ಜ. 27ರಿಂದ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕದ ವಾರ್ಷಿಕ ಮಹೋತ್ಸವ 

ಕಾರ್ಕಳ: ಅತ್ತೂರು ಸಂತಲಾರೆನ್‌ಸ್‌ ಬಸಿಲಿಕದ ವಾರ್ಷಿಕ ಮಹೋತ್ಸವ ಜ. 27-31ರ ವರೆಗೆ ನಡೆಯಲಿದೆ ಎಂದು ಸಂತ ಲಾರೆನ್‌ಸ್‌ ಬಸಿಲಿಕದ ನಿರ್ದೇಶಕ ಫಾ. ಜಾರ್ಜ್ ಡಿಸೋಜ ಜ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಾರ್ಷಿಕ ಮಹೋತ್ಸವಕ್ಕೆ ಸಂಬಂಧಿಸಿದ ಸರ್ವರೀತಿಯ ಸಿದ್ಧತೆಗಳು ನಡೆಯುತ್ತಿಿದೆ. ಈ ಬಾರಿ ಕೊಂಕಣಿ ‘ಭಾಷೆಯಲ್ಲಿ ಒಟ್ಟು 35 ದಿವ್ಯ ಬಲಿಪೂಜೆಗಳು. ಕನ್ನಡದಲ್ಲಿ 11 ಬಲಿಪೂಜೆ ನಡೆಯಲಿದೆ. ಮಂಗಳೂರು, ಶಿವಮೊಗ್ಗ, ಬೆಳ್ತಂಗಡಿ, ಮೈಸೂರು ಹಾಗೂ ಉಡುಪಿ ‘ಧರ್ಮಕ್ಷೇತ್ರದ ‘ಧರ್ಮಾಧ್ಯಕ್ಷರು ಬಲಿಪೂಜೆ ಮಾಡಲಿದ್ದಾರೆ.
ಭಿಕ್ಷಾಟನೆ ಇಲ್ಲ:
ವಾರ್ಷಿಕ ಮಹೋತ್ಸವದಲ್ಲಿದ್ದ ಭಿಕ್ಷಾಟನೆಯನ್ನು ಈ ವರ್ಷ ಕಾನೂನು ಪ್ರಕಾರ ನಿಷೇಧಿಸಲಾಗಿದೆ. ರಾಜ್ಯ ಸರಕಾರದ ಪೊಲೀಸ್ ಮಹಾನಿರ್ದೇಶಕರು ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯ ಉಪನೀರೀಕ್ಷಕರು ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆಯಂತೆ ಸುತ್ತೋಲೆಯನ್ನು ಹೊರಡಿಸಿದ್ದಾಾರೆ. ಭಿಕ್ಷುಕರಿಗೆ ನೀಡುತ್ತಿಿದ್ದ ಹಣ ವಿತರಣೆಯನ್ನು ಕೂಡ ನಿಷೇಧಿಸಲಾಗಿದೆ ಎಂದರು.
ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಗಮಿಸುವ ‘ಭಕ್ತರ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಳೆಯ ಹಾಗೂ ಹೊಸ ಇಗರ್ಜಿಗಳ ಒಳಗಡೆ ಹಾಗೂ ಬಸಿಲಿಕದ ವಠಾರದಿಲ್ಲಿ ಹಲವು ಸಿಸಿ ಕ್ಯಾಾಮರಗಳನ್ನು ಹಾಕಲಾಗಿದೆ. ಹೊರಭಾಗದ ಸ್ಥಳಗಳಲ್ಲಿ ಸಿಸಿ ಕ್ಯಾಾಮರ ಅಳವಡಿಸಲು ಸ್ಥಳೀಯ ಆಡಳಿತಕ್ಕೆ ತಿಳಿಸಲಾಗಿದೆ ಎಂದು ತಿಳಿಸಿದರು.
ಚರ್ಚ್‌ನ ಸಹಾಯಕ ನಿರ್ದೇಶಕ ಫಾ. ಜೆನ್ಸಿಲ್ ಆಳ್ವ, ರಿಚಾರ್ಡ್ ಪಿಂಟೊ, ಜಾನ್ ಡಿಸೋಜಾ, ಸಂತೋಷ್ ಡಿಸೋಜಾ, ವಂದೇಶ್ ಮಥಯಾಸ್, ಲೀನಾ ಡಿಸಿಲ್ವಾ ಉಪಸ್ಥಿತರಿದ್ದರು.