ಹೊನಲು ಬೆಳಕು ಪಂದ್ಯಾಕೂಟದ ಮೂಲಕ ಶಾಲಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಚಾಂಪಿಯನ್ ಟ್ರೋಫಿ 2019
ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವ ಮುಖೇನ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳದ ಹಳೆ ವಿದ್ಯಾರ್ಥಿ ಸಂಘ ಯು.ಎ.ಇ ಘಟಕ ಹೊಸ ದಾಖಲೆಯನ್ನೆ ನಿರ್ಮಿಸಿದೆ. ಹೌದು ಜನವರಿ 24 ,2019 ರಂದು ಪ್ರಪ್ರಥಮ ಬಾರಿಗೆ ಅಲ್-ನಾಹದಾದ ದುಬೈ ಸ್ಕಾಲರ್ ಸ್ಕೂಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ್ದ ಚಾಂಪಿಯನ್ ಟ್ರೋಫಿ ಲೀಗ್ ಪಂದ್ಯಾಕೂಟ ಬಹಳ ಯಶಸ್ವಿಯೊಂದಿಗೆ ಮುಕ್ತಾಯಗೊಂಡಿತು. ಈ ಪಂದ್ಯಾಕೂಟದಲ್ಲಿ ಹೊನ್ನಾಳದ 5 ತಂಡಗಳು ಭಾಗವಹಿಸಿದ್ದವು. ಜಾಕೀರ್ ಬಿ.ಆರ್ ಮುಂದಾಳತ್ವದ ಹಾಗೂ ಅಯಾಜ್ ಖಾನ್ ನಾಯಕತ್ವದ ಹೊನ್ನಾಳ ಸೂಪರ್ ಕಿಂಗ್ಸ್, […]
ಗಾಳಕ್ಕೆ ಸಿಕ್ಕಿತು 16 ಕೆ.ಜಿ. ತೂಗುವ ಮೀನು..!
ಉಡುಪಿ: ಮಲ್ಪೆ ಸೀವಾಕ್ ಸಮೀಪದ ಸಮುದ್ರದಲ್ಲಿ ಫೆ. 1ರಂದು ಬೃಹತ್ ಗಾತ್ರದ ಮೀನೊಂದು ಗಾಳಕ್ಕೆ ಸಿಕ್ಕಿರುವ ಬಗ್ಗೆ ವರದಿಯಾಗಿದೆ. ಮುಂಜಾವಿನ 4 ಗಂಟೆಯ ವೇಳೆಗೆ ಮಲ್ಪೆಯ ತನ್ವೀರ್ ಎಂಬವರ ಗಾಳಕ್ಕೆ ಈ ಕುಲೇಜ್ ಎಂಬ ಮೀನು ದೊರೆತಿದೆ. ಸುಮಾರು 4 ಅಡಿ ಉದ್ದದ ಈ ಮೀನು 16 ಕೆಜಿ ತೂಕ ಇರುವುದಾಗಿ ತನ್ವೀರ್ ತಿಳಿಸಿದ್ದಾರೆ.
ಭೂಗತ ಪಾತಕಿ ರವಿ ಪೂಜಾರಿಗಿತ್ತು ಮಲ್ಪೆಯ ನಂಟು, ರವಿ ಪೂಜಾರಿ ವಿರುದ್ಧ ಉಡುಪಿ ಸೇರಿದಂತೆ ಜಿಲ್ಲೆಯ ವಿವಿಧೆಡೆ 10 ಪ್ರಕರಣ ದಾಖಲು
ಉಡುಪಿ: ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿತನಾಗಿರುವ ಮೋಸ್ಟ್ ವಾಟೆಂಡ್ ಭೂಗತ ಪಾತಕಿ ರವಿ ಪೂಜಾರಿ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ರವಿ ಪೂಜಾರಿಯ ಮೇಲೆ ಹಫ್ತಾ ವಸೂಲಿ, ಬೆದರಿಕೆ ಸೇರಿದಂತೆ 10 ಪ್ರಕರಣಗಳು ದಾಖಲಾಗಿವೆ. 2006ರಲ್ಲಿ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರಿಕೆ ಹಣಕ್ಕಾಗಿ ಬೆದರಿಕೆಯೊಡ್ಡಿದ ಪ್ರಕರಣ ದಾಖಲಾದರೆ, ಕಾರ್ಕಳ, ಉಡುಪಿ, ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಹಫ್ತಾ ವಸೂಲಿ, ಬೆದರಿಕೆ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮಲ್ಪೆಯಲ್ಲಿತ್ತು […]
ಫೆ.2: ಕಟಪಾಡಿಬೀಡು ಮೂಡು-ಪಡು ಜೋಡುಕರೆ ಕಂಬಳ
ಉಡುಪಿ: ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಕಟಪಾಡಿಬೀಡು ಮೂಡು-ಪಡು ಜೋಡುಕರೆ ಕಂಬಳ ಫೆ. 2ರಿಂದ ನಡೆಯಲಿದೆ. ಪೂರ್ವಹ್ನ 10.30ಕ್ಕೆ ಕಂಬಳ ಉದ್ಘಾಟನೆಗೊಳ್ಳಲಿದ್ದು, ಕಂಬಳ ವ್ಯವಸ್ಥಾಪಕ ಕಟಪಾಡಿಬೀಡು ಮಹಾಬಲ ಹೆಗ್ಡೆ ಚಾಲನೆ ನೀಡಲಿದ್ದಾರೆ. ಸಂಜೆ 6.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ವಿ.ಸುನಿಲ್ ಕುಮಾರ್, ಡಾ. ಭರತ್ ಶೆಟ್ಟಿ, ರಾಜೇಶ್ ನಾೈಕ್, ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ: ಅಂಬಲಪಾಡಿ ದೇವಿಯ ಅಭಯ, ಮೂರು ವಾರದೊಳಗೆ ಮೀನುಗಾರರ ಸುಳಿವು.!
ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿ ಕಣ್ಮರೆಯಾಗಿರುವ ಏಳು ಮೀನುಗಾರರು ಸುರಕ್ಷಿತವಾಗಿದ್ದು, ಅವರ ಬಗ್ಗೆ ಮೂರು ವಾರದೊಳಗೆ ಸುಳಿವು ಕೊಡುತ್ತೇನೆ. ನೀವು ಆತಂಕ ಪಡುವ ಅಗತ್ಯವಿಲ್ಲ ಎಂದು ಅಂಬಲಪಾಡಿ ದೇಗುಲದ ದೇವಿ ಅಮ್ಮನವರು ಮೀನುಗಾರರ ಕುಟುಂಬದವರಿಗೆ ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ 46 ದಿನಗಳು ಕಳೆದಿವೆ. ಆದರೆ ಈವರೆಗೂ ಮೀನುಗಾರರ ಯಾವುದೇ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ […]