ಭಾರತ್ ಬಂದ್: ಉಡುಪಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹತ್ತಕ್ಕೂ ಅಧಿಕ ಕೇಂದ್ರ ಕಾರ್ಮಿಕ ಒಕ್ಕೂಟಗಳು ಜ. 8 ಮತ್ತು 9 ರಂದು ಎರಡು ದಿನಗಳ ಕಾಲ ಕರೆ ನೀಡಿರುವ ಭಾರತ್ ಬಂದ್’ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದ್ದು, ಜನಸಾಮಾನ್ಯರ ಮೇಲೆ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.   ಸಿಟಿ ಬಸ್ ಹಾಗೂ ಸರ್ವಿಸ್ ಬಸ್ ಗಳ ನೌಕರರ ಸಂಘ ಈಗಾಗಲೇ ಬಂದ್ ಗೆ ಬೆಂಬಲ ಸೂಚಿಸಿರುವುದರಿಂದ ನಾಳೆ ಹಾಗೂ ನಾಡಿದ್ದು ಖಾಸಗಿ ಬಸ್ […]

ಮಿಯ್ಯಾರು ಲವ-ಕುಶ ಕಂಬಳ: ವಿಜೇತರ ಪಟ್ಟಿ ಇಲ್ಲಿದೆ ನೋಡಿ

ಕಾರ್ಕಳ: ಅವಿಭಜಿತ ದ.ಕ. ಜಿಲ್ಲೆಯ, ಹೆಮ್ಮೆಯ 15ನೇ ವರ್ಷದ ಮಿಯಾರು “ಲವ – ಕುಶ” ಜೋಡುಕರೆ ಬಯಲು ಕಂಬಳ ಕೂಟ ಸೋಮವಾರ ಸಂಪನ್ನಗೊಂಡಿತು. ಕಂಬಳ ಫಲಿತಾoಶ ಇಲ್ಲಿದೆ:  ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :178 ಕನೆಹಲಗೆ: 3 ಜೊತೆ ,ಅಡ್ಡಹಲಗೆ: 3 ಜೊತೆ ,ಹಗ್ಗ ಹಿರಿಯ: 25 ಜೊತೆ ,ನೇಗಿಲು ಹಿರಿಯ: 25 ಜೊತೆ ,ಹಗ್ಗ ಕಿರಿಯ: 23 ಜೊತೆ ,ನೇಗಿಲು ಕಿರಿಯ: 99 ಜೊತೆ  ಒಟ್ಟು ಕೋಣಗಳ ಸಂಖ್ಯೆ : 178  ಜೊತೆ ಕನೆಹಲಗೆ:  ಪ್ರಥಮ: […]

ಸೂರಿಲ್ಲದ ಕುಟುಂಬಕ್ಕೆ ಬೇಕಿದೆ ನೆರವು:ನಿಮ್ಮ ಸಹಾಯವೇ ಈ ಕುಟುಂಬಕ್ಕೆ ಬೆಳಕು

ಉಡುಪಿ : ಕಟಪಾಡಿ ಕೋಟೆ ಗ್ರಾಮ ದೇವರತೋಟದ ನಾಟಿ ವೈದ್ಯ ದಿ.ಕೊರಗ ಶೆಟ್ಟಿ ಕುಟುಂಬ ವಾಸಿಸಲು ಒಂದು ಅಚ್ಚುಕಟ್ಟಾದ ಮನೆ ಇಲ್ಲದೆ ಕಳೆದ 70 ವರ್ಷಗಳಿಂದ ಕಷ್ಟದಿಂದ ದಿನ ಕಳೆಯುತ್ತಿದೆ .ಪ್ರಸ್ತುತ ಈ ಮನೆಯಲ್ಲಿ ವಾಸವಿರುವ ದಿ.ಕೊರಗ ಶೆಟ್ಟಿ ಅವರ ಸೊಸೆ ರಾಜೀವಿ ಶೆಟ್ಟಿ(70) ಅವರ ಮನೆ ಬಿದ್ದು, ಪ್ಲಾಸ್ಟಿಕ್‌ ಹಾಳೆ ಹೊದೆಸಿ ಬದುಕು ಸಾಗಿಸುತ್ತಿರುವುದನ್ನು ಮನಗಂಡ ಸಮಾಜ ಸೇವಕಿ ವೈಶಾಲಿ ಶೆಟ್ಟಿ ಅವರು ಕತಾರ್‌ ಬಂಟರ ಸಂಘದವರನ್ನು ಸಂಪರ್ಕಿಸಿದ್ದು, ಸ್ಪಂದಿಸಿದ ಸಂಘವು ಸದಸ್ಯ ನಿತ್ಯಾನಂದ ಶೆಟ್ಟಿ ಅವರ […]

