ಭಾರತ್ ಬಂದ್: ಉಡುಪಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹತ್ತಕ್ಕೂ ಅಧಿಕ ಕೇಂದ್ರ ಕಾರ್ಮಿಕ ಒಕ್ಕೂಟಗಳು ಜ. 8 ಮತ್ತು 9 ರಂದು ಎರಡು ದಿನಗಳ ಕಾಲ ಕರೆ ನೀಡಿರುವ ಭಾರತ್ ಬಂದ್’ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದ್ದು, ಜನಸಾಮಾನ್ಯರ ಮೇಲೆ ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.
 
ಸಿಟಿ ಬಸ್ ಹಾಗೂ ಸರ್ವಿಸ್ ಬಸ್ ಗಳ ನೌಕರರ ಸಂಘ ಈಗಾಗಲೇ ಬಂದ್ ಗೆ ಬೆಂಬಲ ಸೂಚಿಸಿರುವುದರಿಂದ ನಾಳೆ ಹಾಗೂ ನಾಡಿದ್ದು ಖಾಸಗಿ ಬಸ್ ಗಳು ರಸ್ತೆಗೆ ಇಳಿಯುವ ಸಾಧ್ಯತೆ ಬಯುತೇಕ ಕಡಿಮೆ. ಖಾಸಗಿ ಬಸ್ ಗಳು ರಸ್ತೆಗೆ ಇಳಿಯದಿದ್ದರೆ ಉಡುಪಿಯಲ್ಲಿ ಬಹುತೇಕ ಬಂದ್ ಯಶಸ್ವಿಯಾಗಲಿದೆ. 
 
ಜನಜೀವನದಲ್ಲಿ ವ್ಯತ್ಯಯ:
ಖಾಸಗಿ ಬಸ್ ಗಳ ಓಡಾಟ ಇಲ್ಲದಿದ್ದರೆ ಜನರ ದೈನಂದಿನ ಚಟುವಟಿಕೆಗಳಲ್ಲೂ ಭಾರೀ ವ್ಯಾತ್ಯಾಸ ಆಗುವ ಸಾಧ್ಯತೆ ಇದೆ. ಖಾಸಗಿ ಬಸ್ ಗಳನ್ನೇ ಅವಲಂಬಿತರಾಗಿರುವ ಜಿಲ್ಲೆಯ ಜನತೆ, ಬಸ್ ಇರದಿದ್ದರೆ ಮನೆ ಬಿಟ್ಟು ಹೊರಬರುವ ಸಾಧ್ಯತೆ ಕಡಿಮೆ. ಹಾಗಾಗಿ ಎರಡು ದಿನಗಳ ಕಾಲ ಜಿಲ್ಲೆಯ ವ್ಯಾಪಾರ ವಹಿವಾಟಿನಲ್ಲೂ ಬಹಳಷ್ಟು ವ್ಯಾತ್ಯಾಸ ಆಗುವ ಸಾಧ್ಯತೆ ಇದೆ.
 
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ:
ಭಾರತ್ ಬಂದ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.