ಉಡುಪಿ : ಕಟಪಾಡಿ ಕೋಟೆ ಗ್ರಾಮ ದೇವರತೋಟದ ನಾಟಿ ವೈದ್ಯ ದಿ.ಕೊರಗ ಶೆಟ್ಟಿ ಕುಟುಂಬ ವಾಸಿಸಲು ಒಂದು ಅಚ್ಚುಕಟ್ಟಾದ ಮನೆ ಇಲ್ಲದೆ ಕಳೆದ 70 ವರ್ಷಗಳಿಂದ ಕಷ್ಟದಿಂದ ದಿನ ಕಳೆಯುತ್ತಿದೆ .ಪ್ರಸ್ತುತ ಈ ಮನೆಯಲ್ಲಿ ವಾಸವಿರುವ ದಿ.ಕೊರಗ ಶೆಟ್ಟಿ ಅವರ ಸೊಸೆ ರಾಜೀವಿ ಶೆಟ್ಟಿ(70) ಅವರ ಮನೆ ಬಿದ್ದು, ಪ್ಲಾಸ್ಟಿಕ್ ಹಾಳೆ ಹೊದೆಸಿ ಬದುಕು ಸಾಗಿಸುತ್ತಿರುವುದನ್ನು ಮನಗಂಡ ಸಮಾಜ ಸೇವಕಿ ವೈಶಾಲಿ ಶೆಟ್ಟಿ ಅವರು ಕತಾರ್ ಬಂಟರ ಸಂಘದವರನ್ನು ಸಂಪರ್ಕಿಸಿದ್ದು, ಸ್ಪಂದಿಸಿದ ಸಂಘವು ಸದಸ್ಯ ನಿತ್ಯಾನಂದ ಶೆಟ್ಟಿ ಅವರ ಮುಖಾಂತರ ರೂ.60 ಸಾವಿರ ಮತ್ತು ನಿತ್ಯಾನಂದ ಶೆಟ್ಟಿ ವೈಯಕ್ತಿಕ ಆಸಕ್ತಿಯಲ್ಲಿ 40 ಸಾವಿರ ರೂ, ಮಸ್ಕತ್ ಬಂಟರ ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ ಕಾಪು 50 ಸಾವಿರ ರೂ ಹಾಗೂ ಬಹರೈನ್ ಬಂಟರ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅವರ ಮುಖಂತರ 50 ಸಾವಿರ ರೂ ಚೆಕ್ ನ್ನು ರಾಜೀವಿ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು .ಈ ಸಂದರ್ಭ ವಿದ್ಯಾಲತಾ ಶೆಟ್ಟಿ, ಡಾ|ಯು.ಕೆ. ಶೆಟ್ಟಿ ಕಟಪಾಡಿ, ಮೂಡಬೆಟ್ಟು ಗುತ್ತು ಅಶೋಕ್ ಶೆಟ್ಟಿ, ನವೀನ್ ಶೆಟ್ಟಿ ಬೆಂಗಳೂರು, ಎ.ಬಿ. ಶೆಟ್ಟಿ ಬೆಂಗಳೂರು, ವೈಶಾಲಿ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಹರೀಶ್ ಶೆಟ್ಟಿ ಗೋವಾ, ರಾಜೀವಿ ಶೆಟ್ಟಿ ಮನೆಯವರು ಉಪಸ್ಥಿತರಿದ್ದರು.