ಎಣ್ಣೆಹೊಳೆ ಹಂಚಿಕಟ್ಟೆಯ ಮಹಾಮ್ಮಾಯಿ ದೇವಾಲಯ:ರಂಗಮಂದಿರ ಉದ್ಘಾಟನೆ

ಕಾರ್ಕಳ : ಭಜನೆಗಳು ನಡೆಯುವಲ್ಲಿ ವಿಭಜನೆ ಇರುವುದಿಲ್ಲ ಎಂದು ಶಾಸಕ ವಿ.ಸುನೀಲ್ ಕುಮಾರ್ ತಿಳಿಸಿದರು. ಎಣ್ಣೆಹೊಳೆಯ ಹಂಚಿಕಟ್ಟೆಯ ಮಹಮ್ಮಾಯಿ ದೇವಾಲಯದಲ್ಲಿ ಭಜನಾ ಮಂಡಳಿಯಿಂದ ನಿರ್ಮಿಸಿದ ರಂಗಮಂದಿರ ಉಧ್ಘಾಟಿಸಿ ಮಾತನಾಡಿ ,ಯುವಕರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಹಾಗು ಶಾರೀರಿಕ ಸಧೃಢವಾಗಿಸುವಲ್ಲಿ ಗ್ರಾಮ ಭಜನೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದರು .
ಧಾರ್ಮಿಕ ಉಪನ್ಯಾಸ ನೀಡಿದ ಸಾಹಿತಿ ಹಾಗೂ ನ್ಯಾಯವಾದಿ ಅತ್ರಾಡಿ ಪೃಥ್ವಿರಾಜ್ ಹೆಗ್ಟೆ ಮಾತನಾಡಿ, ರಾಮಾಯಣ ಮಹಾಭಾರತ ಮಹಾಕಾವ್ಯಗಳು ಜೀವನಕ್ಕೆ ಮಾರ್ಗದರ್ಶನವನ್ನು ನೀಡುವ ಹಾಗು ಜೀವನ ಮೌಲ್ಯಗಳನ್ನು ಕಲಿಸುವ ತಳಹದಿಯಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತವಾದ ಸ್ಥಾನವನ್ನೆ ನೀಡಲಾಗಿದೆ ಅದಕ್ಕೆ ಕಾರಣ ರಾಮಾಯಣದ ಕಥೆಗಳು ಬೆಳಕು ಚೆಲ್ಲಿವೆ. ಮನೋಕ್ಲೇಶಗಳು ಕಳೆದು ಮನಪರಿವರ್ತನೆ ಯಾಗಿ ,ರಾಮರಾಜ್ಯ ನಿರ್ಮಾಣವಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜಪುರ ಸಾರಸ್ವತ ಸಂಘದ ಕಾರ್ಕಳ ಅಧ್ಯಕ್ಷ ಹಿರ್ಗಾನ ಅಶೋಕ್ ನಾಯಕ್ ಮಾತನಾಡಿ ದೇವಾಲಯಗಳು ಹಿಂದೂಸಂಸ್ಕೃತಿಯನ್ನು ಉಳಿಸುವ ಕೇಂದ್ರಗಳು , ಸಂಸ್ಕೃತಿ ಕಲೆ ವಾಸ್ತು ಶಿಲ್ಪಗಳ ಮೇಲೆ ಬೆಳಕು ಚೆಲ್ಲಿ ಧರ್ಮದ ಶ್ರೀಮಂತಿಕೆಯನ್ನು ತೋರಿಸುತ್ತವೆ ಎಂದರು.
ಸಭೆಯಲ್ಲಿ ಉದ್ಯಮಿ ದಾನಿ ಸುಧಾಕರ್ ನಾಯ್ಕ್ , ಜ್ಯೋತಿಶಿ ಅರುಣ್ ಭಟ್, ವೈದ್ಯ ಸತೀಶ್ ಶೆಟ್ಟಿ ,ಪರಮೇಶ್ವರಯ್ಯ ಜಂಗಮಮಠ, ಸುರೇಂದ್ರಶೆಟ್ಟಿ ಕೆಂಜಿಲ,ಶ್ಯಾಂ ನಾಯ್ಕ್, ಸುಂದರ್ ಶೆಟ್ಟಿ , ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಿಕೆಯಲ್ಲಿ ಉತ್ತಮ ಫಲಿತಾಂಶವಿತ್ತ ವಿದ್ಯಾರ್ಥೀಗಳಿಗೆ ಪ್ರತಿಭಾ ಪುರಸ್ಕಾರ ವನ್ನು ನೀಡಲಾಯಿತು
ಹರೀಶ್ ನಾಯಕ್ ಕಾರ್‍ಯಕ್ರಮ ನಿರೂಪಿಸಿ, ಶರತ್ ಶೆಟ್ಟಿ, ಧನ್ಯವಾದವವಿತ್ತರು