ಎಂಟು ಮಂಗಗಳಲ್ಲಿ ಕೆಎಫ್ಡಿ ವೈರಸ್ ಪತ್ತೆ, ಆತಂಕ ಬೇಡ: ಜಿಲ್ಲಾಧಿಕಾರಿ
ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕಳೆದ ಸುಮಾರು ಹತ್ತು ದಿನಗಳಿಂದ ಮೃತಪಟ್ಟ 25ಕ್ಕೂ ಅಧಿಕ ಮಂಗಗಳಲ್ಲಿ 12 ಮಂಗಗಳ ಪರೀಕ್ಷಾ ವರದಿ ಪುಣೆಯಿಂದ ಬಂದಿದ್ದು, ಇವುಗಳಲ್ಲಿ ಎಂಟು ಮಂಗಗಳಲ್ಲಿ ಕ್ಯಾಸನೂರು ಫಾರೆಸ್ಟ್ ಡೀಸಿಸ್ (ಕೆಎಫ್ಡಿ-ಮಂಗನ ಕಾಯಿಲೆ)ನ ವೈರಸ್ ಪತ್ತೆಯಾಗಿದೆ ಎಂದು ಮಂಗನ ಕಾಯಿಲೆಯ ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ. ಕುಂದಾಪುರ ತಾಲೂಕಿನ ಶಿರೂರು, ಸಿದ್ಧಾಪುರ, ಹೊಸಂಗಡಿ, ಬೆಳ್ವೆ (2), ಕಂಡ್ಲೂರು, ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದ ಹೇರೂರು ಹಾಗೂ ಕಾರ್ಕಳ ತಾಲೂಕಿನ ಹಿರ್ಗಾನ ಪ್ರಾಥಮಿಕ […]
ದೇಶದಲ್ಲಿಂದು ಸೈನಿಕರಿಗೆ ಗೌರವ ಹೆಚ್ಚಿದೆ – ಮಾಜಿ ಯೋಧ ರಘುಪತಿ ರಾವ್
ಉಡುಪಿ; ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಸೈನಿಕರಿಗೆ ದೇಶದಲ್ಲಿಂದು ಗೌರವ ಹೆಚ್ಚಾಗುತ್ತಿದೆ ಎಂದು ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ರಘುಪತಿ ರಾವ್ ಸಂತಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಸೈನಿಕರ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚದ ಸದಸ್ಯೆಯರಿಂದ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಸಲ್ಲಿಸಲಾದ ಗೌರವಾರ್ಪಣೆಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಸೈನಿಕರ ಬಗ್ಗೆ ಸಾರ್ವಜನಿಕರಲ್ಲಿ ಹೆಮ್ಮೆಯನ್ನು ಕಾಣುತ್ತಿದ್ದೇವೆ. ಮೋದಿ ಅವರು ಮಾಜಿ […]
ಸಿದ್ದಾಪುರ: ಮೃತಪಟ್ಟ ಮಂಗನಲ್ಲಿ ಕೆಎಫ್ ಡಿ ವೈರಾಣು ಇರುವುದು ದೃಢ
ಉಡುಪಿ: ಕುಂದಾಪುರ ತಾಲ್ಲೂಕಿನ ಸಿದ್ದಾಪುರದಲ್ಲಿ ಮೃತಪಟ್ಟಿರುವ ಮಂಗನಲ್ಲಿ ಕೆಎಫ್ ಡಿ ವೈರಾಣು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ರೋಹಿಣಿ ತಿಳಿಸಿದ್ದಾರೆ ಸಿದ್ದಾಪುರದ ಮೃತಪಟ್ಟ ಮಂಗ ಒಂದರ ರಕ್ತದ ಮಾದರಿಯನ್ನು ಪುಣೆಯ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಈಗ ಆ ವರದಿ ಬಂದಿದ್ದು, ಮೃತ ಮಂಗನ ದೇಹದಲ್ಲಿ ಕೆಎಫ್ ಡಿ ವೈರಾಣು ಇರುವುದು ಖಚಿತಗೊಂಡಿದೆ. ಈ ನಿಟ್ಟಿನಲ್ಲಿ ಸಿದ್ದಾಪುರದ ಸುತ್ತಮುತ್ತಲ ಗ್ರಾಮದ ಜನರಿಗೆ ಮಂಗನ ಕಾಯಿಲೆ ಬಾರದಂತೆ ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ […]
ಯಾರು ಸಂವಿಧಾನವನ್ನು ಅರ್ಥಮಾಡಿಕೊಳ್ಳುತ್ತಾರೋ ಅವರು ಸಂವಿಧಾನವನ್ನು ಪಾಲಿಸಬಲ್ಲರು: ನ್ಯಾ| ಪ್ರಕಾಶ್ ಖಂಡೇರಿ
ಕುಂದಾಪುರ: ಯಾರು ಸಂವಿಧಾನವನ್ನು ಅರ್ಥಮಾಡಿಕೊಳ್ಳುತ್ತಾರೋ ಅವರು ಸಂವಿಧಾನವನ್ನು ಪಾಲಿಸಬಲ್ಲರು ಕೂಡಾ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ತನ್ನ ಕೊಡುಗೆಯನ್ನು ನೀಡುವ ವ್ಯಕ್ತಿಯೇ ನಿಜವಾದ ದೇಶಪ್ರೇಮಿ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶ ಪ್ರಕಾಶ್ ಖಂಡೇರಿ ಹೇಳಿದರು. ಅವರು ಸಮುದಾಯ, ಕಾನೂನು ಸೇವಾ ಸಮಿತಿ, ಬಾರ್ ಅಸೋಸಿಯೇಷನ್ ಮತ್ತು ಅಭಿಯೋಗ ಇಲಾಖೆ ಕುಂದಾಪುರ ಜೊತೆಯಾಗಿ ಹಮ್ಮಿಕೊಂಡ “ನಮ್ಮ ಸಂವಿಧಾನ- ಸಂವಿಧಾನ ಓದು” ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆಯನ್ನು ಓದಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಸುಮಂಗಲಾ […]
ಕಾರ್ಕಳ: ರಸ್ತೆ ಅಪಘಾತ ಒರ್ವ ಸಾವು
ಕಾರ್ಕಳ: ತಾಲೂಕಿನ ಅಯ್ಯಪ್ಪನಗರ ನೆಲ್ಲಿಗುಡ್ಡೆ ಎಂಬಲ್ಲಿ ಬುಧವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒರ್ವ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ದಿನೇಶ್ ಮೃತಪಟ್ಟವರು. ಹಿಂಬದಿ ಸವರರಾದ ಮುರುಗೇಶ್ ಹಾಗೂ ವೇಲು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಉಡುಪಿಯಿಂದ ಕಾರ್ಕಳ ಕಡೆಗೆ ತೆರಳುತ್ತಿದ್ದ ಸರಕಾರಿ ಬಸ್ಗೆ ದಿನೇಶ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದೆ. ಕಾರ್ಕಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ.