ಜಿಲ್ಲೆಯಲ್ಲಿ 3,08,070 ಮಂದಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ  – ಜಿಲ್ಲಾಧಿಕಾರಿ

ಉಡುಪಿ:- ಜಿಲ್ಲೆಯಲ್ಲಿ ಫೆಬ್ರವರಿ 8 ರಂದು ರಾಷ್ಟ್ರೀಯ ಜಂತಹುಳು ನಿವಾರಣಾ ದಿನಾಚರಣೆ ಆಚರಿಸಲಾಗುತ್ತಿದ್ದು, 1 ರಿಂದ 19 ವರ್ಷದೊಳಗಿನ ಒಟ್ಟು 3,08,070 ಮಂದಿಗೆ ಜಂತುಹುಳು ನಿವಾರಣೆಯ ಆಲ್ಬೆಂಡಝೋಲ್ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಅವರು ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಪೌಷ್ಠಿಕಾಂಶದಿಂದ ಕೂಡಿದ ಆಹಾರವನ್ನು ಸೇವಿಸಿದರೂ ಸಹ ಜಂತುಹುಳುಗಳ ಬಾಧೆಯಿಂದ ಮಕ್ಕಳಲ್ಲಿ ಅಪೌಷ್ಠಿಕತೆ ಹಾಗೂ ರಕ್ತಹೀನತೆ ಉಂಟಾಗಿ ಮಕ್ಕಳ […]

ಜಿಲ್ಲೆಯಲ್ಲಿ 77722 ಮಕ್ಕಳಿಗೆ ಪೋಲಿಯೋ ಹನಿ – ಜಿಲ್ಲಾಧಿಕಾರಿ

ಉಡುಪಿ:ಜಿಲ್ಲೆಯಲ್ಲಿ ಫೆಬ್ರವರಿ 3 ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 77722 ಮಕ್ಕಳಿಗೆ ಪೋಲಿಯೋ ನೀಡುವ ಗುರಿ ಇದ್ದು, 677 ಬೂತ್‍ಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಅವರು ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಬಾರಿ ಫೆಬ್ರವರಿ 3 ರಂದು ಒಂದೇ ಹಂತದಲ್ಲಿ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ಯಾವುದೇ […]

ಕೋಟದಲ್ಲಿ ನಡೆದ ಜಾನುವಾರು ಉತ್ಸವ; ಜಿಲ್ಲೆಯಲ್ಲೇ ಐತಿಹಾಸಿಕ

ಉಡುಪಿ ಜಿಲ್ಲಾಮಟ್ಟದ ಜಾನುವಾರು ಉತ್ಸವ ಜ.13ರಂದು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕೋಟದ ಶಾಂಭವಿ ಹಿ.ಪ್ರಾ. ಶಾಲೆ ಮೈದಾನದಲ್ಲಿ  ಯಶಸ್ವಿಯಾಗಿ ಜರಗಿತು .ಗ್ರಾಮೀಣ ಭಾಗದ ರೈತರ ಹೈನುಗಾರಿಕೆ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಹಾಗೂ ಯುವ ಜನತೆಯನ್ನು ಉತ್ತೇಜಿಸುವ ಮತ್ತು ಕೃಷಿಕರಿಗೆ ಸರಕಾರದಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಮಣೂರು- ಪಡುಕರೆಯ ಶಿವಮೂರ್ತಿ ಉಪಾಧ್ಯರ ಮನೆಯಲ್ಲಿ 16ಕರುಗಳಿಗೆ ಜನ್ಮ ನೀಡಿದ ಅತ್ಯಂತ ಹಿರಿಯ ದನವೊಂದಕ್ಕೆ ಕೋಟದ ಪುಣ್ಯಕೋಟಿ ಎನ್ನುವ ಬಿರುದು ನೀಡಿ ಪೂಜೆ ಸಲ್ಲಿಸುವ […]

ಜ.18ರಿಂದ ಮಲ್ಪೆ ಕಡಲ ಕಿನಾರೆಯಲ್ಲಿ ಅಂತರರಾಷ್ಟ್ರೀಯ ಬೀಚ್ ದ್ರಾಕ್ಷಾರಸ ಉತ್ಸವ

ಉಡುಪಿ: ಅಂತರರಾಷ್ಟ್ರೀಯ ಬೀಚ್ ದ್ರಾಕ್ಷಾರಸ ಉತ್ಸವ ಮಲ್ಪೆ ಕಡಲ ಕಿನಾರೆಯಲ್ಲಿ ಜ.18ರಿಂದ 20ರ ವರೆಗೆ ನಡೆಯಲಿದೆ.‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ. ಸೋಮು ಈ ಕುರಿತು ಮಾಹಿತಿ ನೀಡಿ,  ಕರ್ನಾಟಕದಲ್ಲಿ ವೈನ್ ಉತ್ಪಾದನೆಗೆ ಸೂಕ್ತವಾದ ದ್ರಾಕ್ಷಿ ತಳಿಗಳನ್ನು ಬೆಳೆಯಲು ಮತ್ತು ರಾಜ್ಯದ ವೈನ್ ತಯಾರಿಕೆಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಿಕೊಡುವುದು ಈ ಉತ್ಸವದ ಮುಖ್ಯ ಉದ್ದೇಶವಾಗಿದೆ ಎಂದರು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಸುಮಾರು 10ರಿಂದ 12 ವೈನರಿಗಳು ಭಾಗವಹಿಸುವರು. […]

ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣ: ಐಎನ್ ಎಸ್ ಕೊಚ್ಚಿ ಯುದ್ಧ ನೌಕೆಯಿಂದ ಸಮುದ್ರದ ತಳದಲ್ಲಿ ಶೋಧ

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ 34 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಯಾವುದೇ ಅವಘಡಕ್ಕೆ ತುತ್ತಾಗಿ ಸಮುದ್ರದೊಳಗೆ ಮುಳುಗಿರಬಹುದೆಂಬ ಸಂಶಯದ ಮೇರೆಗೆ ಭಾರತೀಯ ನೌಕಾ ಪಡೆ ತನ್ನ ಐಎನ್ಎಸ್ ಕೊಚ್ಚಿ ಎಂಬ ಯುದ್ಧ ನೌಕೆಯ ಮೂಲಕ ಸಮುದ್ರ ತಳಭಾಗದಲ್ಲಿ ಶೋಧಕಾರ್ಯ ಆರಂಭಿಸಿದೆ. ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟು ಮತ್ತು ಅದರಲ್ಲಿದ್ದ ಮಾಲೀಕ ಚಂದ್ರಶೇಖರ ಕೋಟ್ಯಾನ್ ಸೇರಿ 7 ಮಂದಿ ಮೀನುಗಾರರು ಡಿ.15ರಂದು ಮಧ್ಯರಾತ್ರಿ […]