಯ ಅಕಾಡೆಮಿಗೂ 1 ಕೋಟಿ ರೂ. ಹಾಗೂ ಊರೂರು ಅಲೆದಾಟ ನಡೆಸಿ ಹಗಲಿರುಳು  ದುಡಿಯುವ ನಾಟಕ ಅಕಾಡೆಮಿಗೂ ಅಷ್ಟೇ ವಾರ್ಷಿಕ ಅನುದಾನ ನೀಡುತ್ತಿದೆ. ಇದು ಸರಿಯದ ಕ್ರಮ ಅಲ್ಲ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ನಾಟಕ ಅಕಾಡೆಮಿಗೆ ನೀಡುವ 1 ಕೋಟಿ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಸಿಬ್ಬಂದಿಗಳಿಗೆ ವೇತನ ನೀಡಲು 35 ಲಕ್ಷ ಖರ್ಚಾದರೆ, ಉಳಿದ […]

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 400 ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಮಾಡಿದ ಶಾಸಕ ರಘುಪತಿ ಭಟ್

ದೇಶಾದ್ಯಂತ ಭಾರೀ ಯಶಸ್ಸು ಕಂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವ ಮಹತ್ವಾಕಾಂಕ್ಷೆಯ ಯೋಜನೆಯಾದ “ಉಜ್ವಲ” ಯೋಜನೆಯಡಿಯಲ್ಲಿ  ಉಡುಪಿ ಜಿಲ್ಲೆಯ ಒಟ್ಟು 2000 ಫಲಾನುಭವಿಗಳಿಗೆ ಗ್ಯಾಸ್ ಸೌಲಭ್ಯ ಈಗಾಗಲೇ ಸಿಕ್ಕಿದ್ದು ಇಂದು 400 ಜನರಿಗೆ ಗ್ಯಾಸ್ ವಿತರಣೆಯನ್ನು ಶಾಸಕರಾದ ಶ್ರೀ ರಘುಪತಿ ಭಟ್ ಅವರು ಮಾಡಿದ್ದಾರೆ. ಕೊಕ್ಕರ್ಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರಘುಪತಿ ಭಟ್, ಕೇಂದ್ರ ಸರಕಾರ ಜನಸಾಮಾನ್ಯರ ಕಣ್ಣೊರೆಸುವ ಕೆಲಸ ಮಾಡುತ್ತಿದೆ, ಒಲೆಯ ಮುಂದೆ ಕೂತು ಕಣ್ಣೀರುಡುತ್ತಿದ್ದ ತಾಯಂದಿರ ಮುಖದಲ್ಲಿ ಇಂದು ಮಂದಹಾಸ ಕಾಣುತ್ತಿದೆ, ಯಾಕೆಂದರೆ […]