ಅನಂತುvs ನುಸ್ರತ್ ಪ್ರೀತಿಗೆ ಪ್ರೇಕ್ಷಕ ಕ್ಲೀನ್ ಬೋಲ್ದ್:ಎರಡನೇ ವಾರವೂ ಸಿನಿಮಾ ಭರ್ಜರಿ ರನ್ನಿಂಗ್

ನಟ ವಿಜಯ್ ರಾಜ್ ಕುಮಾರ್ ಅಭಿನಯದ,ಸುಧೀರ್ ಶಾನುಭೋಗ್ ನಿರ್ದೇಶನದ  ಸುಂದರ ಜೀವನಪ್ರೀತಿಯ ಕಥಾನಕವುಳ್ಳ  “ಅನಂತು vs ನುಸ್ರತ್  ಸಿನಿಮಾ ಇದೀಗ ಎರಡನೆಯ ವಾರವೂ ಭರ್ಜರಿಯಾಗಿ ಓಡುತ್ತಿದೆ. ಕೆ.ಜಿ.ಎಫ್ ಸಿನಿಮಾದ ಅತೀ ಅಬ್ಬರದ ನಡುವೆ ಅನಂತು vs ನುಸ್ರತ್  ಸಿನಿಮಾವನ್ನು ಪ್ರೇಕ್ಷಕ ಕೈ ಹಿಡಿಯುತ್ತಾನಾ? ಎನ್ನುವ ಸಣ್ಣ ಪ್ರಶ್ನೆ ಈ ಹಿಂದೆ ಎಲ್ಲರಲ್ಲೂ ಇತ್ತು, ಆದ್ರೆ ಪ್ರೇಕ್ಷಕನ ಎದೆಯೊಳಗೆ ಅನಂತು, ನುಸ್ರತ್ ರ ತಿಳಿಯಾದ ಮೊಹೊಬತ್ ಸದ್ದಿಲ್ಲದೇನೇ ಹರಿದು ಸುದ್ದಿಯಾಗಿದೆ. ಅಂದ ಹಾಗೆ ಕರಾವಳಿಯವರಾದ ನಿರ್ದೇಶಕ ಸುಧೀರ್ ಶಾನುಭೋಗ್, ಅವರ […]

ಕ್ಯಾಟ್‌: ಉಡುಪಿಯ ‘ನಿರಂಜನ ಪ್ರಸಾದ್‌’ ರಾಷ್ಟ್ರಮಟ್ಟದ ಸಾಧನೆ

ಉಡುಪಿ: ಈ ಸಾಲಿನ ‘ಕ್ಯಾಟ್’ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಮಣಿಪಾಲದ ನಿರಂಜನ ಪ್ರಸಾದ್‌ ಶೇ 100 ಫಲಿತಾಂಶ ಪಡೆದು ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ಕ್ಯಾಟ್‌ ಪರೀಕ್ಷೆ ಬರೆದ 2.9 ಲಕ್ಷ ವಿದ್ಯಾರ್ಥಿಗಳ ಪೈಕಿ ದೇಶದ ಅತ್ಯುನ್ನತ ಅಂಕಗಳನ್ನು ಪಡೆದ 11 ಮಂದಿಯಲ್ಲಿ ಓರ್ವರಾಗಿದ್ದಾರೆ. ನಿರಂಜನ್ ಪ್ರಸಾದ್‌  ಕರ್ನಾಟಕದಿಂದ ಈ ಸಾಧನೆ ಮಾಡಿದ ಏಕೈಕ ವಿದ್ಯಾರ್ಥಿಯಾಗಿದ್ದಾರೆ.