ಪ್ರತಿಯೊಂದನ್ನು ಧನಾತ್ಮಕವಾಗಿ ಸ್ವೀಕರಿಸುವ ಗುಣವಿರಲಿ: ಡಾ. ನಂದ ಕಿಶೋರ್

ಹಿರಿಯಡಕ: ಹಿರಿಯಡಕದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ವಠಾರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ “ರಾಷ್ಟ್ರ, ರಾಷ್ಟ್ರೀಯತೆ ಹಾಗೂ ಯುವಜನತೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮಾಹೆಯ ಹಿರಿಯ ಉಪನ್ಯಾಸಕ ಡಾ. ನಂದ ಕಿಶೋರ್ ಅವರು ಮಾತನಾಡಿ, ‘ನಮ್ಮ ದೇಶದ ಸನಾತನ ಧರ್ಮದಂತೆ ಎಲ್ಲವನ್ನು ತನ್ನಲ್ಲಿ ಸ್ವೀಕರಿಸುವ ಗುಣವನ್ನು ಇಂದಿನ ಯುವಕರು ಹೊಂದುವಂತಾಗಬೇಕು ಎಂದು ಹೇಳಿದರು. ನೆಹರು ಯುವ ಕೇಂದ್ರ ಉಡುಪಿಯ ಮಾರ್ಗದರ್ಶನದಲ್ಲಿ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಇನ್ನಿತರ ಸಂಘಟನೆಗಳಾದ ಸ್ಥಳೀಯ ವಿಶ್ವ ಹಿಂದೂಪರಿಷತ್ ಭಜರಂಗದಳ, […]
ಬಸ್ರೂರು ಮಾರ್ಗೋಳಿ ರಾಜ್ಯ ಹೆದ್ದಾರಿಯಲ್ಲಿ ಅಪಘಾತ, ಮಹಿಳೆ ಸಾವು

ಕುಂದಾಪುರ: ಬಸ್ರೂರು ಮಾರ್ಗೋಳಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮಹಿಳೆಯೊರ್ವರು ತೀವೃವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮೃತರನ್ನು ಮಹಿಳೆಯನ್ನು ಕೋಡಿ ನಿವಾಸಿ ಮೈಮೂನ(50) ಎಂದು ಗುರುತಿಸಲಾಗಿದೆ. ಗುರುವಾರ ತಮ್ಮ ತವರು ಮನೆಯಾದ ಗುಲ್ವಾಡಿಯ ದರ್ಗಾಕ್ಕೆ ಪೂಜೆಗೆ ತೆರಳಿದ್ದ ಅವರು ಪತಿಯೊಂದಿಗೆ ಬಸ್ರೂರು ಮಾರ್ಗವಾಗಿ ಕೋಡಿಗೆ ಹಿಂತಿರುಗುತ್ತಿದ್ದ ವೇಳೆ ಮಾರ್ಗೋಳಿ ಬಳಿಯಲ್ಲಿ ಶಿವಮೊಗ್ಗ ಕಡೆಯಿಂದ ಸರಕು ತುಂಬಿಕೊಂಡು ಬರುತ್ತಿದ್ದ 10 ಚಕ್ರದ ಲಾರಿ ಸ್ಕೂಟರ್‌ಗೆ ಡಿಕ್ಕಿ […]
ಜ. 27ರಿಂದ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ

ಕಾರ್ಕಳ: ಅತ್ತೂರು ಸಂತಲಾರೆನ್‌ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಜ. 27-31ರ ವರೆಗೆ ನಡೆಯಲಿದೆ ಎಂದು ಸಂತ ಲಾರೆನ್ಸ್ ಬಸಿಲಿಕದ ನಿರ್ದೇಶಕ ಫಾ. ಜಾರ್ಜ್ ಡಿಸೋಜ ಜ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಾರ್ಷಿಕ ಮಹೋತ್ಸವಕ್ಕೆ ಸಂಬಂಧಿಸಿದ ಸರ್ವರೀತಿಯ ಸಿದ್ಧತೆಗಳು ನಡೆಯುತ್ತಿಿದೆ. ಈ ಬಾರಿ ಕೊಂಕಣಿ ‘ಭಾಷೆಯಲ್ಲಿ ಒಟ್ಟು 35 ದಿವ್ಯ ಬಲಿಪೂಜೆಗಳು. ಕನ್ನಡದಲ್ಲಿ 11 ಬಲಿಪೂಜೆ ನಡೆಯಲಿದೆ. ಮಂಗಳೂರು, ಶಿವಮೊಗ್ಗ, ಬೆಳ್ತಂಗಡಿ, ಮೈಸೂರು ಹಾಗೂ ಉಡುಪಿ ‘ಧರ್ಮಕ್ಷೇತ್ರದ ‘ಧರ್ಮಾಧ್ಯಕ್ಷರು ಬಲಿಪೂಜೆ ಮಾಡಲಿದ್ದಾರೆ. ಭಿಕ್ಷಾಟನೆ ಇಲ್ಲ: ವಾರ್ಷಿಕ ಮಹೋತ್ಸವದಲ್ಲಿದ್ದ ಭಿಕ್ಷಾಟನೆಯನ್ನು ಈ […]