ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ; ಯಶಸ್ವಿ 12ನೇ ವರ್ಷದ ಸಂಭ್ರಮ
ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಆದರ್ಶ ತಂಡ, 14 ಬಾರಿ ರಾಜ್ಯದ ಅತಿ ಶಿಸ್ತಿನ ತಂಡ ಪ್ರಶಸ್ತಿ ಪಡೆದ,ಹಲವಾರು ಪ್ರತಿಷ್ಟಿತ ಟ್ರೋಫಿ ಗಳಿಸಿ, ಸುಮಾರು ಮೂರು ದಶಕಗಳಿಂದ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಗಳನ್ನು ಸಂಘಟಿಸಿ ವಿಶ್ವಕ್ಕೆ ಮಾದರಿಯಾದ ಟೆನ್ನಿಸ್ ಬಾಲ್ ನ ಶ್ರೇಷ್ಠ ತಂಡ ” ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್” ನ ಯಶಸ್ವಿ 12ನೇ ವರ್ಷದ ಸಂಭ್ರಮ ಪಿಪಿಲ್ 12 ವೆಂಕಟರಮಣ ತಂಡದ ಸದಸ್ಯರಿಗಾಗಿ ದಿ 27 ರಂದು ಉದ್ಯಾವರ ಗ್ರಾ ಪಂ ಮೈದಾನದಲ್ಲಿ […]
ಎಣ್ಣೆಹೊಳೆ ಹಂಚಿಕಟ್ಟೆಯ ಮಹಾಮ್ಮಾಯಿ ದೇವಾಲಯ:ರಂಗಮಂದಿರ ಉದ್ಘಾಟನೆ
ಕಾರ್ಕಳ : ಭಜನೆಗಳು ನಡೆಯುವಲ್ಲಿ ವಿಭಜನೆ ಇರುವುದಿಲ್ಲ ಎಂದು ಶಾಸಕ ವಿ.ಸುನೀಲ್ ಕುಮಾರ್ ತಿಳಿಸಿದರು. ಎಣ್ಣೆಹೊಳೆಯ ಹಂಚಿಕಟ್ಟೆಯ ಮಹಮ್ಮಾಯಿ ದೇವಾಲಯದಲ್ಲಿ ಭಜನಾ ಮಂಡಳಿಯಿಂದ ನಿರ್ಮಿಸಿದ ರಂಗಮಂದಿರ ಉಧ್ಘಾಟಿಸಿ ಮಾತನಾಡಿ ,ಯುವಕರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಹಾಗು ಶಾರೀರಿಕ ಸಧೃಢವಾಗಿಸುವಲ್ಲಿ ಗ್ರಾಮ ಭಜನೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದರು .ಧಾರ್ಮಿಕ ಉಪನ್ಯಾಸ ನೀಡಿದ ಸಾಹಿತಿ ಹಾಗೂ ನ್ಯಾಯವಾದಿ ಅತ್ರಾಡಿ ಪೃಥ್ವಿರಾಜ್ ಹೆಗ್ಟೆ ಮಾತನಾಡಿ, ರಾಮಾಯಣ ಮಹಾಭಾರತ ಮಹಾಕಾವ್ಯಗಳು ಜೀವನಕ್ಕೆ ಮಾರ್ಗದರ್ಶನವನ್ನು ನೀಡುವ ಹಾಗು ಜೀವನ ಮೌಲ್ಯಗಳನ್ನು ಕಲಿಸುವ ತಳಹದಿಯಾಗಿದೆ. […]
‘ಟ್ರೈನ್ 18’ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಹೆಸರು
ನವದೆಹಲಿ: ದೇಶಿಯ ತಂತ್ರಜ್ಞಾನ ವ್ಯವಸ್ಥೆಯಲ್ಲಿ ನಿರ್ಮಿಸಿದ ಅತಿ ವೇಗದ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ರವಿವಾರ ಈ ಮಾಹಿತಿ ತಿಳಿಸಿದ್ದಾರೆ. ಈ ರೈಲು ನಿರ್ಮಾಣ ಆರಂಭಿಸಿದಾಗ ‘ಟ್ರೈನ್ 18’ ಎಂದು ಹೆಸರಿಡಲಾಗಿತ್ತು. ಬಳಿಕ ಇದಕ್ಕೆ ಹೆಸರಿಡಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಆದರೆ ಅಂತಿಮವಾಗಿ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ನಿಗದಿಪಡಿಸಲಾಯಿತು. ಇದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಜನರಿಗೆ ನೀಡುತ್ತಿರುವ ಕೊಡುಗೆಯಾಗಿದೆ ಎಂದರು. ದೆಹಲಿಯಿಂದ ವಾರಾಣಸಿಗೆ ಸಂಚರಿಸುವ ಸಾಮರ್ಥ್ಯ ಇರುವ ಈ ರೈಲನ್ನು ಪ್ರಧಾನಮಂತ್ರಿ ನರೇಂದ್ರ […]