ಜ.27 : ಚಲನಚಿತ್ರ ಅಭಿನಯ ತರಬೇತಿ ಕಾರ್ಯಾಗಾರ

ಯುನಿಸೆಫ್‌ ಪ್ರಸಾರ ಭಾರತಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ದಿಶಾ ಕಮ್ಯೂನಿಕೇಷನ್ಸ್‌ ಕಟಪಾಡಿ, ಸೃಷ್ಟಿ ಕ್ರಿಯೇಷನ್ಸ್‌ ಉಡುಪಿ, ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಚಲನಚಿತ್ರ ಅಭಿನಯ ತರಬೇತಿ ಕಾರ್ಯಾಗಾರವು ಕಾಪು ವಿದ್ಯಾನಿಕೇತನ ಸೆಮಿನಾರ್‌ ಹಾಲ್‌ನಲ್ಲಿ ಜ.27ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಒಂದು ಶಾಲೆಯ ಕಥೆ ಚಿತ್ರದ ನಿರ್ಮಾಪಕಿ ವಿದ್ಯಾಲತಾ ಯು.ಶೆಟ್ಟಿ ಕಾರ್ಯಾಗಾರವನ್ನು ಉದ್ಘಾಟಿಸಲಿರುವರು. ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಪಿ.ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಚಿತ್ರನಿರ್ದೇಶಕ ಕೃಷ್ಣಪ್ರಸಾದ್‌ ಉಪ್ಪಿನಕೋಟೆ, ಸಮಾಜ ಸೇವಕಿ ವೈಶಾಲಿ ಸತೀಶ್‌ ಶೆಟ್ಟಿ, ಚೌಕಿ ಚಲನಚಿತ್ರದ ನಿರ್ದೇಶಕ ಜಯಪ್ರಕಾಶ್‌ ಸಿ.ಎಸ್‌, ನಿಲುಕದ ನಕ್ಷತ್ರ ಚಲನಚಿತ್ರ ನಿರ್ದೇಶಕ ಗಣಿದೇವ್‌ ಕಾರ್ಕಳ ಮುಖ್ಯಅತಿಥಿಗಳಾಗಿ ಭಾಗವಹಿಸಲಿರುವರು.

ಇದೇ ಸಂದರ್ಭ ಒಂದು ಶಾಲೆಯ ಕಥೆ ಕನ್ನಡ ಚಲನಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯಲಿದೆ ಎಂದು ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ  ಪ್ರಕಟನೆಯಲ್ಲಿ ತಿಳಿಸಿದ್ದಾರೆ.