ಮೇ 1ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 48ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 1ರಂದು ಸಂಜೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 48ನೇ ವರ್ಷದ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ.  ಶ್ರೀ ಕ್ಷೇತ್ರದಲ್ಲಿ ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಲ ಸೂತ್ರವನ್ನು ನೀಡಲಾಗುವುದು. ಯಾವುದೇ ಸಂದರ್ಭದಲ್ಲಿ ಎರಡನೇ ವಿವಾಹಕ್ಕೆ ಅವಕಾಶವಿರುವುದಿಲ್ಲ. ಸಾಮೂಹಿಕ ವಿವಾಹದ ಎಲ್ಲ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ವತಿಯಿಂದಲೇ ಭರಿಸಲಾಗುವುದು. ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಾಧಿಕಾರಿ ಡಾ| […]

ಜ.27 : ಚಲನಚಿತ್ರ ಅಭಿನಯ ತರಬೇತಿ ಕಾರ್ಯಾಗಾರ

ಯುನಿಸೆಫ್‌ ಪ್ರಸಾರ ಭಾರತಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ದಿಶಾ ಕಮ್ಯೂನಿಕೇಷನ್ಸ್‌ ಕಟಪಾಡಿ, ಸೃಷ್ಟಿ ಕ್ರಿಯೇಷನ್ಸ್‌ ಉಡುಪಿ, ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಚಲನಚಿತ್ರ ಅಭಿನಯ ತರಬೇತಿ ಕಾರ್ಯಾಗಾರವು ಕಾಪು ವಿದ್ಯಾನಿಕೇತನ ಸೆಮಿನಾರ್‌ ಹಾಲ್‌ನಲ್ಲಿ ಜ.27ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ಒಂದು ಶಾಲೆಯ ಕಥೆ ಚಿತ್ರದ ನಿರ್ಮಾಪಕಿ ವಿದ್ಯಾಲತಾ ಯು.ಶೆಟ್ಟಿ ಕಾರ್ಯಾಗಾರವನ್ನು ಉದ್ಘಾಟಿಸಲಿರುವರು. ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಪಿ.ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಚಿತ್ರನಿರ್ದೇಶಕ ಕೃಷ್ಣಪ್ರಸಾದ್‌ ಉಪ್ಪಿನಕೋಟೆ, ಸಮಾಜ ಸೇವಕಿ […]

ಜ.26: ಹಿರಿಯಡ್ಕ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ವಾರ್ಷಿಕೋತ್ಸವ

ಹಿರಿಯಡ್ಕ: ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ (ರಿ.) ಹಿರಿಯಡ್ಕ ಇದರ 27ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ  ಜ.26 ರoದು ಕೋಟ್ನಕಟ್ಟೆ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಬೆಳಗ್ಗೆ 7.30 ಕ್ಕೆ ಉದ್ಯಮಿ ಬಿ.ರೋಹಿದಾಸ ಪೈ  ಇವರಿಂದ ಧ್ವಜಾರೋಹಣ, ಸಂಜೆ 6:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7:30ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸಾಧನಾಶೀಲ ಕೃಷಿಕ ಪ್ರಶಸ್ತಿ ಪುರಸ್ಕೃತ ಕುದಿ ಶ್ರೀನಿವಾಸ್ ಭಟ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಕಾರ್ಕಳದ ವಾಗ್ಮಿ  ಶ್ರೀಕಾಂತ್ ಶೆಟ್ಟಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ನೃತ್ಯ […]

ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಲಿಕಾ ಪುಣ್ಯಕ್ಷೇತ್ರಕ್ಕೆ ಸಚಿವೆ ಜಯಮಾಲ ಭೇಟಿ

ಕಾರ್ಕಳ: ಮಾನವ ಧರ್ಮವೇ ಶ್ರೇಷ್ಠವಾದುದು, ಉನ್ನತವಾದುದು, ಜಾತಿ, ಧರ್ಮಕ್ಕಿಂತ ನಂಬಿಕೆ ಮತ್ತು ಮಾನವ ಧರ್ಮಕ್ಕೆ ಹೆಚ್ಚಿನ ಬೆಲೆ ನೀಡಬೇಕು,  ಎಂದು ಕನ್ನಡ ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದರು. ಐತಿಹಾಸಿಕ ಅತ್ತೂರು ಸಂತಲಾರೆನ್ಸ್ ಬಸಲಿಕಾ ಪುಣ್ಯಕ್ಷೇತ್ರಕ್ಕೆ ಗುರುವಾರದಂದು ಅವರು ಭೇಟಿ ನೀಡಿ, ಅತ್ತೂರು ಪುಣ್ಯಕ್ಷೇತ್ರದ ಕಾರಣೀಕದ ಕುರಿತು ಮಾತನಾಡಿದರು.  ಸಂತ ಲಾರೆನ್ಸ್‌ರ ಆಶೀರ್ವಾದದೊಂದಿಗೆ ಮುಂದಿನ ವರ್ಷಾವಧಿಯಲ್ಲಿ ಸಚಿವೆಯಾಗಿಯೇ ಮುಂದುವರಿದು ಮುಂದಿನ ಅತ್ತೂರು ಜಾತ್ರೆಯಲ್ಲಿಯೂ ಪಾಲ್ಗೊಳ್ಳುವ […]

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ದೊರೆಯಬೇಕು: ಡಾ| ಪೂರ್ಣಿಮ ಮುಂಬೈ ಕನ್ನಡಿಗರ ಸಿದ್ಧಿ ಸಾಧನೆಗಳು ಕೃತಿ ಬಿಡುಗಡೆ

ಕಾರ್ಕಳ, ಜ. 22 : ಮುಂಬೈ ವಿವಿಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ಮುಂಬೈ ಕನ್ನಡಿಗರ ಸಿದ್ಧಿ ಸಾಧನೆಗಳು ಕೃತಿಯನ್ನು ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಮುಂಬೈ ಕನ್ನಡಿಗರ ಸಿದ್ಧಿ ಸಾಧನೆಗಳು ಕೃತಿ ರಚನೆಗಾರ್ತಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಸಮ್ಮಾನ ಸ್ವೀಕರಿಸಿ ಮಾತನಾಡಿ, ಕಾಲೇಜು ಶಿಕ್ಷಣ ಮುಗಿದಾಗ ಮುಂದೇನು ಅನ್ನುವ ಪ್ರಶ್ನೆ ನನ್ನ ಮುಂದೆ ಇತ್ತು. ಆ ದಿನಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟೊಂದು ಪ್ರೋತ್ಸಾಹ ಇರಲಿಲ್ಲ. […]